ಜೈಪುರ (ರಾಜಸ್ಥಾನ್): ದೆಹಲಿಯಲ್ಲಿ ರೈತರ ಆಂದೋಲನ ಸಂಬಂಧ ವಿಧಾನಸಭೆಯಲ್ಲಿ ಚರ್ಚೆಯಾಗುತ್ತಿದೆ. ಅಲ್ಲದೆ ಕೇಂದ್ರದೊಂದಿಗೆ ರೈತರ ಮಾತುಕತೆ ಮುಂದುವರೆದಿದೆ. ಈ ನಡುವೆ ಜೈಪುರದ ಶಾಸಕಿ ಟ್ರ್ಯಾಕ್ಟರ್ನಲ್ಲಿಯೇ ರಾಜಸ್ಥಾನದ ವಿಧಾನಸಭೆಗೆ ಆಗಮಿಸಿದ್ದಾರೆ.
ಭಮನ್ವಾಸ್ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಇಂದಿರಾ ಮೀರಾ ಟ್ರ್ಯಾಕ್ಟರ್ ಏರಿ ವಿಧಾನಸಭೆಗೆ ಆಗಮಿಸಿದ್ದು, ವಿಧಾನಸಭೆ ಕಲಾಪದಲ್ಲಿ ಭಾಗಿಯಾಗಿದ್ದಾರೆ. ಈ ಮೂಲಕ ರೈತರ ಪರವಾಗಿ ಸದನದಲ್ಲೂ ಧ್ವನಿ ಎತ್ತುವುದಾಗಿ ತಿಳಿಸಿದ್ದಾರೆ. ಅಲ್ಲದೆ ನೂತನ ಕೃಷಿ ನೀತಿಯ ವಿರುದ್ಧ ಹಾಗೂ ರೈತರ ಪರವಾಗಿ ವಿಧಾನಸಭೆ ಪ್ರವೇಶಿಸಲಿದ್ದೇನೆ. ಅವರ ಆಂದೋಲನಕ್ಕೆ ಬೆಂಬಲ ಸೂಚಿಸುವುದಾಗಿಯೂ ತಿಳಿಸಿದ್ದಾರೆ.
ಇದನ್ನೂ ಓದಿ: ಆಂದೋಲನಜೀವಿ ಎಂದ ಪ್ರಧಾನಿಗೆ ಎನ್‌ಸಿಪಿ ಟಾಂಗ್.. ಮಾತಿಗೂ ಮೊದ್ಲು ಯೋಚಿಸಿ ಎಂದ ಛಗನ್ ಭುಜಬಲ್..