ETV Bharat / bharat

ಸೋರುತಿಹುದು 'ಏಕತಾ ಪ್ರತಿಮೆ'! ಟ್ವಿಟರ್​ನಲ್ಲಿ ಬೃಹತ್​ ಮೊತ್ತದ ಸ್ಮಾರಕದ ಬಗ್ಗೆ ಸಖತ್ ಟ್ರೋಲ್..

author img

By

Published : Jun 30, 2019, 5:18 PM IST

ಸರ್ದಾರ್​ ವಲ್ಲಭಬಾಯಿ ಪಟೇಲ್​ರ 182 ಮೀಟರ್​ ಎತ್ತರದ ಏಕತಾ ಪ್ರತಿಮೆಯೊಳಗಿನ ವೀಕ್ಷಣಾ ಗ್ಯಾಲರಿಯ ಮೇಲ್ಛಾವಳಿ ಮಳೆಯಿಂದ ಸೋರುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಏಕತಾ ಪ್ರತಿಮೆ

ನವದೆಹಲಿ: ಸರ್ದಾರ್​ ವಲ್ಲಭಬಾಯಿ ಪಟೇಲ್​ರ 182 ಮೀಟರ್​ ಎತ್ತರದ ಏಕತಾ ಪ್ರತಿಮೆಯನ್ನು ಲೋಕಾರ್ಪಣೆ ಮಾಡುವ ಮೂಲಕ ಭಾರತ, ಇಡೀ ವಿಶ್ವ ತನ್ನತ್ತ ತಿರುಗಿನೋಡುವಂತೆ ಮಾಡಿತ್ತು. ಆದರೆ, ಪ್ರತಿಮೆಯೊಳಗಿನ ವೀಕ್ಷಣಾ ಗ್ಯಾಲರಿಯ ಮೇಲ್ಛಾವಳಿ ಮಳೆಯಿಂದ ಸೋರುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

  • The rainwater has been blown by high-velocity winds inside the viewing gallery It’s by design that it has to be kept open for a better view which tourists can enjoy Water accumulation is being promptly tackled by the maintenance team @PMOIndia @CMOGuj @drrajivguptaias

    — Statue Of Unity (@souindia) June 29, 2019 " class="align-text-top noRightClick twitterSection" data=" ">

ಮಳೆಯಿಂದ ಪ್ರತಿಮೆಯ ಗ್ಯಾಲರಿ ಸೋರುತ್ತಿರುವುದು, ನೆಲದ ಮೇಲೆ ನೀರು ನಿಂತಿರುವುದು, ಅಲ್ಲಿಯೇ ಜನರು ನಿಂತಿರುವ ವೀಡಿಯೋವನ್ನು ಪ್ರವಾಸಿಗನೊಬ್ಬ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದ. ಅದರಡಿ 3000 ಕೋಟಿ ರೂ.ಗಳ ಪ್ರತಿಮೆಯ ಗ್ಯಾಲರಿಯಲ್ಲಿ ಮಳೆ ನೀರು ಸೋರುತ್ತಿದೆ. ಅಷ್ಟೊಂದು ಮೊತ್ತದ ಪ್ರತಿಮೆಯೊಳಗೆ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದ್ದಾರೆ.

  • Viewing Gallery of ₹3000 crore Statue of Unity

    One rain and it gets flooded, water leaking from the roof and front. Such an expensive statue and they couldn’t even design it to prevent this.. pic.twitter.com/V4pUQxNVS2

    — Dhruv Rathee (@dhruv_rathee) June 29, 2019 " class="align-text-top noRightClick twitterSection" data=" ">
  • The viewing gallery of #StatueOfUnity was flooded with water leaking from the roof & front after a spell of rain.

    Is the design of a 3,000 Cr statue so ill-thought out that it can’t even prevent this!

    As usual - Lofty Promises, Tall Claims But Deplorable Delivery! pic.twitter.com/bf7J1zdhT1

    — Raksha Ramaiah 🇮🇳 (@RakshaRamaiah) June 29, 2019 " class="align-text-top noRightClick twitterSection" data=" ">

ಈ ಬಗ್ಗೆ ಕೆಲ ಪ್ರವಾಸಿಗರು ಅಸಮಾಧಾನಗೊಂಡಿದ್ದಾರೆ. ಆದರೆ, ಪ್ರತಿಮೆಯ ಮುಖ್ಯ ಆಡಳಿತಗಾರ ಐ ಕೆ ಪಾಟೀಲ್​, ಇದು ಸಹಜ. ಗ್ಯಾಲರಿಯೊಳಗೆ ಬಂದ ನೀರನ್ನು ಮುಂದೆ ಹರಿಸುವ ವ್ಯವಸ್ಥೆ ಸಹ ಇದೆ ಎಂದಿದ್ದಾರೆ. ಪ್ರತಿಮೆಯ ಎದೆ ಭಾಗದಲ್ಲಿ ವೀಕ್ಷಣಾ ಗ್ಯಾಲರಿ ಇದ್ದು, ಕಬ್ಬಿಣ ಸರಳುಗಳನ್ನು ಮಾತ್ರ ಜೋಡಿಸಲಾಗಿದೆ. ಮುಂಭಾಗವನ್ನು ಡಿಸೈನ್​ಗಾಗಿ ತೆರೆದಿಡಲಾಗಿದೆ. ಮಳೆ ನೀರು ಎದುರಿನಿಂದ ಬೀಳುವುದು ಸಹಜ ಎಂದೂ ಹೇಳಿದ್ದಾರೆ.

ಪಟೇಲ್ ಪ್ರತಿಮೆಗೆ ರೈನ್ ಕೋಟ್​ ಹಾಕಿ, ನೆಹರೂರಿಂದಲೇ ಏಕತಾ ಪ್ರತಿಮೆ ಸೋರುತ್ತಿದೆ ಎಂದು ಟ್ವಿಟರ್‌ನಲ್ಲಿ ಟ್ರೋಲ್ ಮಾಡಲಾಗಿದೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.