ETV Bharat / bharat

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮುದ್ರಣಗೊಂಡಿಲ್ಲ ಒಂದೇ ಒಂದು Rs 2,000 ನೋಟ್​...  ಮತ್ತೆ ಆಗುತ್ತಾ ಬ್ಯಾನ್​!? - ಭಾರತೀಯ ರಿಜರ್ವ್​ ಬ್ಯಾಂಕ್

ಪ್ರಸಕ್ತ ಸಾಲಿನ ಅರ್ಥಿಕ ವರ್ಷದಲ್ಲಿ ಒಂದೇ ಒಂದು 2000 ಸಾವಿರ ಮುಖಬೆಲೆಯ ನೋಟ್​ ಮುದ್ರಣಗೊಂಡಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.

ಎರಡು ಸಾವಿರ ಮುಖಬೆಲೆ ನೋಟ್​
author img

By

Published : Oct 15, 2019, 7:27 PM IST

Updated : Oct 16, 2019, 2:27 PM IST

ಮುಂಬೈ: 2016ರ ನವೆಂಬರ್​ ತಿಂಗಳಲ್ಲಿ ಏಕಾಏಕಿಯಾಗಿ ಹಳೇ 500 ರೂ. ಹಾಗೂ ಸಾವಿರ ಮುಖಬೆಲೆ ನೋಟ್​ ಬ್ಯಾನ್​ ಮಾಡಿದ ಬಳಿಕ ಹೊಸದಾಗಿ ಐನೂರು, ಎರಡು ಸಾವಿರ ಮುಖಬೆಲೆಯ ನೋಟ್ ಮುದ್ರಣ ಮಾಡಿ ಕೇಂದ್ರ ಸರ್ಕಾರ​ ಚಲಾವಣೆಗೆ ತಂದಿದೆ.

ಆದರೆ, ಸದ್ಯದ ಮಾಹಿತಿ ಪ್ರಕಾರ ಪ್ರಸಕ್ತ ಸಾಲಿನ ಆರ್ಥಿಕ ವರ್ಷದಲ್ಲಿ ಭಾರತೀಯ ರಿಜರ್ವ್​ ಬ್ಯಾಂಕ್​​​ನಿಂದ ಒಂದೇ ಒಂದು ಎರಡು ಸಾವಿರ ಮುಖಬೆಲೆ ನೋಟ್​ ಮುದ್ರಣಗೊಂಡಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ. 2016-17ರ ಆರ್ಥಿಕ ವರ್ಷದಲ್ಲೇ ಬರೋಬ್ಬರಿ 3,542.991 ಮಿಲಿಯನ್​ ನೋಟ್​ ಮುದ್ರಣಗೊಂಡಿದ್ದು, ತದನಂತರ 2017-18ರಲ್ಲಿ 111.507 ಮಿಲಿಯನ್​​​ ನೋಟ್​​ ಹಾಗೂ 2017-18ರಲ್ಲಿ 46.690 ಮಿಲಿಯನ್​ ನೋಟ್​ ಮುದ್ರಣವಾಗಿವೆ. ಆದರೆ, ಪ್ರಸಕ್ತ 2018-19ನೇ ಸಾಲಿನಲ್ಲಿ ಒಂದೇ ಒಂದು ನೋಟ್​ ಕೂಡ ಮುದ್ರಣವಾಗಿಲ್ಲ ಎಂಬ ಮಾಹಿತಿ, ಮಾಹಿತಿ ಕಾಯ್ದೆ ಹಕ್ಕಿನಡಿ ಲಭ್ಯವಾಗಿದೆ.

ಕಪ್ಪು ಹಣ ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಆರ್​​ಬಿಐ ದೊಡ್ಡ ಪ್ರಮಾಣದ ನೋಟ್​ ಮುದ್ರಣ ಮಾಡುತ್ತಿಲ್ಲ ಎನ್ನಲಾಗಿದ್ದು, ಆಂಧ್ರಪ್ರದೇಶ - ತಮಿಳುನಾಡು ಗಡಿಯಲ್ಲಿ ಕಳೆದ ಕೆಲ ತಿಂಗಳ ಹಿಂದೆ 2 ಸಾವಿರ ಮುಖಬೆಲೆಯ 6 ಕೋಟಿ ರೂ ಹಣ ಪತ್ತೆಯಾಗಿತ್ತು. ಜತೆಗೆ ಚುನಾವಣೆ ಸಂದರ್ಭದಲ್ಲಿ 2000 ಸಾವಿರ ಮುಖಬೆಲೆ ನೋಟ್​ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತಿರುವ ಕಾರಣಕ್ಕಾಗಿ ದೊಡ್ಡ ಪ್ರಮಾಣದ ನೋಟ್​​ ಮುದ್ರಣ ಮಾಡುವುದನ್ನ ನಿಲ್ಲಿಸಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಕೇಂದ್ರ ಸರ್ಕಾರ ಹಾಗೂ ಆರ್​ಬಿಐ ಸಹ 2 ಸಾವಿರ ಮುಖ ಬೆಲೆಯ ನೋಟುಗಳನ್ನ ಬ್ಯಾನ್​ ಮಾಡಲ್ಲ ಎಂದು ಸ್ಪಷ್ಟನೆ ಸಹ ನೀಡಿದೆ.

