ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ತವರು ಗುಜರಾತ್ನಲ್ಲಿ ಈ ಸಾರಿ ಲೋಕಸಭಾ ಚುನಾವಣೆ ಕುತೂಹಲ ಕೆರಳಿಸುತ್ತಿದೆ.
ಅದರಲ್ಲೂ ಹಾರ್ದಿಕ್ ಪಟೇಲ್ ಈ ಸಾರಿ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದು, ಅವರ ವಿರುದ್ಧ ಬಿಜೆಪಿ ಯಾರನ್ನು ಕಣಕ್ಕಿಳಿಸಲಿದೆ ಎಂಬ ಕುರಿತ ಒಂದು ಹಿಂಟ್ ಸಿಕ್ಕಿದೆ.
ಈಚೆಗಷ್ಟೆ ಬಿಜೆಪಿಯ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿ ನೇಮಕಗೊಂಡಿದ್ದ ಕ್ರಿಕೆಟರ್ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಅವರು ಗುಜರಾತ್ನ ಜಾಮ್ನಗರ್ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯಾತೆಯಿದೆ.
ಈ ಮೂಲಕ ಪಟೇಲ್ ಸಮುದಾಯದ ವೋಟ್ ಮೇಲೆ ಕಣ್ಣಿಟ್ಟಿರುವ ಹಾರ್ದಿಕ್ ಪಟೇಲ್ಗೆ ಪ್ರಬಲ ಸ್ಪರ್ಧೆ ಕೊಡಲು ಬಿಜೆಪಿ ತಂತ್ರ ಹೆಣೆಯುತ್ತಿದೆ ಎಂದು ಮೂಲಗಳು ಹೇಳುತ್ತಿವೆ.
ಜಾಮ್ನಗರ್ ಕ್ಷೇತ್ರವು ರಾಜಕೀಯವಾಗಿ ಹಲವು ಮಹತ್ವಗಳಿಗೆ ಕಾರಣವಾಗಿವೆ. ಸದ್ಯ ಬಿಜೆಪಿಯ ಪೂನಂ ಮದಂ ಅವರು ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಪೂನಂ ಅವರು 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ವಿಕ್ರಂ ಮದಂ ಹಾಗೂ ಅವರ ಚಿಕ್ಕಪ್ಪನನ್ನು ಸೋಲಿಸಿದ್ದರು.