ನವದೆಹಲಿ: ದಿನಕಳೆದಂತೆ ಹೆಚ್ಚೆಚ್ಚು ಖಾಸಗಿ ಮನರಂಜನೆ ನೀಡುವ ಚಾನೆಲ್‌ಗಳು ಲಗ್ಗೆ ಹಾಕುತ್ತಿದ್ದಂತೆ ಕಳೆ ಕಳೆದುಕೊಂಡಿದ್ದ ಸರ್ಕಾರಿ ಒಡೆತನದ ದೂರದರ್ಶನ ಇದೀಗ ಮತ್ತೊಮ್ಮೆ ಗತವೈಭವಕ್ಕೆ ಮರಳಿದೆ. ಅದಕ್ಕೆ ಕಾರಣವಾಗಿದ್ದು ಮಾತ್ರ ಲಾಕ್ಡೌನ್ ವೇಳೆ ಪ್ರಸಾರವಾಗುತ್ತಿರುವ ಪೌರಾಣಿಕ ಧಾರಾವಾಹಿಗಳು.
-
The return of classic show 'Ramayana' rules television viewership as it generated a whopping 6.9 Billion viewing minutes in the first 4 episodes. #BARCIndia #WhatIndiaWatches #Ramayana #Television #Viewership #Lockdown #Covid19 pic.twitter.com/2ZjSE1WOnx
— BARCIndia (@BARCIndia) April 5, 2020 " class="align-text-top noRightClick twitterSection" data="
">The return of classic show 'Ramayana' rules television viewership as it generated a whopping 6.9 Billion viewing minutes in the first 4 episodes. #BARCIndia #WhatIndiaWatches #Ramayana #Television #Viewership #Lockdown #Covid19 pic.twitter.com/2ZjSE1WOnx
— BARCIndia (@BARCIndia) April 5, 2020The return of classic show 'Ramayana' rules television viewership as it generated a whopping 6.9 Billion viewing minutes in the first 4 episodes. #BARCIndia #WhatIndiaWatches #Ramayana #Television #Viewership #Lockdown #Covid19 pic.twitter.com/2ZjSE1WOnx
— BARCIndia (@BARCIndia) April 5, 2020
ದೇಶದಲ್ಲಿ ಲಾಕ್ಡೌನ್ ಘೋಷಣೆಯಾಗ್ತಿದ್ದಂತೆ ದೂರದರ್ಶನದಲ್ಲಿ ಈ ಹಿಂದೆ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದ ರಾಮಾಯಣ, ಮಹಾಭಾರತ, ಶಕ್ತಿಮಾನ್ ನಂತಹ ಜನಮೆಚ್ಚುಗೆ ಗಳಿಸಿದ ಧಾರಾವಾಹಿ ಮರುಪ್ರಸಾರಗೊಳ್ಳುತ್ತಿವೆ. ಇದು ವೀಕ್ಷಕರನ್ನು ಮತ್ತೆ ತನ್ನತ್ತ ಸೂಜಿಗಲ್ಲಿನಂತೆ ಸಳೆಯುವುದರಲ್ಲಿ ಯಶಸ್ವಿಯಾಗಿವೆ. ವಾರಾಂತ್ಯದ ಟಿಆರ್ಪಿ ಲೆಕ್ಕಾಚಾರ ಹೊರಬೀಳುತ್ತಿದ್ದಂತೆ ಎಲ್ಲ ಮನರಂಜನಾ ಖಾಸಗಿ ವಾಹಿನಿಗಳನ್ನು ಡಿಡಿ ಹಿಂದಿಕ್ಕಿದೆ.!
ದೂರದರ್ಶನದಲ್ಲಿ ರಾಮಾಯಣ ಪ್ರಸಾರವಾದ ಮೊದಲ 4 ಎಪಿಸೋಡ್ಗಳನ್ನು ಬರೋಬ್ಬರಿ 93.3 ಮಿಲಿಯನ್ ಜನರು ವೀಕ್ಷಣೆ ಮಾಡಿದ್ದು, ಇದರ ಒಟ್ಟು ವೀಕ್ಷಣೆ 6.9 ಬಿಲಿಯನ್ ಎಂದು ತಿಳಿದು ಬಂದಿದೆ. ಇದ್ರ ಜತೆಗೆ ಮಹಾಭಾರತ ಹಾಗೂ ಶಕ್ತಿಮಾನ್ ಕೂಡ ಹೆಚ್ಚು ವೀಕ್ಷಣೆಗೊಳಪಟ್ಟಿವೆ. ಇದರ ಜತೆಗೆ 40 ಸಾವಿರದಷ್ಟು ವೀಕ್ಷಕರನ್ನೂ ತನ್ನ ಬುಟ್ಟಿಗೆ ಹಾಕಿಕೊಂಡಿದೆ ಎಂದು ಬಾರ್ಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್(BARC) ಮಾಹಿತಿ ನೀಡಿದೆ.
ಏಪ್ರಿಲ್ 3ರ ಅಂತ್ಯದ ವೇಳೆಗೆ ಡಿಡಿ ನ್ಯಾಷನಲ್ ಬರೋಬ್ಬರಿ 1,59,623 ಅಂಕಗಳೊಂದಿಗೆ ನಂಬರ್ 1 ಸ್ಥಾನದಲ್ಲಿದೆ. ಖಾಸಗಿ ವಾಹಿನಿಗಳ ಮುಂದೆ ತನ್ನ ಜನಪ್ರಿಯತೆ ಕಳೆದುಕೊಂಡಿದ್ದ ದೂರದರ್ಶನ ಇದೀಗ ಮತ್ತೊಮ್ಮೆ ತನ್ನ ಛಾಪು ಮೂಡಿಸೋಕೆ ರಾಮ, ಕೃಷ್ಣರೇ ಬರಬೇಕಾಯ್ತು ನೋಡಿ..