ETV Bharat / bharat

ಕೆಕೆಆರ್​ನಿಂದ 5,550 ಕೋಟಿ ರೂಪಾಯಿ ಪಡೆದ ರಿಲಯನ್ಸ್ ಇಂಡಸ್ಟ್ರೀಸ್​​ ಲಿಮಿಟೆಡ್​​ - ಅಲಿಸ್ಸಮ್ ಏಷಿಯಾ ಹೋಲ್ಡಿಂಗ್ಸ್ 2

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ ಸಂಸ್ಥೆಯ ಅಂಗಸಂಸ್ಥೆಯಾದ ರಿಲಯನ್ಸ್ ರಿಟೇಲ್​ ವೆಂಚರ್ಸ್​ ಲಿಮಿಟೆಡ್​ನಿಂದ ಕೆಕೆಆರ್ 1.28ರಷ್ಟು ಷೇರುಗಳನ್ನು ಕೊಂಡುಕೊಂಡಿದೆ.

RIL
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​
author img

By

Published : Oct 15, 2020, 2:49 PM IST

ನವದೆಹಲಿ: ಜಾಗತಿಕ ಬಂಡವಾಳ ಹೂಡಿಕೆ ಸಂಸ್ಥೆಯಾದ ಕೊಲ್ಹ್​​ಬರ್ಗ್​​ ಕ್ರಾವಿಸ್ ರಾಬರ್ಟ್ಸ್ (ಕೆಕೆಆರ್​​​)ನಿಂದ 5,550 ಕೋಟಿ ರೂಪಾಯಿಯನ್ನು ಪಡೆದುಕೊಳ್ಳಲಾಗಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮಾಹಿತಿ ನೀಡಿದೆ.

ಕೊಲ್ಹ್​​ಬರ್ಗ್​​ ಕ್ರಾವಿಸ್ ರಾಬರ್ಟ್ಸ್ ಸಂಸ್ಥೆಯು ರಿಲಯನ್ಸ್ ಇಂಡಸ್ಟ್ರೀಸ್​ ಲಿಮಿಟೆಡ್​​ನ ಅಂಗಸಂಸ್ಥೆಯಾದ ರಿಲಯನ್ಸ್ ರಿಟೇಲ್​ ವೆಂಚರ್ಸ್​ ಲಿಮಿಟೆಡ್​​ (ಆರ್​ಆರ್​ವಿಎಲ್​)ನಲ್ಲಿ ಶೇಕಡಾ 1.28ರಷ್ಟು ಷೇರುಗಳನ್ನು ಕೊಳ್ಳುವುದಾಗಿ ಸೆಪ್ಟೆಂಬರ್ 23ರಂದು ಘೋಷಣೆ ಮಾಡಿತ್ತು.

ಇದರಂತೆ ಕೊಲ್ಹ್​​ಬರ್ಗ್​​ ಕ್ರಾವಿಸ್ ರಾಬರ್ಟ್ಸ್ ಸಂಸ್ಥೆಯ ಅಂಗಸಂಸ್ಥೆಯಾದ ಅಲಿಸ್ಸಮ್ ಏಷಿಯಾ ಹೋಲ್ಡಿಂಗ್ಸ್ 2 ಪ್ರೈವೇಟ್​​ ಲಿಮಿಟೆಡ್​​ನಿಂದ 5,550 ಕೋಟಿ ರೂಪಾಯಿಯನ್ನು ಪಡೆದುಕೊಳ್ಳಲಾಗಿದೆ ಎಂದು 81,348,479 ಈಕ್ವಿಟಿ ಷೇರುಗಳನ್ನು ಕೆಕೆಆರ್​​ಗೆ ನೀಡಲಾಗಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ತಿಳಿಸಿದೆ.

ರಿಲಯನ್ಸ್ ಇಂಡಸ್ಟ್ರೀಸ್​ ಅಂಗಸಂಸ್ಥೆಗಳಲ್ಲಿ ಕೆಕೆಆರ್​ ಹೂಡಿಕೆ ಮಾಡುತ್ತಿರುವುದು ಎರಡನೇ ಬಾರಿಯಾಗಿದ್ದು, ಇದಕ್ಕೂ ಮೊದಲು ರಿಲಯನ್ಸ್​ನ ಡಿಜಿಟಲ್​ ಅಂಗಸಂಸ್ಥೆಯಾದ ಜಿಯೋ ಪ್ಲಾಟ್​​ಫಾರ್ಮ್​ನಲ್ಲಿ ಶೇ2.32ರಷ್ಟು ಷೇರುಗಳನ್ನು 11,367 ಕೋಟಿ ರೂಪಾಯಿಗಳಿಗೆ ಖರೀದಿಸಿತ್ತು.

ರಿಲಯನ್ಸ್ ರಿಟೇಲ್​ ವೆಂಚರ್ಸ್​ ಲಿಮಿಟೆಡ್ ಸಂಸ್ಥೆಯು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ನ ಅಂಗಸಂಸ್ಥೆಯಾಗಿದ್ದು, ಸೂಪರ್ ಮಾರ್ಕೆಟ್, ವಿದ್ಯುನ್ಮಾನ ಸಾಮಗ್ರಿಗಳು, ಹೋಲ್​ಸೇಲ್ ವ್ಯಾಪಾರ, ಆನ್​ಲೈನ್ ದಿನಸಿ ವ್ಯಾಪಾರ ಮಾಡುವ ಜಿಯೋ ಮಾರ್ಟ್​ ಮುಂತಾದ ವ್ಯವಹಾರಗಳನ್ನು ಮಾಡುತ್ತಿದೆ.

ಸದ್ಯಕ್ಕೆ ರಿಲಯನ್ಸ್​ ವೇಗವಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಣೆ ಮಾಡಿಕೊಳ್ಳುತ್ತಿರುವುದು ಮಾತ್ರವಲ್ಲದೇ ಸಿಲ್ವರ್ ಲೇಕ್, ಗೂಗಲ್​, ಫೇಸ್​​ಬುಕ್ ಮುಂತಾದ ಪ್ರಸಿದ್ಧ ಉದ್ಯಮಗಳೊಂದಿಗೆ ಸಹಭಾಗಿತ್ವ ಹೊಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.