ನಿಜಾಮಬಾದ್(ತೆಲಂಗಾಣ): ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಅಭಿಯಾನದ ಯಶಸ್ಸಿನ ನಂತರ ದೇಶದಲ್ಲಿ ಜನಸಂಖ್ಯೆ ನಿಯಂತ್ರಣ ಕಾನೂನು ಜಾರಿಯಾಗಬೇಕು, ಇಬ್ಬರು ಮಕ್ಕಳನ್ನ ಹೊಂದುವ ಕಾನೂನು ತರಬೇಕು ಎಂದು ಹೇಳಿರುವ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ಗೆ ಎಐಎಂಐಎಂ ನಾಯಕ ಅಸದುದ್ದೀನ್ ಓವೈಸಿ ತಿರುಗೇಟು ನೀಡಿದ್ದಾರೆ.
-
Real problem in country is unemployment, not population: Owaisi hits back at Mohan Bhagwat
— ANI Digital (@ani_digital) January 18, 2020 " class="align-text-top noRightClick twitterSection" data="
Read @ANI Story | https://t.co/RxAWli5z2P pic.twitter.com/UVQ6cAcELN
">Real problem in country is unemployment, not population: Owaisi hits back at Mohan Bhagwat
— ANI Digital (@ani_digital) January 18, 2020
Read @ANI Story | https://t.co/RxAWli5z2P pic.twitter.com/UVQ6cAcELNReal problem in country is unemployment, not population: Owaisi hits back at Mohan Bhagwat
— ANI Digital (@ani_digital) January 18, 2020
Read @ANI Story | https://t.co/RxAWli5z2P pic.twitter.com/UVQ6cAcELN
ದೇಶದಲ್ಲಿರುವ ನಿಜವಾದ ಸಮಸ್ಯೆ ನಿರುದ್ಯೋಗ, ಜನಸಂಖ್ಯೆ ಅಲ್ಲ ಎಂದಿದ್ದಾರೆ. ತೆಲಂಗಾಣದ ನಿಜಾಮಾಬಾದ್ನಲ್ಲಿ ಮಾತನಾಡಿರುವ ಅವರು, ನಿಮಗೆ ನಾಚಿಕೆ ಆಗಬೇಕು. ನನಗೆ ಇಬ್ಬರಿಗಿಂತ ಹೆಚ್ಚು ಮಕ್ಕಳಿದ್ದಾರೆ. ಅನೇಕ ಬಿಜೆಪಿ ನಾಯಕರಿಗೆ ಇಬ್ಬರಿಗಿಂತ ಹೆಚ್ಚು ಮಕ್ಕಳಿದ್ದಾರೆ. ಆರ್ಎಸ್ಎಸ್ಗೆ ಮುಸ್ಲಿಂ ಸಮುದಾಯದ ಜನಸಂಖ್ಯೆ ನಿಯಂತ್ರಿಸಬೇಕು ಎಂಬ ಉದ್ದೇಶವಿದೆ ಎಂದಿದ್ದಾರೆ.
ದೇಶದಲ್ಲಿ ಎಷ್ಟು ಯುವಕರಿಗೆ ಉದ್ಯೋಗ ನೀಡಲಾಗಿದೆ ತಿಳಿಸಿ ಎಂದು ಭಾಗವತ್ಗೆ ಅವರು ಪ್ರಶ್ನೆ ಮಾಡಿದ್ದಾರೆ. 2018ರಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆಯಿಂದ ಒಂದು ದಿನಕ್ಕೆ 36 ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.
ಇಂದು ಭಾರತದಲ್ಲಿರುವಷ್ಟು ಜನಸಂಖ್ಯೆ ಲಾಭಾಂಶವನ್ನು ಬೇರೆ ಯಾವುದೇ ದೇಶದಲ್ಲಿ ನೋಡಲಾಗುವುದಿಲ್ಲ. ಐದು ವರ್ಷಗಳ ಅಧಿಕಾರಾವಧಿಯಲ್ಲಿ ಯಾರಿಗೂ ಉದ್ಯೋಗವನ್ನು ಒದಗಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಇಬ್ಬರು ಮಕ್ಕಳ ನೀತಿಯನ್ನು ತರಲು ಆರ್‌ಎಸ್‌ಎಸ್ ಒತ್ತಾಯಿಸುತ್ತಿದೆ ಎಂದಿದ್ದಾರೆ. ಭಾರತದಲ್ಲಿ ಶೇಕಡಾ 60 ರಷ್ಟು ಜನಸಂಖ್ಯೆ 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರನ್ನು ಹೊಂದಿದೆ ಎಂದರು.