ETV Bharat / bharat

ಆರ್‌ಬಿಐನ 150 ಸಿಬ್ಬಂದಿ ಹೋಂ ಕ್ವಾರಂಟೈನ್​ನಲ್ಲಿದ್ದಾರೆ: ಶಕ್ತಿಕಾಂತ್ ದಾಸ್ - RBI Governor Shaktikanta Das

ಕೊರೊನಾ ವೈರಸ್​ ಹಿನ್ನೆಲೆ ರಿಸರ್ವ್ ಬ್ಯಾಂಕ್​ನ 150 ಸಿಬ್ಬಂದಿ ಹೋಂ ಕ್ವಾರಂಟೈನ್​ನಲ್ಲಿದ್ದಾರೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ದೆಹಲಿಯಲ್ಲಿ ನಡೆಸಿದ ಸುದ್ದಿಗೋಷ್ಠಿ ವೇಳೆ ತಿಳಿಸಿದರು.

RBI
RBI
author img

By

Published : Mar 27, 2020, 11:31 AM IST

Updated : Mar 27, 2020, 11:38 AM IST

ದೆಹಲಿ: ಮಹಾಮಾರಿ ಕೊರೊನಾಗೆ ಇಡೀ ದೇಶವೇ ತತ್ತರಿಸಿ ಹೋಗಿದ್ದು ಇದೀಗ ಆರ್‌ಬಿಐ ಸಿಬ್ಬಂದಿ ಮೇಲೆ ಕೂಡ ಕೋವಿಡ್​-19 ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಶಕ್ತಿಕಾಂತ್ ದಾಸ್ ತಿಳಿಸಿದರು.

ದೆಹಲಿಯ ಆರ್‌ಬಿಐ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊರೊನಾ ವೈರಸ್​ ಅರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದ್ದು, ರಿಸರ್ವ್ ಬ್ಯಾಂಕ್​ನ 150 ಸಿಬ್ಬಂದಿ ಹೋಂ ಕ್ವಾರಂಟೈನ್ ( ಮನೆಯಲ್ಲಿ ಪ್ರತ್ಯೇಕವಾಗಿ ವಾಸಿಸುವುದು) ​ನಲ್ಲಿದ್ದಾರೆ ಎಂದರು.

ಈಗಾಗಲೇ ಹಲವಾರು ರಾಷ್ಟ್ರಗಳು ಕೊರೊನಾ ವೈರಸ್​ನಿಂದ ಸಂಕಷ್ಟ ಎದುರಿಸುತ್ತಿದ್ದು, ಈ ಸಮಯದಲ್ಲಿ ಭಾರತದ ರಿಸರ್ವ್ ಬ್ಯಾಂಕ್‌ ಸಹ ಸದ್ಯದ ಅರ್ಥಿಕ ಸ್ಥಿತಿಗಳ ಕುರಿತು ಗಮನಹರಿಸುತ್ತಿದೆ. ಭಾರತದ ಹಣಕಾಸು ಮಾರುಕಟ್ಟೆಗಳು ಸಹ ತೀವ್ರ ಒತ್ತಡದಲ್ಲಿವೆ ಎಂದು ತಿಳಿಸಿದರು.

ದೇಶದಲ್ಲಿ ಈಗಾಗಲೇ 724 ಜನ ಕೊರೊನಾ ಸೋಂಕಿತರು ಕಂಡುಬಂದಿದ್ದು, 17 ಜನ ಸಾವನ್ನಪ್ಪಿದ್ದಾರೆ.

Last Updated : Mar 27, 2020, 11:38 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.