ETV Bharat / bharat

ಹಣಕಾಸಿನ 2, ಕಾರ್ಮಿಕರಿಗೆ ಸಂಬಂಧಿಸಿದ 3 ಸಂಹಿತೆಗಳಿಗೆ ರಾಜ್ಯಸಭೆಯಲ್ಲಿ ಅಂಗೀಕಾರ - ಕೈಗಾರಿಕಾ ಸಂಬಂಧಗಳ ಸಂಹಿತೆ-2020

ರಾಜ್ಯಸಭೆಯಲ್ಲಿ ಹಣಕಾಸಿನ ಎರಡು ಮಸೂದೆಗಳು ಹಾಗೂ ಕಾರ್ಮಿಕರಿಗೆ ಸಂಬಂಧಿಸಿದ 3 ಸಂಹಿತೆಗಳು ಅಂಗೀಕಾರಗೊಂಡಿವೆ.

rajya-sabha-live-rjd-shiv-sena-mps-give-zero-hour-notice-in-upper-house
ಹಣಕಾಸಿನ 2, ಕಾರ್ಮಿಕರಿಗೆ ಸಂಬಂಧಿಸಿದ 3 ಸಂಹಿತೆಗಳು ರಾಜ್ಯಸಭೆಯಲ್ಲಿ ಅಂಗೀಕಾರ
author img

By

Published : Sep 23, 2020, 2:05 PM IST

ನವದೆಹಲಿ: ರಾಜ್ಯಸಭೆಯಲ್ಲಿ ಹಣಕಾಸಿನ ಎರಡು ಮಸೂದೆಗಳು ಹಾಗೂ ಕಾರ್ಮಿಕರಿಗೆ ಸಂಬಂಧಿಸಿದ 3 ಸಂಹಿತೆಗಳು ಅಂಗೀಕಾರಗೊಂಡಿವೆ. ಅರ್ಹ ಹಣಕಾಸು ಒಪ್ಪಂದಗಳ ದ್ವಿಪಕ್ಷೀಯ ಬಲೆ ಮಸೂದೆ-2020, ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದರು. ಬಳಿಕ ಧ್ವನಿ ಮತದಿಂದ ಮಸೂದೆಯನ್ನು ಅಂಗೀಕರಿಸಲಾಯಿತು. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಭದ್ರತೆ ಹಾಗೂ ಹಣಕಾಸಿನ ಸ್ಥಿರತೆಗಾಗಿ ಈ ಬಿಲ್‌ಅನ್ನು ಮಂಡಿಸುತ್ತಿರುವುದಾಗಿ ಸೀತಾರಾಮನ್‌ ತಿಳಿಸಿದರು.

ಹಣಕಾಸಿನ 2, ಕಾರ್ಮಿಕರಿಗೆ ಸಂಬಂಧಿಸಿದ 3 ಸಂಹಿತೆಗಳಿಗೆ ರಾಜ್ಯಸಭೆಯಲ್ಲಿ ಅಂಗೀಕಾರ

ಎರಡು ದೇಶಗಳ ನಡುವಿನ ಒಪ್ಪಂದಗಳ ಮೌಲ್ಯವನ್ನು ಹೆಚ್ಚಿಸಲು ಅರ್ಹ ಹಣಕಾಸು ಒಪ್ಪಂದಗಳ ದ್ವಿಪಕ್ಷೀಯ ಬಲೆ ಮಸೂದೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರು. ಕಳೆದ ಭಾನುವಾರ ಲೋಕಸಭೆಯಲ್ಲಿ ಈ ಮಸೂದೆಗಳನ್ನು ಪಾಸ್‌ ಮಾಡಲಾಗಿತ್ತು.

ಇದಾದ ಬಳಿಕ ಕಾರ್ಮಿಕರಿಗೆ ಸಂಬಂಧಿಸಿದ ಮೂರು ಸಂಹಿತೆಗಳನ್ನು ಅಂಗೀಕರಿಸಲಾಯಿತು. ಔಉದ್ಯೋಗಿಕ ವಲಯದಲ್ಲಿ ಸುರಕ್ಷತೆ, ಆರೋಗ್ಯ ಮತ್ತು ಕೆಲಸ ಪರಿಸ್ಥಿತಿಗಳ ಸಂಹಿತೆ-2020, ಕೈಗಾರಿಕಾ ಸಂಬಂಧಗಳ ಸಂಹಿತೆ-2020 ಹಾಗೂ ಸಾಮಾಜಿಕ ಭದ್ರತೆ ಸಂಹಿತೆ-2020 ಧ್ವನಿ ಮತದಿಂದ ಅಂಗೀಕಾರಗೊಂಡವು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.