ನವದೆಹಲಿ: ಸಂಭವನೀಯ ಭಯೋತ್ಪಾದಕ ದಾಳಿಯನ್ನು ತಡೆಯುವಲ್ಲಿ ಭದ್ರತಾ ಪಡೆಗಳ ಕಾರ್ಯವೈಖರಿಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ ನಂತರ ಸಮುದ್ರದಿಂದ ಹೊರಹೊಮ್ಮುವ ಭಯೋತ್ಪಾದನೆ ಸೋಲಿಸಲು ಪಡೆ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಭಾರತೀಯ ನೌಕಾಪಡೆ ಶುಕ್ರವಾರ ತಿಳಿಸಿದೆ.
ಭಯೋತ್ಪಾದನೆಯ ಪ್ರತಿಯೊಂದು ಬೆದರಿಕೆ ಎದುರಿಸಲು, ಸಂಭವಿಸಬಹುದಾದ ಸಮಸ್ಯೆ ತಡೆಯಲು ನೌಕಾಪಡೆ ಸಿದ್ಧವಾಗಿದೆ ಎಂದು ಭಾರತೀಯ ನೌಕಾಪಡೆಯ ಉಪ ಮುಖ್ಯಸ್ಥ (ವೈಸ್ ಆಡ್ರಿಮಲ್) ಎಂ.ಎಸ್. ಪವಾರ್ ತಿಳಿಸಿದ್ದಾರೆ.
ಸಮುದ್ರ ಪ್ರದೇಶದಿಂದ ಬರಬಹುದಾದಂತಹ ಭಯೋತ್ಪಾದನೆಯ ಪ್ರತಿಯೊಂದು ಬೆದರಿಕೆಯನ್ನು ಎದುರಿಸಲು ಭಾರತೀಯ ನೌಕಾಪಡೆ ಎಲ್ಲ ಪಾಲುದಾರರ ಸಹಕಾರದೊಂದಿಗೆ ಸಿದ್ಧವಾಗಿದೆ ಎಂದು ನಾನು ದೇಶಕ್ಕೆ ಭರವಸೆ ನೀಡಲು ಬಯಸುತ್ತೇನೆ ಎಂದು ಪವಾರ್ ವಿಶೇಷ ಸಂವಾದದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಗುಂಪು ಜಮ್ಮು ಮತ್ತು ಕಾಶ್ಮೀರದಲ್ಲಿ ದುಷ್ಕೃತ್ಯಕ್ಕೆ ಮುಂದಾಗಿದ್ದು, ಕೃತ್ಯವನ್ನು ತಡೆಯೊಡ್ಡಿದ ಭದ್ರತಾ ಪಡೆಗಳನ್ನು ಗುರುವಾರದಂದು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದರು.
ಮುಂಬೈ ದಾಳಿಗೆ 12 ವರ್ಷ:
ನ. 26ಕ್ಕೆ ಮುಂಬೈ ದಾಳಿಗೆ 12 ವರ್ಷ ತುಂಬಲಿದೆ. ಮುಂಬೈ ಭಯೋತ್ಪಾದಕ ದಾಳಿಯು 2008ರ ನವೆಂಬರ್ 26ರಿಂದ ನಾಲ್ಕು ದಿನಗಳವರೆಗೆ 166 ಜನರನ್ನು ಕೊಂದು 300ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿತ್ತು. ಈ ಭೀಕರ ದಾಳಿಯಲ್ಲಿ 9 ಭಯೋತ್ಪಾದಕರು ಸಾವನ್ನಪ್ಪಿದ್ದರು ಮತ್ತು ಒಂಟಿಯಾಗಿ ಬದುಕುಳಿದ ಅಜ್ಮಲ್ ಅಮೀರ್ ಕಸಬ್ನ್ನು ಸೆರೆಹಿಡಿದು ಬಳಿಕ ಮರಣದಂಡನೆ ಶಿಕ್ಷೆ ವಿಧಿಸಲಾಯಿತು. ನಂತರ 2012ರ ನವೆಂಬರ್ 11ರಂದು ಕಸಬ್‌ನನ್ನು ಪುಣೆಯ ಯೆರವಾಡ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು.