ETV Bharat / bharat

ದೆಹಲಿ ಪ್ರತಿಭಟನೆಗೆ ರಾಹುಲ್​ ಗಾಂಧಿ ಪ್ರಚೋದನೆ: ಪ್ರಕಾಶ್ ಜಾವಡೇಕರ್​ ಆರೋಪ

author img

By

Published : Jan 27, 2021, 10:10 PM IST

ದೆಹಲಿ ಹಿಂಸಾಚಾರದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್​, ಭಾರತದ ರಾಷ್ಟ್ರಧ್ವಜಕ್ಕೆ ಆಗಿರುವ ಅವಮಾನವನ್ನು ಎಂದಿಗೂ ಸಹಿಸುವುದಿಲ್ಲ ಎಂದಿದ್ದಾರೆ.

Javadekar
Javadekar

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳ ವಿರುದ್ಧ ನಿನ್ನೆ ರೈತರು ನಡೆಸಿರುವ ಪ್ರತಿಭಟನೆ ಹಿಂಸಾಚಾರ ರೂಪ ಪಡೆದುಕೊಂಡು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ವಿಷಯವಾಗಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡರು.

ಜಾವಡೇಕರ್ ಸುದ್ದಿಗೋಷ್ಠಿ

ರೈತರ ಪ್ರತಿಭಟನೆಯನ್ನು ರಾಹುಲ್ ಗಾಂಧಿ ಬೆಂಬಲಿಸಿಲ್ಲ, ಬದಲಾಗಿ ಪ್ರಚೋದನೆ ನೀಡಿದ್ದಾರೆ. ಸಿಎಎ(ನಾಗರಿಕ ಪೌರತ್ವ ಕಾಯ್ದೆ) ಸಮಯದಲ್ಲೂ ಇದೇ ರೀತಿ ಮಾಡಿದ್ದಾರೆ. ಜನರನ್ನು ಬೀದಿಗಿಳಿಯುವಂತೆ ಪ್ರೇರೆಪಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಓದಿ: ಕೊಟ್ಟ ಮಾತಿಗೆ ತಪ್ಪಿ ಹಿಂಸಾಚಾರದಲ್ಲಿ ರೈತ ಮುಖಂಡರೂ ಭಾಗಿ: ದೆಹಲಿ ಪೊಲೀಸ್ ಆಯುಕ್ತ

ರೈತರು ನಡೆಸುತ್ತಿದ್ದ ಆಂದೋಲನ ಪ್ರಚೋದಿಸಲು ಕಾಂಗ್ರೆಸ್​ ನಿರಂತರವಾಗಿ ಪ್ರಯತ್ನ ನಡೆಸಿತ್ತು. ಜನವರಿ 26 ಟ್ರ್ಯಾಕ್ಟರ್ ಪರೇಡ್​ ಎಂದು ಹೇಳಿದಾಗ ಪಂಜಾಬ್​ ಸರ್ಕಾರ ಅಲ್ಲಿಂದ ಹೊರಡುವ ಟ್ರ್ಯಾಕ್ಟರ್​ಗಳ ಮೇಲೆ ನಿಗಾ ಇಡಬೇಕಿತ್ತು. ಆದರೆ ಅಲ್ಲಿನ ಸರ್ಕಾರ ಸುಮ್ಮನೆ ಕುಳಿತುಕೊಂಡಿತ್ತು ಎಂದಿದ್ದಾರೆ.

  • Congress is desperate, they are losing elections. Communists are in the same condition, so they are looking for new friendships in Bengal. They want to stoke disturbance in the country anyhow: Union Minister Prakash Javadekar https://t.co/EmXqfMK4wj

    — ANI (@ANI) January 27, 2021 " class="align-text-top noRightClick twitterSection" data=" ">

ದೆಹಲಿಯಲ್ಲಿ ನಿನ್ನೆ ನಡೆದ ಹಿಂಸಾಚಾರವನ್ನ ಖಂಡಿಸಲಾಗುತ್ತದೆ ಎಂದಿರುವ ಕೇಂದ್ರ ಸಚಿವರು, ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜ ಅವಮಾನಿಸಿದ ರೀತಿಯನ್ನ ಎಂದಿಗೂ ಭಾರತ ಸಹಿಸುವುದಿಲ್ಲ ಎಂದರು. ಚುನಾವಣೆಗಳಲ್ಲಿ ಸೋಲು ಕಾಣುತ್ತಿರುವ ಕಾರಣ ಕಾಂಗ್ರೆಸ್ ಹತಾಶೆಗೊಂಡಿದ್ದು, ದೇಶದಲ್ಲಿ ಗೊಂದಲವನ್ನುಂಟು ಮಾಡಲು ಬಯಸುತ್ತಿದೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.