ತಮಿಳುನಾಡು : ರಾಜ್ಯಸಭಾ ಸದಸ್ಯ ವೈಕೋ, ಕಾಶ್ಮೀರ 100 ನೇ ಸ್ವಾತಂತ್ರ್ಯ ದಿನಾಚರಣೆಗೆ ಭಾರತದೊಂದಿಗೆ ಇರುವುದಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ತಮಿಳುನಾಡಿನಲ್ಲಿ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದ ವೈಕೋ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮೋದಿ ಸರ್ಕಾರ 370 ನೇ ವಿಧಿ ರದ್ದುಗೊಳಿಸಿರುವ ಕುರಿತು ವೈಕೋ ಸಮಾರಂಭದಲ್ಲಿ ಮಾತನಾಡಿದರು. ಸರ್ವಾಧಿಕಾರಿ ಹಿಟ್ಲರ್ ಗರ್ಭಿಣಿ ಮಹಿಳೆಯರನ್ನು ಕೊಂದಿಲ್ಲದಿದ್ದರೂ ಜನರನ್ನು ಮಾರಕ ರಾಸಾಯನಿಕದಿಂದ ಕೊಲ್ಲುತ್ತಿದ್ದ. ಇಂತಹುದೇ ಮಾರ್ಗದಲ್ಲಿ ಈಗಿನ ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿದೆ ಎಂದು ಪರೋಕ್ಷವಾಗಿ ಪ್ರಸ್ತಾಪ ಮಾಡುವ ಮೂಲಕ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಇಲ್ಲಿವರೆಗೂ ಕಾಶ್ಮೀರವನ್ನು ಹಾಳು ಮಾಡಿತು. ಈಗ ಬಿಜೆಪಿ ಕಣಿವೆ ರಾಜ್ಯವನ್ನ ಎರಡು ಭಾಗ ಮಾಡುವ ಮೂಲಕ ಒಡೆದಾಳುವ ನೀತಿ ಅನುಸರಿಸುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ, ದೇಶದ100 ನೇ ಸ್ವಾತಂತ್ರ್ಯೋತ್ಸವ ದಿನದಂದು ಭಾರತದೊಂದಿಗೆ ಕಾಶ್ಮೀರ ಇರುವುದಿಲ್ಲ ಎಂದು ವಿವಾದಾತ್ಮಕ ನುಡಿಗಳನ್ನಾಡಿದರು.
ಕಾಶ್ಮೀರ ಕುರಿತಾದ ವೈಕೋ ಹೇಳಿಕ ವಿವಾದ ಸೃಷ್ಟಿಸಿದ್ದು, ಚರ್ಚೆಗೆ ಗ್ರಾಸವಾಗಿದೆ.