ETV Bharat / bharat

ಮತ್ತೆ ಬಡ್ಡಿದರ ಕಡಿತ ಸಾಧ್ಯತೆ: ಗೃಹ, ವಾಹನ ಸಾಲದ ಬಡ್ಡಿದರ ಇಳಿಕೆ..! -

ಲೋಕಸಭಾ ಚುನಾವಣೆ ನಂತರದ ಹಾಗೂ ಎನ್​ಡಿಎ ಎರಡನೇ ಅವಧಿಯಲ್ಲಿ ನಡೆಯುತ್ತಿರುವ ಮೊದಲ ನೀತಿ ನಿರ್ಧಾರದ ಸಭೆ ಇದಾಗಲಿದೆ. ವಿತ್ತೀಯ ನೀತಿ ಸಮಿತಿಯು (ಎಂಪಿಸಿ) ರೆಪೊ ದರವನ್ನು ಶೇ 5.75ಕ್ಕೆ ಇಳಿಸಲಿದೆ. ಇದರಿಂದ ಈ ವರ್ಷದಲ್ಲಿ ಇದುವರೆಗೆ ಬಡ್ಡಿ ದರ ಕಡಿತದ ಪ್ರಮಾಣವು ಶೇ 0.75ರಷ್ಟು ಆಗಲಿದೆ ಎಂದು ಡಿಬಿಎಸ್‌ ಸಂಶೋಧನಾ ವರದಿಯಲ್ಲಿ ತಿಳಿಸಲಾಗಿದೆ.

ಸಾಂದರ್ಭಿಕ ಚಿತ್ರ
author img

By

Published : Jun 1, 2019, 8:47 AM IST

ಮುಂಬೈ: ಆರ್ಥಿಕ ವೃದ್ಧಿ ದರವು ಕ್ಷೀಣಿಸುತ್ತಿರುವುದರಿಂದ ಭಾರತೀಯ ರಿಸರ್ವ್​ ಬ್ಯಾಂಕ್ ಜೂನ್ ತಿಂಗಳ ದ್ವೈಮಾಸಿಕ ಹಣಕಾಸು ನೀತಿಯಲ್ಲಿ ಅಲ್ಪಾವಧಿ ಬಡ್ಡಿ (ರೆಪೊ) ದರಗಳನ್ನು ಇಳಿಕೆ ಮಾಡಲಿದೆ ಎಂದು ಅಂದಾಜಿಸಲಾಗಿದೆ.

ಪ್ರಸಕ್ತ ಹಣಕಾಸು ವರ್ಷದ ಎರಡನೇ ದ್ವೈಮಾಸಿಕ ಹಣಕಾಸು ನೀತಿಯನ್ನು ಆರ್​ಬಿಐ ಜೂನ್ 6ರಂದು ಪ್ರಕಟಿಸಲಿದ್ದು, ಈ ವೇಳೆ ರೆಪೊ ದರದಲ್ಲಿ ಶೇ 0.25ರಷ್ಟು ಕಡಿತವಾಗುವ ಸಾಧ್ಯತೆ ಹೆಚ್ಚಾಗಿದೆ.

ಲೋಕಸಭಾ ಚುನಾವಣೆ ನಂತರದ ಹಾಗೂ ಎನ್​ಡಿಎ ಎರಡನೇ ಅವಧಿಯಲ್ಲಿ ನಡೆಯುತ್ತಿರುವ ಮೊದಲ ನೀತಿ ನಿರ್ಧಾರದ ಸಭೆ ಇದಾಗಲಿದೆ. ವಿತ್ತೀಯ ನೀತಿ ಸಮಿತಿಯು (ಎಂಪಿಸಿ) ರೆಪೊ ದರವನ್ನು ಶೇ 5.75ಕ್ಕೆ ಇಳಿಸಲಿದೆ. ಇದರಿಂದ ಈ ವರ್ಷದಲ್ಲಿ ಇದುವರೆಗೆ ಬಡ್ಡಿ ದರ ಕಡಿತದ ಪ್ರಮಾಣವು ಶೇ 0.75ರಷ್ಟು ಆಗಲಿದೆ ಎಂದು ಡಿಬಿಎಸ್‌ ಸಂಶೋಧನಾ ವರದಿಯಲ್ಲಿ ತಿಳಿಸಲಾಗಿದೆ.

2019ರಲ್ಲಿ ಆರ್​ಬಿಐ ಇದುವರೆಗೆ ಫೆಬ್ರವರಿ ಹಾಗೂ ಏಪ್ರಿಲ್​ ತಿಂಗಳಲ್ಲಿ ತಲಾ ಶೇ 0.25ರಷ್ಟು ಬಡ್ಡಿದರ ಇಳಿಸಿತ್ತು. ಆರ್​ಬಿಐ ಶೇ 0.35ಯಿಂದ ಶೇ 0.50ರವರೆಗೆ ಬಡ್ಡಿದರ ಕಡಿತ ಮಾಡುವ ಸಾಧ್ಯತೆ ಇದೆ ಎಂದು ಸ್ಟೇಟ್ ಬ್ಯಾಂಕ್​ ಇಂಡಿಯಾದ ಆರ್ಥಿಕ ಸಂಶೋಧನಾ ಇಲಾಖೆ ಅಂದಾಜಿಸಿದೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.