ನವದೆಹಲಿ: ಭಾರತಕ್ಕೆ ಸಮಸ್ಯೆಗಳ ಸುನಾಮಿ ಅಪ್ಪಳಿಸಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರಕ್ಕೆ ಈ ಸಮಸ್ಯೆಗಳ ಅರಿವೇ ಇಲ್ಲ ಎಂದು ಆರೋಪಿಸಿದರು.
ಕೊರೊನಾ ವೈರಸ್ ಮಾತ್ರವಲ್ಲದೆ ದೇಶದ ಕುಸಿಯುತ್ತಿರುವ ಆರ್ಥಿಕ ಪರಿಸ್ಥಿತಿಗಳಿಂದ ದೇಶ ಎಂದೂ ಕಾಣದ ಕೆಟ್ಟ ದಿನಗಳನ್ನು ಕಾಣಲಿದೆ. ಮುಂದಿನ ಆರು ತಿಂಗಳಲ್ಲಿ ದೇಶದ ಜನತೆ ತೀವ್ರ ಸಮಸ್ಯೆಗಳನ್ನು ಎದುರಿಸಲಿದ್ದಾರೆ. ನಾನು ಈ ಬಗ್ಗೆ ಪದೇ ಪದೆ ಹೇಳಿದರೂ ಸರಕಾರ ಕೇಳಲು ತಯಾರಿಲ್ಲ ಎಂದು ರಾಹುಲ್ ನುಡಿದರು.
'ಸುನಾಮಿ ಬರುವ ಮುಂಚೆ ಸಮುದ್ರದ ನೀರು ಹಿಂದೆ ಹೋಗುತ್ತದೆ. ಆಗ ಮೀನು ಹಿಡಿಯಲು ಹೋದವರು ಸುನಾಮಿಯ ಹೊಡೆತಕ್ಕೆ ಸಿಲುಕಿ ನೀರು ಪಾಲಾಗುತ್ತಾರೆ' ಎಂದು ರಾಹುಲ್ ದೇಶದ ಪ್ರಸ್ತುತ ಸನ್ನಿವೇಶವನ್ನು ವಿವರಿಸಿದರು.