ETV Bharat / bharat

ರಾಮಮಂದಿರದ ನೆಲಮಟ್ಟದ ಕಾರ್ಯ ಪೂರ್ಣ: ಜುಲೈ 18ಕ್ಕೆ  ಟ್ರಸ್ಟ್​​ನ ಮಹತ್ವದ ಸಭೆ

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಜುಲೈ 18 ರಂದು ಸಭೆ ಸೇರಿ ಮಂದಿರದ ವಿವಿಧ ಹಂತಗಳ ಕುರಿತು ಚರ್ಚಿಸಲು ತೀರ್ಮಾನಿಸಿದೆ. ಈ ಸಭೆಗೆ ಟ್ರಸ್ಟ್‌ನ ಎಲ್ಲ ಸದಸ್ಯರನ್ನು ಆಹ್ವಾನಿಸಲಾಗುವುದು, ಅವರೆಲ್ಲರೂ ಇದಕ್ಕೆ ಹಾಜರಾಗುವ ಸಾಧ್ಯತೆಯಿದೆ ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಈಟಿವಿ ಭಾರತ್‌ಗೆ ತಿಳಿಸಿದ್ದಾರೆ.

author img

By

Published : Jul 4, 2020, 8:32 AM IST

ayodhya
ಚಂಪತ್ ರಾಯ್

ಅಯೋಧ್ಯೆ (ಉತ್ತರ ಪ್ರದೇಶ): ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಮೇಲ್ವಿಚಾರಣೆಗಾಗಿ ಸುಪ್ರೀಂಕೋರ್ಟ್ ನಿರ್ದೇಶನದಂತೆ ಸ್ಥಾಪಿಸಲಾದ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಜುಲೈ 18 ರಂದು ಸಭೆ ಸೇರಿ ಮಂದಿರದ ವಿವಿಧ ಹಂತಗಳ ಕುರಿತು ಚರ್ಚಿಸುವ ಸಾಧ್ಯತೆ ಇದೆ.

ಜುಲೈ 18 ರಂದು ನಡೆಯುವ ಈ ಸಭೆಗೆ ಟ್ರಸ್ಟ್‌ನ ಎಲ್ಲ ಸದಸ್ಯರನ್ನು ಆಹ್ವಾನಿಸಲಾಗುವುದು. ಅವರೆಲ್ಲರೂ ಹಾಜರಾಗುವ ಸಾಧ್ಯತೆಯಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಈಟಿವಿ ಭಾರತ್‌ಗೆ ತಿಳಿಸಿದ್ದಾರೆ.

ಟ್ರಸ್ಟ್​ನ ಅಧ್ಯಕ್ಷರಾಗಿ ಮಹಂತ್ ನೃತ್ಯ ಗೋಪಾಲ್ ದಾಸ್ ನೇತೃತ್ವದಲ್ಲಿ, ಟ್ರಸ್ಟ್‌ನ ಸದಸ್ಯರ ಪ್ರಧಾನ ಕಾರ್ಯದರ್ಶಿ ನಿರ್ಪೇಂದ್ರ ಮಿಶ್ರಾ, ಹೆಚ್ಚುವರಿ ಕೇಂದ್ರ ಗೃಹ ಕಾರ್ಯದರ್ಶಿ ಜ್ಞಾನೇಶ್ ಕುಮಾರ್ ಮತ್ತು ಉತ್ತರ ಪ್ರದೇಶ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನಿಶ್ ಅವಸ್ಥಿ ಈ ಸಮಿತಿಯಲ್ಲಿದ್ದಾರೆ.

