ನವದೆಹಲಿ: ಬಿಜೆಪಿ - ಆರ್ಎಸ್ಎಸ್ ಟೀಕಿಸಿ ಮಾತನಾಡಿ, ಮಾನನಷ್ಟ ಮೊಕದಮೆ ಎದುರಿಸುತ್ತಿದ್ದ ರಾಹುಲ್ ಗಾಂಧಿ ಅವರಿಗೆ ರಿಲೀಫ್ ಸಿಕ್ಕಿದೆ. ಈ ಸಂಬಂಧ ಅವರಿಗೆ ಮುಂಬೈ ಸ್ಥಳೀಯ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶ ಮಾಡಿದ್ದಾರೆ.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಬಿಜೆಪಿ-ಆರ್ಎಸ್ಎಸ್ ಸಿದ್ಧಾಂತವೇ ಕಾರಣ ಎಂದು ರಾಹುಲ್ ಆರೋಪಿಸಿದ್ದಕ್ಕೆ ಆರ್ಎಸ್ಎಸ್ ಕಾರ್ಯಕರ್ತರೊಬ್ಬರು ಮಾನನಷ್ಟ ಮೊಕದಮೆ ಹೂಡಿದ್ದರು. ಪ್ರಕರಣ ಕುರಿತಾಗಿ ಇಂದು ಮುಂಬೈ ಕೋರ್ಟ್ಗೆ ಹಾಜರಾಗಿ, ವಿಚಾರಣೆ ಎದುರಿಸಿದ ರಾಹುಲ್, ನಿರೀಕ್ಷಣಾ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
-
#WATCH Rahul Gandhi after appearing in a Mumbai court in a defamation case: I didn't say anything in court,I had to appear. It's a fight of ideology,I'm standing with the poor & farmers.'Aakraman ho raha hai, mazaa aa raha hai'. I'll fight 10 times harder than I did in last 5 yrs pic.twitter.com/AoeQJfdTBU
— ANI (@ANI) July 4, 2019 " class="align-text-top noRightClick twitterSection" data="
">#WATCH Rahul Gandhi after appearing in a Mumbai court in a defamation case: I didn't say anything in court,I had to appear. It's a fight of ideology,I'm standing with the poor & farmers.'Aakraman ho raha hai, mazaa aa raha hai'. I'll fight 10 times harder than I did in last 5 yrs pic.twitter.com/AoeQJfdTBU
— ANI (@ANI) July 4, 2019#WATCH Rahul Gandhi after appearing in a Mumbai court in a defamation case: I didn't say anything in court,I had to appear. It's a fight of ideology,I'm standing with the poor & farmers.'Aakraman ho raha hai, mazaa aa raha hai'. I'll fight 10 times harder than I did in last 5 yrs pic.twitter.com/AoeQJfdTBU
— ANI (@ANI) July 4, 2019
ರಾಹುಲ್ ಅವರಿಗೆ 15 ಸಾವಿರ ರೂ. (ಭದ್ರತೆ )ಸೆಕ್ಯೂರಿಟ್ ಪಡೆದು ಜಾಮೀನು ಮಂಜೂರು ಮಾಡಿದೆ. ಮಾಜಿ ಸಂಸದ ಏಕ್ನಾಥ ಗಾಯಕ್ವಾಡ್ ರಾಹುಲ್ಗೆ ಸ್ಯೂರಿಟಿ ಹಾಕಿದ್ದಾರೆ.
ಕೋರ್ಟ್ನಿಂದ ಹೊರಬಂದ ನಂತರ ಮಾಧ್ಯಮಗಳ ಜತೆ ಮಾತನಾಡಿ ರಾಹುಲ್, ನನ್ನ ಮೇಲೆ ಇಂತಹ ದಾಳಿ ನಡೆದಂತೆಲ್ಲಾ ಹೆಚ್ಚು ಮಜಾ ಬರುತ್ತಿದೆ. ಆದರೂ ನಾನು ಬಡವರು, ರೈತರು, ಶ್ರಮಜೀವಿಗಳ ಜತೆಯಲ್ಲೇ ಇದ್ದು, ನಿರಂತರವಾಗಿ ಹೋರಾಡುತ್ತೇನೆ. ನನ್ನ ಮುಂದಿನ ಹೋರಾಟ ಇನ್ನೂ 10 ಪಟ್ಟು ಹೆಚ್ಚಾಗಲಿದೆ ಎಂದು ಹೇಳಿದರು.