ETV Bharat / bharat

ಮೊಧೇರಾ ಸೂರ್ಯ ದೇವಾಲಯ ಮಳೆಗಾಲದ ವಿಡಿಯೋ ಟ್ವಿಟ್ಟರ್​​ನಲ್ಲಿ ಹಂಚಿಕೊಂಡ ಪಿಎಂ ಮೋದಿ - ಪ್ರಧಾನಿ ಮೋದಿ

ಮೆಹ್ಸಾನಾದ ಮೊಧೇರಾ ಗ್ರಾಮದಲ್ಲಿ ನೆಲೆಗೊಂಡಿರುವ ಸೂರ್ಯ ದೇವನಿಗೆ ಅರ್ಪಿತವಾದ ಈ ದೇವಾಲಯವು ಪುಷ್ಪಾವತಿ ನದಿಯ ದಡದಲ್ಲಿದೆ. ಅಲ್ಲದೇ ಈ ದೃಶ್ಯದಲ್ಲಿ ಮಳೆ ನೀರು ದೇವಾಲಯದ ಮೆಟ್ಟಿಲುಗಳ ಮೇಲೆ ಹರಿಯುತ್ತಿದ್ದು, ಅದು ಅಂತಿಮವಾಗಿ ಜಲಾಶಯಕ್ಕೆ ಹರಿಯುತ್ತದೆ.

rain-waterfalls-of-surakund-of-surya-temple-created-beautiful-scenaries
ಮೊಧೇರಾ ಸೂರ್ಯ ದೇವಾಲಯ ಮಳೆಗಾಲದ ವಿಡಿಯೋ, ಟ್ವಿಟ್ಟರ್​​ನಲ್ಲಿ ಹಂಚಿಕೊಂಡ ಪಿಎಂ ಮೋದಿ
author img

By

Published : Aug 26, 2020, 12:24 PM IST

Updated : Aug 26, 2020, 12:41 PM IST

ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್​​ನ ಮೊಧೇರಾದಲ್ಲಿರುವ ಸೂರ್ಯ ದೇವಾಲಯದ ಮಳೆಗಾಲದ ಸುಂದರ ದೃಶ್ಯದ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಮೆಹ್ಸಾನಾದ ಮೊಧೇರಾ ಗ್ರಾಮದಲ್ಲಿ ನೆಲೆಗೊಂಡಿರುವ ಸೂರ್ಯ ದೇವನಿಗೆ ಅರ್ಪಿತವಾದ ಈ ದೇವಾಲಯವು ಪುಷ್ಪಾವತಿ ನದಿಯ ದಡದಲ್ಲಿದೆ. ಅಲ್ಲದೇ ಈ ದೃಶ್ಯದಲ್ಲಿ ಮಳೆ ನೀರು ದೇವಾಲಯದ ಮೆಟ್ಟಿಲುಗಳ ಮೇಲೆ ಹರಿಯುತ್ತಿದ್ದು, ಅದು ಅಂತಿಮವಾಗಿ ಜಲಾಶಯಕ್ಕೆ ಹರಿಯುತ್ತದೆ.

ಇಲ್ಲಿಗೆ ಬಂದವರು ನೆಮ್ಮದಿಯಿಂದ ವಿಶ್ರಾಂತಿ ಪಡೆದು, ಒತ್ತಡಗಳನ್ನ ಶಮನಗೊಳಿಸಬಹುದು ಹಾಗೂ ಪ್ರಕೃತಿಯೊಂದಿಗೆ ಒಂದಾಗಬಹುದು ಮತ್ತು ಕಲ್ಲಿನಲ್ಲಿರುವ ಕಾವ್ಯಗಳಿಗೆ ತಮ್ಮ ಮನಸ್ಸನ್ನು ತೆರೆದು ಸೂರ್ಯ ದೇವರಿಗೆ ಅರ್ಪಿಸಬಹುದು. ಯುಗದ ಜೀವಂತ ನೋಟಗಳು ನಿರೂಪಣಾ ಶಿಲ್ಪಗಳ ಜಟಿಲತೆಗಳಿಂದ ಹೊರಹೊಮ್ಮುತ್ತವೆ.

ಪ್ರತ್ಯೇಕವಾಗಿ ಕೆತ್ತಿದ ದೇವಾಲಯ ಸಂಕೀರ್ಣ ಮತ್ತು ಭವ್ಯವಾಗಿ ಕೆತ್ತಿದ ಸೋಲಂಕಿ ಕಾಲದ ಕಲ್ಲಿನ ಕಲೆಯು ಇಲ್ಲಿನ ಆಭರಣಗಳಾಗಿವೆ. ಅಲ್ಲದೇ ಇದನ್ನು ಗುಜರಾತ್‌ನ ಸುವರ್ಣಯುಗ ಎಂದೂ ಕರೆಯಲಾಗುತ್ತಿತ್ತು. ಮೊಧೇರಾದಲ್ಲಿನ ಸೂರ್ಯ ದೇವಾಲಯಗಳ ಅವಶೇಷಗಳು ನೈಸರ್ಗಿಕ ಅಂಶಗಳಾದ ಬೆಂಕಿ, ಗಾಳಿ, ಭೂಮಿ, ನೀರು ಮತ್ತು ಆಕಾಶಗಳನ್ನು ಪೂಜಿಸುವ ಅವಶೇಷಗಳಾಗಿವೆ. ಇದು ವೈದಿಕ ದೇವರುಗಳ ಅಸಂಖ್ಯಾತ ಅಭಿವ್ಯಕ್ತಿಗಳೊಂದಿಗೆ ಗರಿಷ್ಠ ಹಂಚಿಕೆಯ ಸ್ಥಳದಲ್ಲಿದೆ.

Last Updated : Aug 26, 2020, 12:41 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.