ಜೈಪುರ್: ರಾಜಸ್ಥಾನದಲ್ಲಿ ರಾಜಕೀಯ ಹೈಡ್ರಾಮಾ ದಿನದಿಂದ ದಿನಕ್ಕೆ ಹೊಸ ರೂಪ ಪಡೆದುಕೊಳ್ಳುತ್ತಿದ್ದು, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಇಂದು ರಾಜಭವನದ ಮುಂದೆ ಪ್ರತಿಭಟನೆ ನಡೆಸಿತು.
ಇದೇ ವೇಳೆ ಗವರ್ನರ್ ಭೇಟಿ ಮಾಡಿದ ಮುಖ್ಯಮಂತ್ರಿ ಬಹುಮತ ಸಾಬೀತು ಮಾಡಲು ತುರ್ತು ಅಧಿವೇಶನ ಕರಿಯುವಂತೆ ಮನವಿ ಮಾಡಿಕೊಂಡರು. ಇದಕ್ಕೂ ಮೊದಲು ಹೋಟೆಲ್ನಲ್ಲಿ ತಂಗಿದ್ದ ಕಾಂಗ್ರೆಸ್ ಶಾಸಕರು ರಾಜಭವನಕ್ಕೆ ಆಗಮಿಸಿ, ಹೊರಗಡೆ ಸುಮಾರು 4 ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು.
-
Rajasthan: Congress MLAs, supporting CM Ashok Gehlot, leave from Raj Bhawan where the had sat in protest and raised slogans over the issue of the convening of Assembly Session.
— ANI (@ANI) July 24, 2020 " class="align-text-top noRightClick twitterSection" data="
Chief Minister had met Governor Kalraj Mishra today & has now called a cabinet meet at 9:30 pm. https://t.co/6dTlMBv8mI pic.twitter.com/mag0K3DDVA
">Rajasthan: Congress MLAs, supporting CM Ashok Gehlot, leave from Raj Bhawan where the had sat in protest and raised slogans over the issue of the convening of Assembly Session.
— ANI (@ANI) July 24, 2020
Chief Minister had met Governor Kalraj Mishra today & has now called a cabinet meet at 9:30 pm. https://t.co/6dTlMBv8mI pic.twitter.com/mag0K3DDVARajasthan: Congress MLAs, supporting CM Ashok Gehlot, leave from Raj Bhawan where the had sat in protest and raised slogans over the issue of the convening of Assembly Session.
— ANI (@ANI) July 24, 2020
Chief Minister had met Governor Kalraj Mishra today & has now called a cabinet meet at 9:30 pm. https://t.co/6dTlMBv8mI pic.twitter.com/mag0K3DDVA
ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ನಮ್ಮ ಸರ್ಕಾರಕ್ಕೆ ಬಹುಮತವಿದೆ. ಅದಕ್ಕೆ ಗವರ್ನರ್ ಅವಕಾಶ ನೀಡಬೇಕು ಎಂದಿದ್ದಾರೆ. ಅವರ ಮೇಲೆ ಬಿಜೆಪಿ ಒತ್ತಡ ಹಾಕುತ್ತಿರುವ ಕಾರಣ ನಿರ್ಣಯ ಕೈಗೊಳ್ಳುತ್ತಿಲ್ಲ ಎಂದು ತಿಳಿಸಿದ್ದಾರೆ. ಇದೇ ವೇಳೆ ಪ್ರತಿಕ್ರಿಯೆ ನೀಡಿರುವ ಗವರ್ನರ್ ತಕ್ಷಣವೇ ತುರ್ತು ಅಧಿವೇಶನ ನಡೆಸಲು ಸಾಧ್ಯವಿಲ್ಲ ಎಂದಿದ್ದಾರೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ಶಾಸಕರಿಂದ ಪ್ರತಿಭಟನೆ
ಬಹುಮತ ಸಾಬೀತ ಪಡಿಸಲು ವಿಶೇಷ ಅಧಿವೇಶನ ಕರೆಯುವಂತೆ ರಾಜ್ಯಪಾರರನ್ನ ಒತ್ತಾಯಿಸಿ, ರಾಜಭವನದ ಮುಂದೆ ಕಾಂಗ್ರೆಸ್ ಶಾಸಕರು ಪ್ರತಿಭಟನೆ ನಡೆಸಿದರು. ಇದಾದ ಬಳಿಕ ರೆಸಾರ್ಟ್ಗೆ ತೆರಳಿದರು. ಇದರ ಬೆನ್ನಲ್ಲೇ ರಾತ್ರಿ ಹೊಟೇಲ್ನಲ್ಲೇ ಗೆಹ್ಲೋಟ್ ತುರ್ತು ಸಚಿವ ಸಂಪುಟ ಸಭೆ ನಡೆಸಿದರು.
ರಾಜಭವನದ ಹೊರಗೆ ಮಾತನಾಡಿರುವ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ್, ಮುಖ್ಯಮಂತ್ರಿಗಳು ಬಹುಮತ ಸಾಬೀತು ಪಡಿಸಲು ನಿರ್ಧರಿಸಿದ್ದು, ಅದಕ್ಕೆ ರಾಜ್ಯಪಾಲರು ಅನುಮತಿ ನೀಡಬೇಕು ಎಂದಿದ್ದಾರೆ. ಜತೆಗೆ ಸಂವಿಧಾನದ ವಿಧಿ 174 ಪಾಲಿಸಬೇಕು ಎಂದಿದ್ದು, ನಮಗೆ ಅವರ ಮೇಲೆ ವಿಶ್ವಾಸವಿದೆ ಎಂದಿದ್ದಾರೆ. ಇದರ ಮಧ್ಯೆ ನಾಳೆ 11ಗಂಟೆಗೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಕಾಂಗ್ರೆಸ್ ನಿರ್ಧಾರ ಕೈಗೊಂಡಿದೆ.