ETV Bharat / bharat

ಕೇವಲ 4 ಸಾವಿರ ರೂ.ಗೆ ಸ್ಮಾರ್ಟ್​ಫೋನ್​ ಹೊರ ತರಲಿರುವ ರಿಲಯನ್ಸ್​!

ಮುಂದಿನ ಎರಡು ವರ್ಷಗಳಲ್ಲಿ 200 ಮಿಲಿಯನ್​​​ ಸ್ಮಾರ್ಟ್​​ಫೋನ್ ಹೊರತರುವ ಯೋಜನೆ ಹಾಕಿಕೊಂಡಿದ್ದು, ಅದಕ್ಕಾಗಿ ಎಲ್ಲ ರೀತಿಯಲ್ಲೂ ತಯಾರಿ ನಡೆಸಿದೆ ಎಂದು ತಿಳಿದು ಬಂದಿದೆ.

Reliance smartphones
Reliance smartphones
author img

By

Published : Sep 22, 2020, 10:44 PM IST

ಮುಂಬೈ: ಟೆಲಿಕಾಂ ಇಂಡಸ್ಟ್ರೀಯಲ್ಲಿ ಈಗಾಗಲೇ ಮಹತ್ವದ ಹೆಜ್ಜೆ ಇಟ್ಟಿರುವ ರಿಲಯನ್ಸ್​​​ ಸದ್ಯ ಮತ್ತೊಂದು ಮಹತ್ವಾಕಾಂಕ್ಷಿ ಕಾರ್ಯಕ್ಕೆ ಕೈಹಾಕಲು ಯೋಚನೆ ಮಾಡಿದೆ.

ಮುಂದಿನ ಎರಡು ವರ್ಷಗಳಲ್ಲಿ 200 ಮಿಲಿಯನ್​​​ ಸ್ಮಾರ್ಟ್​​ಫೋನ್ ಹೊರತರುವ ಯೋಜನೆ ಹಾಕಿಕೊಂಡಿದ್ದು, ಅದಕ್ಕಾಗಿ ಎಲ್ಲ ರೀತಿಯಲ್ಲೂ ಸಜ್ಜಾಗುವಂತೆ ರಿಲಯನ್ಸ್​​ ಸ್ಥಳೀಯ ಪೂರೈಕೆದಾರರಿಗೆ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.

ಗೂಗಲ್​ ಆ್ಯಂಡ್ರಾಯ್ಡ್​​ ವ್ಯವಸ್ಥೆ ಜತೆ ಕಾರ್ಯನಿರ್ವಹಿಸಬಲ್ಲ ಕೇವಲ 4 ಸಾವಿರ ರೂ.ಗೆ ಲಭ್ಯವಾಗುವ ರೀತಿಯಲ್ಲಿ ಜಿಯೋ ಸ್ಮಾರ್ಟ್​ಫೋನ್​​ ಸಿದ್ಧಪಡಿಸಲು ನಿರ್ಧರಿಸಲಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ಈಗಾಗಲೇ ದೇಶಿ ಕಂಪನಿಗಳೊಂದಿಗೆ ಮಾತುಕತೆ ನಡೆದಿದೆ ಎನ್ನಲಾಗಿದೆ.

ಏರ್​​ಟೆಲ್​​ - ವೋಡಾಫೋನ್​ ಐಡಿಯಾ ಜತೆ ಪೋಸ್ಟ್​​ಪೇಯ್ಡ್​​ ಸಮರಕ್ಕಿಳಿದ ಜಿಯೋ!

ಮುಂದಿನ ಎರಡು ವರ್ಷಗಳಲ್ಲಿ 15 ಕೋಟಿಯಿಂದ 20 ಕೋಟಿ ಮೊಬೈಲ್​ ಮಾರಾಟ ಮಾಡುವ ಗುರಿ ಇಟ್ಟುಕೊಳ್ಳಲಾಗಿದ್ದು, ಪ್ರಮುಖವಾಗಿ 4ಜಿ ಮೊಬೈಲ್​ ಫಿಚರ್ ಮೊಬೈಲ್​ಗಳು ಇವಾಗಲಿವೆ ಎನ್ನಲಾಗಿದೆ. ರಿಲಯನ್ಸ್​ ಅಧ್ಯಕ್ಷ ಮುಖೇಶ್​ ಅಂಬಾನಿ ಮಾತನಾಡಿದ್ದು, ದೇಶದ ಸ್ಮಾರ್ಟ್​​ಫೋನ್​​ ಉದ್ಯಮವನ್ನು ದೇಶಿಕರೀಸುವ ಗುರಿ ಹೊಂದಿದ್ದಾಗಿ ತಿಳಿಸಿದ್ದಾರೆ. ಆದರೆ, ಇದಕ್ಕೆ ಸಂಬಂಧಿಸಿದಂತೆ ರಿಲಯನ್ಸ್​ನ ಯಾವುದೇ ಪ್ರತಿನಿಧಿಗಳು ಮಾಹಿತಿ ನೀಡಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.