ಇನ್ನುಳಿದಂತೆ ಟ್ರಸ್ಟ್​ನಲ್ಲಿ ಹಿರಿಯ ವಕೀಲ ಕೆ. ಪ್ರಸನ್ನನ್, ಧಾರ್ಮಿಕ ಮುಖಂಡರುಗಳಾದಂತಹ ಗೋವಿಂದ್​ ದೇವ್​ ಗಿರಿ, ಸ್ವಾಮಿ ವಾಸುದೇವಾನಂದ್​ ಸರಸ್ವತಿ, ಸ್ವಾಮಿ ವಿಶ್ವಪ್ರಸನ್ನ ತೀರ್ಥ, ಯುಗಪುರುಷ ಪರಮಾನಂದ ಗಿರಿ ಹಾಗೂ ಮಹಂತ್ ದೀನೇಂದ್ರ ದಾಸ್, ಆರ್​ಎಸ್​ಎಸ್​ ಮುಖಂಡ ಅನಿಲ್​ ಮಿಶ್ರಾ, ವಿಹೆಚ್​​ಪಿ ಮುಖಂಡ ಕಾಮೇಶ್ವರ್ ಚೌಪಾಲ್​ ಇರಲಿದ್ದಾರೆ.

ದೇವಾಲಯದ ಕಂಬಗಳಿಗೆ ಅಡಿಪಾಯ ಹಾಕುವ ನಿರ್ಧಾರಗಳನ್ನು ಸಭೆಯಲ್ಲಿ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಕಾರ್ಯದರ್ಶಿ ಚಂಪತ್ ರಾಯ್ ಹೇಳಿದರು. ಇದಕ್ಕೂ ಮುನ್ನ ರಾಯ್ ಅವರು ಟ್ರಸ್ಟ್​ನ ಸದಸ್ಯ ಅನಿಲ್ ಮಿಶ್ರಾ ಅವರೊಂದಿಗೆ ದೇವಾಲಯದ ನಿರ್ಮಾಣದಲ್ಲಿ ತೊಡಗಿರುವ ವಾಸ್ತುಶಿಲ್ಪಿಗಳ ತಂಡವನ್ನು ಭೇಟಿಯಾದರು.

ಸಭೆಯಲ್ಲಿ ರಾಮ ಮಂದಿರ ಮಾದರಿಯ ಮುಖ್ಯ ವಾಸ್ತುಶಿಲ್ಪಿ ಚಂದ್ರಕಾಂತ್ ಸೋಮ್​ಪುರ ಅವರ ಪುತ್ರ ಆಶಿಶ್ ಸೋಮ್​ಪುರ ಕೂಡಾ ಉಪಸ್ಥಿತಲಿರಲಿದ್ದಾರೆ.

"ನಾನು ಕಾರ್ಯಾಶಾಲದಲ್ಲಿ ಕೆತ್ತಿದ ಕಲ್ಲುಗಳನ್ನು ಸ್ವಚ್ಚಗೊಳಿಸುವ ಪ್ರಕ್ರಿಯೆಯನ್ನು ಪರಿಶೀಲಿಸಿದ್ದೇನೆ. ಸ್ವಚ್ಚಗೊಳಿಸುವ ಕಾರ್ಯವು ಸರಿಯಾಗಿ ನಡೆಯುತ್ತಿದೆಯೇ ಎಂಬ ಬಗ್ಗೆ ಮೊದಲ ಮಾಹಿತಿ ಪಡೆಯಲು ನಾನು ಇಲ್ಲಿಗೆ ಬಂದಿದ್ದೇನೆ" ಎಂದು ಆಶಿಶ್ ಸೋಮ್​ಪುರ ಹೇಳಿದರು.

ದೇವಾಲಯದ ನಿರ್ಮಾಣವನ್ನು ಪ್ರಾರಂಭಿಸಲು ವಿವಿಧ ಕಾಮಗಾರಿಗಳ ಕುರಿತು ಮಾತನಾಡಿದ ಸೋಮ್​ಪುರ, ನೆಲಮಟ್ಟದ ಕೆಲಸಗಳು ಈಗಾಗಲೇ ಪೂರ್ಣಗೊಂಡಿವೆ. ಮತ್ತು ಮುಂಬರುವ ದಿನಗಳಲ್ಲಿ ಮಳೆಯ ಬರುವುದರಿಂದ ಆ ನೆಲವನ್ನು ಮಳೆಯಲ್ಲಿ ನೆನೆಯಲು ಬಿಡಬೇಕೇ ಇಲ್ಲವೇ ಎಂಬ ಬಗ್ಗೆ ನಿರ್ಧರಿಸಬೇಕಿದೆ ಎಂದು ಅವರು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.