ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಕೇಂದ್ರ ಸರ್ಕಾರಕ್ಕೆ ಬರೋಬ್ಬರಿ 1.76 ಲಕ್ಷ ಕೋಟಿ ಹಣ ವರ್ಗಾವಣೆ ಮಾಡಲು ನಿರ್ಧರಿಸಿದೆ. ರಿಸರ್ವ್ ಬ್ಯಾಂಕಿನ ಹೆಚ್ಚುವರಿ ಹಣ ಇದಾಗಿದ್ದು, ಮೋದಿ ಸರ್ಕಾರಕ್ಕೆ ವರ್ಗಾವಣೆಯಾಗಲಿದೆ.
-
Central Board of Reserve Bank of India today decided to transfer a sum of Rs 1,76,051 cr to GoI comprising of Rs 1,23,414 cr of surplus for year 2018-19&Rs 52,637 cr of excess provisions identified as per revised Economic Capital Framework adopted at meeting of Central Board.
— ANI (@ANI) August 26, 2019 " class="align-text-top noRightClick twitterSection" data="
">Central Board of Reserve Bank of India today decided to transfer a sum of Rs 1,76,051 cr to GoI comprising of Rs 1,23,414 cr of surplus for year 2018-19&Rs 52,637 cr of excess provisions identified as per revised Economic Capital Framework adopted at meeting of Central Board.
— ANI (@ANI) August 26, 2019Central Board of Reserve Bank of India today decided to transfer a sum of Rs 1,76,051 cr to GoI comprising of Rs 1,23,414 cr of surplus for year 2018-19&Rs 52,637 cr of excess provisions identified as per revised Economic Capital Framework adopted at meeting of Central Board.
— ANI (@ANI) August 26, 2019
ಆರ್‌ಬಿಐನ ಹೆಚ್ಚುವರಿ ಹಣ ಕೇಂದ್ರ ಸರ್ಕಾರಕ್ಕೆ ವರ್ಗಾವಣೆ ಮಾಡುವಂತೆ ಆರ್‌ಬಿಐನ ಮಾಜಿ ಗವರ್ನರ್ ಬಿಮಾಲ್ ಜಲಾನ್ ಅವರ ನೇತೃತ್ವದ ಉನ್ನತ ಮಟ್ಟದ ಸಮಿತಿ ಶಿಫಾರಸು ಮಾಡಿತ್ತು. ಇದೀಗ ಆರ್‌ಬಿಐ ಮಂಡಳಿ ಅದಕ್ಕೆ ಅನುಮೋದನೆ ನೀಡಿದೆ.
2018-19ನೇ ವರ್ಷದ ಹೆಚ್ಚುವರಿ ಹಣವಾದ 1,23,414 ಕೋಟಿ ಮತ್ತು ಇಸಿಎಫ್ನ ಹೆಚ್ಚುವರಿಯ 52,637 ಕೋಟಿ ಹಣವನ್ನು ಸೇರಿಸಿ ಒಟ್ಟು 1,76,051 ಕೋಟಿ ಹಣವನ್ನು ಕೇಂದ್ರಕ್ಕೆ ವರ್ಗಾವಣೆ ಆಗಲಿದೆ.
ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್‌ಬಿಐ) ಮೀಸಲು ನಿಧಿಯ ಪ್ರಮಾಣ ನಿರ್ಧರಿಸಲು ರಚಿಸಲಾಗಿರುವ ಬಿಮಲ್ ಜಲನ್ ಸಮಿತಿಯ ವರದಿಯು ಸೋಮವಾರ (ಆಗಸ್ಟ್ 26ರಂದು) ಸಲ್ಲಿಕೆ ಮಾಡಿತ್ತು.
ಆರ್ಥಿಕ ವ್ಯವಹಾರಗಳ ಮಾಜಿ ಕಾರ್ಯದರ್ಶಿ ರಾಕೇಶ್ ಮೋಹನ್, ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್, ಆರ್‌ಬಿಐ ಡೆಪ್ಯುಟಿ ಗವರ್ನರ್ ಎನ್.ಎಸ್. ವಿಶ್ವನಾಥನ್, ಆರ್‌ಬಿಐನ ಮಂಡಳಿ ಸದಸ್ಯರಾಗಿರುವ ಭರತ್ ದೋಷಿ ಮತ್ತು ಸುಧೀರ್ ಮಂಕಡ್ ಅವರು ಸಮಿತಿಯಲ್ಲಿದ್ದರು.ಆರ್‌ಬಿಐ ಬಳಿ ಇರುವ ₹ 9.6 ಲಕ್ಷ ಕೋಟಿ ಹೆಚ್ಚುವರಿ ಬಂಡವಾಳದ ಒಂದು ಮೂರಂಶದಷ್ಟು ಮೊತ್ತವನ್ನು ಸರ್ಕಾರದ ಖಜಾನೆಗೆ ವರ್ಗಾಯಿಸಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು.