ಕಾನ್ಪುರ: ಉತ್ತರಪ್ರದೇಶದ ಪೆಮ್ ಗ್ರಾಮದಲ್ಲಿ 3 ವರ್ಷದ ಬಾಲಕಿಯ ಮೇಲೆ ಯುವಕನಿಂದ ಶನಿವಾರದಂದು ಅತ್ಯಾಚಾರ ನಡೆದಿದೆ.
ಬಾಲಕಿ ತನ್ನ ತಾಯಿಯ ಮನೆಗೆ ಬಂದಿರುವ ಸಮಯದಲ್ಲಿ ಆರೋಪಿಯೂ ತನ್ನ ಸೋದರ ಮಾವನ ನಿವಾಸಕ್ಕೆ ಭೇಟಿ ನೀಡಿದ್ದಾನೆ. ಈ ಸಂದರ್ಭದಲ್ಲಿ ಅತ್ಯಾಚಾರ ನಡೆದಿದ್ದು, ಈ ಘಟನೆಯು ಸ್ಥಳೀಯ ಜನರನ್ನು ಬೆಚ್ಚಿ ಬೀಳಿಸಿದೆ. ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು ಪೊಲೀಸರು ಮೊಕ್ಕಾಂ ಹೂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಈ ಘಟನೆಯಿಂದ ಜನ ಆಕ್ರೋಶಗೊಂಡಿದ್ದಾರೆ. ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ಇರುವುದರಿಂದಾಗಿ ಹೆಚ್ಚುವರಿ ಪೊಲೀಸ್ ಪಡೆನಿಯೋಜಿಸಲಾಗಿದೆ ಎಂದು ಕಾನ್ಪುರ ನಗರದ ಎಎಸ್ಪಿ ಅಜಯ್ ಕುಮಾರ್ ತಿಳಿಸಿದ್ದಾರೆ.