ETV Bharat / bharat

ಕೇಂದ್ರದ 'ಲಾಕ್​ಡೌನ್​'​ ರಣತಂತ್ರ ಸಂಪೂರ್ಣ ವಿಫಲ! - ರಾಹುಲ್​ ಗಾಂಧಿ ಕಳವಳ - ಮೋದಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರಾಹುಲ್​

ಇಂದು ವಿಡಿಯೋ ಕಾನ್ಫರೆನ್ಸ್​ ಮೂಲಕ ಮಾಧ್ಯಮ ಪ್ರತಿನಿಧಿಗಳ ಜೊತೆ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಮಾತುಕತೆ ನಡೆಸಿದ್ದು, ಲಾಕ್​ಡೌನ್​​ ವಿಧಿಸಿದ್ದ ಉದ್ದೇಶವನ್ನೇ ಕೇಂದ್ರ ಸರ್ಕಾರ ಮರೆತಿದೆ ಎಂದು ಮೋದಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಹುಲ್​ ಗಾಂಧಿ
ರಾಹುಲ್​ ಗಾಂಧಿ
author img

By

Published : May 26, 2020, 1:40 PM IST

Updated : May 26, 2020, 1:53 PM IST

ದೆಹಲಿ: ಕೊರೊನಾವನ್ನು 21 ದಿನಗಳಲ್ಲೇ ನಿಯಂತ್ರಣ ಮಾಡಬಹುದು ಎಂದು ಮೋದಿ ಅಂದುಕೊಂಡಿದ್ದರು. ಆದರೆ ಈಗ 60 ದಿನಗಳು ಕಳೆದಿವೆ. ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಜಗತ್ತಿನಲ್ಲಿ ಕೊರೊನಾ ಅತ್ಯಧಿಕ ವೇಗದಲ್ಲಿ ಹಬ್ಬುತ್ತಿರುವ ದೇಶಗಳ ಸಾಲಿನಲ್ಲಿ ಭಾರತವೂ ಸೇರಿದೆ ಎಂದು ರಾಹುಲ್​ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂದು ವಿಡಿಯೋ ಕಾನ್ಫರೆನ್ಸ್​ ಮೂಲಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನೇರವಾಗಿ ಮೋದಿ ಸರ್ಕಾರದ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ದೇಶದಲ್ಲಿ ಲಾಕ್​ಡೌನ್​ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು.

ಲಾಕ್​​ಡೌನ್​​ ಫಲಿತಾಂಶ ಶೂನ್ಯ!

ಕೊರೊನಾ ವೈರಸ್​ ಬಹಳ ಶೀಘ್ರಗತಿಯಲ್ಲಿ ಹಬ್ಬುತ್ತಿರುವ ದೇಶದಲ್ಲಿ ಭಾರತವು ಒಂದು. ಪರಿಸ್ಥಿತಿ ಗಂಭೀರವಾಗಿದ್ದರೂ ಕೇಂದ್ರ ಸರ್ಕಾರ ಲಾಕ್​ಡೌನ್​​ ಸಡಿಲಿಸಿ, ಲಾಕ್​ಡೌನ್​​ ವಿಧಿಸಿದ ಉದ್ದೇಶವನ್ನೇ ಮರೆತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಕೊರೊನಾವನ್ನು 21 ದಿನಗಳಲ್ಲಿ ಹೊಡೆದೋಡಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಮಾಧ್ಯಮಗಳ ಮುಂದೆ ಹೇಳಿದ್ದರು. ಲಾಕ್​ಡೌನ್​ 4.0 ಮುಗಿಯುವ ಹಂತದಲ್ಲಿದೆ. ಆದರೆ ಕೊರೊನಾ ವೈರಸ್ ತನ್ನ​ ದಾಳಿಯನ್ನು ಮಾತ್ರ ನಡೆಸುತ್ತಲೇ ಇದೆ. ಹೀಗಾಗಿ ಕೇಂದ್ರ ಸರ್ಕಾರ, ರಾಜ್ಯಗಳ ಬೆನ್ನಿಗೆ ನಿಲ್ಲದಿದ್ದರೆ ಕೊರೊನಾ ವಿರುದ್ಧ ಹೋರಾಡಲು ಅಸಾಧ್ಯ ಎಂದರು.

