ETV Bharat / bharat

ಹಠ ಬಿಡದ ರಾಹುಲ್​ ಗಾಂಧಿ ಟೀಂ.. ಇಂದೂ ಕೂಡ ಹಥ್ರಾಸ್​ ಸಂತ್ರಸ್ತೆ ಮನೆಗೆ ಭೇಟಿ ಪ್ರಯತ್ನ

ಹಥ್ರಾಸ್ ಗ್ರಾಮಕ್ಕೆ ತೆರಳಲು ಮಾಧ್ಯಮಗಳಿಗೆ ಅವಕಾಶ ನೀಡಲಾಗಿದ್ದು, ರಾಜಕಾರಣಿಗಳಿಗೆ ನಿರ್ಬಂಧ ಮುಂದುವರಿದಿದೆ. ಈ ನಡುವೆ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸಂಸದರ ನಿಯೋಗ ಇಂದು ಹಥ್ರಾಸ್​ಗೆ ತೆರಳಿ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಲಿದೆ.

rape protest
rape protest
author img

By

Published : Oct 3, 2020, 11:58 AM IST

ನವದೆಹಲಿ: ಹಥ್ರಾಸ್ ಗ್ರಾಮಕ್ಕೆ ತೆರಳಲು ವಿಧಿಸಿದ ನಿರ್ಬಂಧವನ್ನು ಸಡಿಲಗೊಳಿಸಲಾಗಿದ್ದು, ಮಾಧ್ಯಮಗಳಿಗೆ ತೆರಳಲು ಅವಕಾಶ ನೀಡಲಾಗಿದೆ.

ಆದರೆ ರಾಜಕಾರಣಿಗಳಿಗೆ ನಿರ್ಬಂಧ ಮುಂದುವರಿದಿದ್ದು, ಗ್ರಾಮಕ್ಕೆ ತೆರಳಲು ಅವಕಾಶ ನೀಡಲಾಗುತ್ತಿಲ್ಲ.

ಈ ನಡುವೆ ಕಾಂಗ್ರೆಸ್ ಪಕ್ಷದ ಮಾಜಿ ಮುಖಂಡ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸಂಸದರ ನಿಯೋಗ ಇಂದು ಹಥ್ರಾಸ್​ಗೆ ತೆರಳಿ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಲಿದೆ ಎಂದು ಪಕ್ಷದ ಹಿರಿಯ ಮುಖಂಡರು ಹೇಳಿದ್ಧಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡಾ ಭೇಟಿಯಾಗಲಿದ್ದು, ಅವರ ಸಮಸ್ಯೆಗಳನ್ನು ಆಲಿಸಲಿದ್ದಾರೆ.

"ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸಂಸದರು ಇಂದು ಮಧ್ಯಾಹ್ನ ಹಥ್ರಾಸ್​ಗೆ ತೆರಳಿ ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾಗಲಿದ್ದಾರೆ" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಟ್ವೀಟ್ ಮಾಡಿದ್ದಾರೆ.

ಈ ಹಿಂದೆ ಅಕ್ಟೋಬರ್ 1ರಂದು ಹಥ್ರಾಸ್​ಗೆ ತೆರಳಲು ಪ್ರಯತ್ನಿಸಿದ್ದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಪಕ್ಷದ ಹಲವಾರು ಮುಖಂಡರು ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ದೆಹಲಿಗೆ ಕಳುಹಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.