ETV Bharat / bharat

ಕಚ್ಚಾ ಹಾಲು ಒಳ್ಳೆಯದಕ್ಕಿಂತ ಹೆಚ್ಚು ಹಾನಿಯನ್ನುಂಟು ಮಾಡುತ್ತೆ!! - Bacteria with antimicrobial-resistant genes

ಚಿಲ್ಲರೆ ಅಂಗಡಿಗಳಿಂದ ತರುವ ಕಚ್ಚಾ ಅಥವಾ ಪಾಶ್ಚರೀಕರಿಸದ ಹಸುಗಳ ಹಾಲು ಕೋಣೆಯ ಉಷ್ಣಾಂಶಕ್ಕೆ ಅಪಾರ ಪ್ರಮಾಣದ ಆಂಟಿಮೈಕ್ರೊಬಿಯಲ್-ನಿರೋಧಕಗಳನ್ನು ಹೊಂದಿರುತ್ತದೆ ಎಂದು ಡೇವಿಸ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರ ಹೊಸ ಅಧ್ಯಯನ ತಿಳಿಸಿದೆ..

ಕಚ್ಚಾ ಹಾಲು
ಕಚ್ಚಾ ಹಾಲು
author img

By

Published : Jul 12, 2020, 7:03 PM IST

ಆಂಟಿಮೈಕ್ರೊಬಿಯಲ್-ನಿರೋಧಕ ಬ್ಯಾಕ್ಟೀರಿಯಾವನ್ನು ಇತರ ಬ್ಯಾಕ್ಟೀರಿಯಾಗಳಿಗೆ ವರ್ಗಾಯಿಸಬಹುದು. ಇದನ್ನು ಸೇವಿಸಿದ್ರೆ ಪ್ರತಿರೋಧವನ್ನು ಹರಡಬಹುದು ಎಂದು ಅಧ್ಯಯನವು ಕಂಡು ಹಿಡಿದಿದೆ. ಮೈಕ್ರೋಬಯೋಮ್ ಜರ್ನಲ್‌ನಲ್ಲಿ ಈ ಅಧ್ಯಯನವನ್ನು ಪ್ರಕಟಿಸಲಾಗಿದೆ.

"ನಾವು ಜನರನ್ನು ಹೆದರಿಸಲು ಬಯಸುವುದಿಲ್ಲ, ಜನರು ಈ ಕುರಿತು ಜ್ಞಾನವನ್ನು ಹೊಂದಲಿ ಎಂದು ಬಯಸುತ್ತೇವೆ. ನೀವು ಕಚ್ಚಾ ಹಾಲನ್ನು ಕುಡಿಯುವುದನ್ನು ಮುಂದುವರಿಸಿದ್ರೇ, ಪ್ರತಿಜೀವಕ-ನಿರೋಧಕ ಬ್ಯಾಕ್ಟೀರಿಯಾವನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಕಡಿಮೆ ಮಾಡಲು ಅದನ್ನು ನಿಮ್ಮ ರೆಫ್ರಿಜರೇಟರ್‌ನಲ್ಲಿ ಇರಿಸಿ" ಎಂದು ಯುಸಿ ಡೇವಿಸ್​ನಲ್ಲಿನ ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಪೋಸ್ಟ್ ಡಾಕ್ಟರಲ್ ಸಂಶೋಧಕ, ಪ್ರಮುಖ ಲೇಖಕ ಜಿನ್‌ಸ್ಕಿನ್ ಲಿಯು ಹೇಳಿದ್ದಾರೆ.