ಕೇಂದ್ರದ ಮುಂದಿನ ರಣನೀತಿ ಏನು?

ದೇಶದ ಸಾಮಾನ್ಯ ಜನರ ಕೈಯಲ್ಲಿ ದುಡ್ಡಿಲ್ಲ, ಹಣ​ ಇಲ್ಲದೆ ಜನರು ಬಹಳ ಕಷ್ಟ ಅನುಭವಿಸುತ್ತಿದ್ದಾರೆ. ಜಿಡಿಪಿಯ ಶೇ. 10 ರಷ್ಟು ಮೊತ್ತವನ್ನು ಪ್ಯಾಕೇಜ್​ ರೂಪದಲ್ಲಿ ನೀಡಿದ್ದೇವೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ ಜನರಿಗೆ ಸಿಕ್ಕಿದ್ದು ಶೇ. 1ರಷ್ಟು ಮಾತ್ರ ಎಂಬುದು ಸತ್ಯಾಂಶ. ದೇಶದ ಅಭಿವೃದ್ಧಿಯ ಕುರಿತು ತಮ್ಮ ರಣನೀತಿ ಏನು ಎಂದು ಮೋದಿ ದೇಶದ ಜನರ ಮುಂದೆ ಹೇಳಲಿ, ಎಂಎಸ್​ಎಂಇ ಗಳನ್ನು ಮೇಲಕ್ಕೆ ತರುವ ಯೋಜನೆ ಏನು ಎಂಬುದನ್ನು ಮೋದಿ ಮೊದಲು ಹೇಳಲಿ ಎಂದು ರಾಹುಲ್​ ಗಾಂಧಿ ಸವಾಲೆಸೆದರು.

ನಿರುದ್ಯೋಗ ಸಮಸ್ಯೆ ಹೆಚ್ಚಳ:

ಕೊರೊನಾದಿಂದಾಗಿ ನಿರುದ್ಯೋಗ ಸಮಸ್ಯೆ ಹುಟ್ಟಿಕೊಂಡಿಲ್ಲ, ಅದು ಮೊದಲಿನಿಂದಲೂ ಇದೆ. ಎಲ್ಲಾ ಉದ್ಯೋಗಾವಕಾಶಗಳು ಬಂದ್​ ಆಗಿವೆ. ಹೀಗಾಗಿ ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ಧನ ಸಹಾಯ ಮಾಡಬೇಕೆಂದು ನಾವು ಒತ್ತಾಯಿಸುತ್ತಲೇ ಇದ್ದೇವೆ. ಒಂದು ವೇಳೆ ಸಹಾಯ ಮಾಡದೇ ಇದ್ದರೆ ಮುಂದೆ ಬಹಳ ಕಷ್ಟವಾಗಲಿದೆ ಎಂದು ರಾಹುಲ್​ ಗಾಂಧಿ ಹೇಳಿದರು.

ಚೀನಾ ಮತ್ತು ನೇಪಾಳದ ಜತೆಗಿನ ಗಡಿ ವಿವಾದದ ಬಗ್ಗೆಯೂ ರಾಹುಲ್​ ಪ್ರತಿಕ್ರಿಯಿಸಿದರು. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಪಾರದರ್ಶಕತೆಯಿಂದ ನಡೆದುಕೊಳ್ಳಬೇಕು. ಗಡಿಯಲ್ಲಿ ನಡೆಯುವ ಬೆಳವಣಿಗೆಗಳನ್ನು ಮರೆಮಾಚಬಾರದು. ಏನು ನಡೆದಿದೆಯೋ ಅದರ ಮಾಹಿತಿ ನೀಡಬೇಕು ಎಂದು ರಾಹುಲ್​ ಅಭಿಪ್ರಾಯಪಟ್ಟರು.

Last Updated : May 26, 2020, 1:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.