Intro:Body:

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮುದ್ರಣಗೊಂಡಿಲ್ಲ ಒಂದೇ ಒಂದು Rs 2,000 ನೋಟ್​... ಬ್ಯಾನ್​ ಆಗುತ್ತಾ!?

ಮುಂಬೈ: 2016ರ ನವೆಂಬರ್​ ತಿಂಗಳಲ್ಲಿ ಏಕಾಏಕಿಯಾಗಿ ಹಳೇ 500 ರೂ. ಹಾಗೂ ಸಾವಿರ ಮುಖಬೆಲೆ ನೋಟ್​ ಬ್ಯಾನ್​ ಮಾಡಿದ ಬಳಿಕ ಹೊಸದಾಗಿ ಐನೂರು, ಎರಡು ಸಾವಿರ ಮುಖಬೆಲೆಯ ನೋಟ್ ಮುದ್ರಣ ಮಾಡಿ ಕೇಂದ್ರ ಸರ್ಕಾರ​ ಚಲಾವಣೆಗೆ ತಂದಿದೆ. 

ಆದರೆ ಸದ್ಯದ ಮಾಹಿತಿ ಪ್ರಕಾರ ಪ್ರಸಕ್ತ ಸಾಲಿನ ಆರ್ಥಿಕ ವರ್ಷದಲ್ಲಿ ಭಾರತೀಯ ರಿಜರ್ವ್​ ಬ್ಯಾಂಕ್​​​ನಿಂದ ಒಂದೇ ಒಂದು ಎರಡು ಸಾವಿರ ಮುಖಬೆಲೆ ನೋಟ್​ ಮುದ್ರಣಗೊಂಡಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ. 2016-17ರ ಆರ್ಥಿಕ ವರ್ಷದಲ್ಲೇ ಬರೋಬ್ಬರಿ 3,542.991 ಮಿಲಿಯನ್​ ನೋಟ್​ ಮುದ್ರಣಗೊಂಡಿದ್ದು, ತದನಂತರ 2017-18ರಲ್ಲಿ 111.507 ಮಿಲಿಯನ್​​​ ನೋಟ್​​ ಹಾಗೂ  2017-18ರಲ್ಲಿ 46.690 ಮಿಲಿಯನ್​ ನೋಟ್​ ಮುದ್ರಣವಾಗಿವೆ. ಆದರೆ ಪ್ರಸಕ್ತ 2018-19ನೇ ಸಾಲಿನಲ್ಲಿ ಒಂದೇ ಒಂದು ನೋಟ್​ ಕೂಡ ಮುದ್ರಣವಾಗಿಲ್ಲ ಎಂಬ ಮಾಹಿತಿ ಮಾಹಿತಿ ಕಾಯ್ದೆ ಹಕ್ಕು ಅಡಿ ಲಭ್ಯವಾಗಿದೆ. 

ಕಪ್ಪು ಹಣ ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಆರ್​​ಬಿಐ ದೊಡ್ಡ ಪ್ರಮಾಣದ ನೋಟ್​ ಮುದ್ರಣ ಮಾಡುತ್ತಿಲ್ಲ ಎನ್ನಲಾಗಿದ್ದು, ಆಂಧ್ರಪ್ರದೇಶ-ತಮಿಳುನಾಡು ಗಡಿಯಲ್ಲಿ ಕಳೆದ ಕೆಲ ತಿಂಗಳ ಹಿಂದೆ 2 ಸಾವಿರ ಮುಖಬೆಲೆಯ 6 ಕೋಟಿ ರೂ ಹಣ ಪತ್ತೆಯಾಗಿತ್ತು. ಜತೆಗೆ ಚುನಾವಣೆ ಸಂದರ್ಭದಲ್ಲಿ 2000 ಸಾವಿರ ಮುಖಬೆಲೆ ನೋಟ್​ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತಿರುವ ಕಾರಣಕ್ಕಾಗಿ ದೊಡ್ಡ ಪ್ರಮಾಣದ ನೋಟ್​​ ಮುದ್ರಣ ಮಾಡುವುದನ್ನ ನಿಲ್ಲಿಸಿದೆ ಎಂದು ತಿಳಿಸಿದೆ.

Conclusion:
Last Updated : Oct 16, 2019, 2:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.