ಅಪಾರ ಜನಸಂಖ್ಯೆಯು ಪಾಶ್ಚರೀಕರಿಸದ ಅಥವಾ ಕಚ್ಚಾ ಹಾಲನ್ನು ಬಳಸುತ್ತದೆ. ಇದನ್ನು ರೋಗಕಾರಕಗಳನ್ನು ಕೊಲ್ಲಲು ಮತ್ತು ಶೆಲ್ಫ್ ಜೀವಿತಾವಧಿಯನ್ನು ಹೆಚ್ಚಿಸಲು ಬಿಸಿ ಮಾಡಲಾಗುವುದಿಲ್ಲ. ಪಾಶ್ಚರೀಕರಿಸಿದ ಹಾಲಿಗೆ ಹೋಲಿಸಿದ್ರೆ ಕಚ್ಚಾ ಹಾಲನ್ನು ಪ್ರೋಬಯಾಟಿಕ್‌ಗಳು ಅಥವಾ ಆರೋಗ್ಯಕರ ಬ್ಯಾಕ್ಟೀರಿಯಾಗಳು ಹೇರಳವಾಗಿ ಇರುತ್ತವೆ ಎಂದು ಗ್ರಾಹಕರಿಗೆ ಹೇಳಲಾಗುತ್ತದೆ.

"ಎರಡು ವಿಷಯಗಳು ನಮಗೆ ಆಶ್ಚರ್ಯವನ್ನುಂಟು ಮಾಡಿದೆ" ಎಂದು ಲಿಯು ಹೇಳಿದರು. "ಕಚ್ಚಾ ಹಾಲಿನ ಮಾದರಿಗಳಲ್ಲಿ ನಾವು ಹೆಚ್ಚಿನ ಪ್ರಮಾಣದಲ್ಲಿ ಪ್ರಯೋಜನಕಾರಿ ಬ್ಯಾಕ್ಟೀರಿಯಾವನ್ನು ಕಂಡುಕೊಳಲಿಲ್ಲ ಮತ್ತು ನೀವು ಕೋಣೆಯ ಉಷ್ಣಾಂಶದಲ್ಲಿ ಕಚ್ಚಾ ಹಾಲನ್ನು ಇಟ್ಟರೇ ಇದು ಪಾಶ್ಚರೀಕರಿಸಿದ ಹಾಲಿಗಿಂತ ಹೆಚ್ಚು ಆಂಟಿಮೈಕ್ರೊಬಿಯಲ್-ನಿರೋಧಕಗಳನ್ನು ಹೊಂದಿರುತ್ತದೆ.

"ಆಂಟಿಮೈಕ್ರೊಬಿಯಲ್-ನಿರೋಧಕ ಬ್ಯಾಕ್ಟೀರಿಯಾಗಳು ಹೆಚ್ಚು ರೋಗಗಳನ್ನು ಹರಡುತ್ತವೆ." ಸೂಪರ್‌ಬಗ್‌ಗಳು " ಆಗುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಇದರಿಂದಾಗಿ ಸೋಂಕು ಅಥವಾ ಕಾಯಿಲೆಗೆ ಚಿಕಿತ್ಸೆ ನೀಡುವ ಔಷಧಗಳು ಇನ್ನು ಮುಂದೆ ಕಾರ್ಯನಿರ್ವಹಿಸುವುದಿಲ್ಲ. ಪ್ರತಿ ವರ್ಷ, ಸುಮಾರು 3 ಮಿಲಿಯನ್ ಜನರಿಗೆ ಪ್ರತಿಜೀವಕ-ನಿರೋಧಕ ಸೋಂಕು ಬರುತ್ತದೆ ಮತ್ತು ರೋಗ ನಿಯಂತ್ರಣ ಕೇಂದ್ರಗಳ ಪ್ರಕಾರ 35,000ಕ್ಕೂ ಹೆಚ್ಚು ಜನರು ಸಾಯುತ್ತಿದ್ದಾರೆ.

ಯುಸಿ ಡೇವಿಸ್ ಸಂಶೋಧಕರು ಐದು ರಾಜ್ಯಗಳಿಂದ 2,000ಕ್ಕೂ ಹೆಚ್ಚು ಚಿಲ್ಲರೆ ಹಾಲಿನ ಮಾದರಿಗಳನ್ನು ವಿಶ್ಲೇಷಿಸಿದ್ದಾರೆ. ಇದರಲ್ಲಿ ಕಚ್ಚಾ ಹಾಲು ಮತ್ತು ಹಾಲು ವಿವಿಧ ರೀತಿಯಲ್ಲಿ ಪಾಶ್ಚರೀಕರಿಸಲಾಗಿದೆ. ಕೋಣೆಯ ಉಷ್ಣಾಂಶದಲ್ಲಿ ಉಳಿದಿರುವಾಗ ಕಚ್ಚಾ ಹಾಲಿನಲ್ಲಿ ಪ್ರತಿಜೀವಕ-ನಿರೋಧಕ ಸೂಕ್ಷ್ಮಜೀವಿಗಳ ಪ್ರಮಾಣ ಹೆಚ್ಚು ಎಂದು ಅಧ್ಯಯನವು ಕಂಡು ಹಿಡಿದಿದೆ.

"ನಮ್ಮ ಅಧ್ಯಯನವು ಕಚ್ಚಾ ಹಾಲಿನಲ್ಲಿ ಯಾವುದೇ ತಾಪಮಾನ ದುರುಪಯೋಗದಿಂದ, ಉದ್ದೇಶಪೂರ್ವಕವಾಗಿರಲಿ ಅಥವಾ ಇಲ್ಲದಿರಲಿ, ಇದು ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್ ಜೀನ್‌ಗಳೊಂದಿಗೆ ಈ ಬ್ಯಾಕ್ಟೀರಿಯಾವನ್ನು ಬೆಳೆಯಬಲ್ಲದು" ಎಂದು ಸಹ-ಲೇಖಕ ಮಿಚೆಲ್ ಜೇ-ರಸ್ಸೆಲ್, ಸಂಶೋಧನಾ ಸೂಕ್ಷ್ಮ ಜೀವಶಾಸ್ತ್ರಜ್ಞ ಮತ್ತು ಯುಸಿ ಡೇವಿಸ್ ವೆಸ್ಟರ್ನ್ ಸೆಂಟರ್ ಫಾರ್ ಫುಡ್‌ನ ವ್ಯವಸ್ಥಾಪಕ ಹೇಳುತ್ತಾರೆ. "ಇದು ಕೇವಲ ಹಾಳಾಗುವುದಿಲ್ಲ. ಸರಿಯಾಗಿ ನಿರ್ವಹಿಸದಿದ್ದರೆ ಇದು ನಿಜವಾಗಿಯೂ ಹೆಚ್ಚಿನ ಅಪಾಯ.

"ಕೆಲವು ಗ್ರಾಹಕರು ಉದ್ದೇಶಪೂರ್ವಕವಾಗಿ ಕಚ್ಚಾ ಹಾಲನ್ನು ಕೋಣೆಯ ಉಷ್ಣಾಂಶದಲ್ಲಿ ರೆಫ್ರಿಜರೇಟರ್‌ನ ಹೊರಗೆ ಹುದುಗಿಸಲು ಅವಕಾಶ ಮಾಡಿಕೊಡುತ್ತಿದ್ದಾರೆ. ಇದನ್ನು ಕ್ಲಾಬ್ಬರ್ ಎಂದು ಕರೆಯಲಾಗುತ್ತದೆ. ಸಹ-ಲೇಖಕ ಮತ್ತು ಡೈರಿ ಫುಡ್ ಸೈನ್ಸ್‌ನ ಪೀಟರ್ ಜೆ. ಶೀಲ್ಡ್ಸ್ ಚೇರ್ ಡೇವಿಡ್ ಮಿಲ್ಸ್ ಗ್ರಾಹಕರು ಕಚ್ಚಾ ಹಾಲನ್ನು ಸೇವಿಸುವುದರಿಂದ ತಮ್ಮ ಕರುಳಿನಲ್ಲಿ ಹೆಚ್ಚಿನ ಸಂಖ್ಯೆಯ ಆಂಟಿಮೈಕ್ರೊಬಿಯಲ್-ನಿರೋಧಕಗಳನ್ನು ಹೊಂದುತ್ತಾರೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.