ETV Bharat / bharat

ಗಡಿಯಲ್ಲಿ ಚೀನಾ ಕ್ಯಾತೆ: ಮೋದಿಜಿ, ಯಾಕೆ ಇಷ್ಟೊಂದು ಹೆದರುತ್ತಿದ್ದೀರಾ? ರಾಹುಲ್ ಗಾಂಧಿ ​ಪ್ರಶ್ನೆ - ಭಾರತ- ಚೀನಾ ಗಡಿ ವಿವಾದ ನ್ಯೂಸ್

ವೈದ್ಯಕೀಯ ತಪಾಸಣೆಗಾಗಿ ಸೋನಿಯಾ ಗಾಂಧಿ ಅವರೊಂದಿಗೆ ವಿದೇಶಕ್ಕೆ ತೆರಳಿರುವ ರಾಹುಲ್​ ಅವರು ಮೋದಿ ಕ್ಯಾಬಿನೆಟ್​ ಸಚಿವರು ಇತ್ತೀಚೆಗೆ ನೀಡಿದ ಹೇಳಿಕೆಗಳನ್ನು ಗುರಿಯಾಗಿಸಿ ಕೊಂಡು ಇಂದು ಟ್ವೀಟ್ ಮಾಡಿದ್ದಾರೆ. ಮೋದಿ ಸರ್ಕಾರವು ಭಾರತೀಯ ಸೇನೆ ಅಥವಾ ಚೀನಾದೊಂದಿಗೆ ಇದೆಯಾ? ಮೋದಿಜಿ, ಯಾಕೆ ಇಷ್ಟು ಹೆದರುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

Rahul Gandhi
ರಾಹುಲ್ ಗಾಂಧಿ ​
author img

By

Published : Sep 16, 2020, 5:37 PM IST

Updated : Sep 16, 2020, 6:27 PM IST

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಗೈರಾಗಿರುವ ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿ ಅವರು ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್​ ಟ್ವಿಟ್ಟರ್​ ಮೂಲಕ ಕೇಂದ್ರದ ವಿರುದ್ಧ ಭಾರತ- ಚೀನಾ ಗಡಿ ವಿವಾದ ಮುಂದಿಟ್ಟುಕೊಂಡು ವಾಗ್ದಾಳಿ ನಡೆಸಿ ಹಲವು ಪ್ರಶ್ನೆ ಎತ್ತಿದ್ದಾರೆ.

ಕಳೆದ ವಾರ ವೈದ್ಯಕೀಯ ತಪಾಸಣೆಗಾಗಿ ತಾಯಿ ಸೋನಿಯಾ ಗಾಂಧಿ ಅವರೊಂದಿಗೆ ವಿದೇಶಕ್ಕೆ ತೆರಳಿರುವ ರಾಹುಲ್​ ಅವರು ಮೋದಿ ಕ್ಯಾಬಿನೆಟ್​ ಸಚಿವರು ಇತ್ತೀಚೆಗೆ ನೀಡಿದ ಹೇಳಿಕೆಗಳನ್ನು ಗುರಿಯಾಗಿಸಿ ಕೊಂಡು ಇಂದು ಟ್ವೀಟ್ ಮಾಡಿದ್ದಾರೆ.

  • Understand the chronology:

    🔹PM said- no one crossed the border
    🔹Then, took a huge loan from a China-based bank
    🔹Then, Def Min said- China occupied our land
    🔹Now, MOS Home says- there’s no infiltration.

    Is Modi Govt with Indian Army or with China?

    Modi ji, why so scared?

    — Rahul Gandhi (@RahulGandhi) September 16, 2020 " class="align-text-top noRightClick twitterSection" data=" ">

ದಯವಿಟ್ಟು ಕಾಲಗಣನೆ ಅರ್ಥಮಾಡಿಕೊಳ್ಳಿ. ಚೀನಾದ ಯಾರೊಬ್ಬರೂ ಭಾರತೀಯ ಗಡಿ ಪ್ರದೇಶ ದಾಟಿ ಒಳಬಂದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು. ಕೆಲ ದಿನಗಳ ಬಳಿಕ, ಸರ್ಕಾರ ಚೀನಾ ಮೂಲದ ಬ್ಯಾಂಕ್​ನಿಂದ ಭಾರಿ ಪ್ರಮಾಣದ ಸಾಲ ತೆಗೆದುಕೊಂಡಿತು. ಆ ಮೇಲೆ ರಕ್ಷಣಾ ಸಚಿವರು ಚೀನಾ ಅತಿಕ್ರಮಣವಾಗಿ ಗಡಿ ಪ್ರವೇಶ ಮಾಡಿದೆ ಎಂದರು. ಈಗ ಗೃಹ ಸಚಿವರು ಯಾವುದೇ ಅತಿಕ್ರಮಣ ನಡೆದಿಲ್ಲ ಎನ್ನುತ್ತಿದ್ದಾರೆ ಎಂದು ಬರೆದಿದ್ದಾರೆ.

ಮೋದಿ ಸರ್ಕಾರವು ಭಾರತೀಯ ಸೇನೆ ಅಥವಾ ಚೀನಾದೊಂದಿಗೆ ಇದೆಯಾ? ಮೋದಿಜಿ, ಯಾಕೆ ಇಷ್ಟು ಹೆದರುತ್ತಿದ್ದೀರಾ ಎಂದು ರಾಹುಲ್​ ಗಾಂಧಿ ಪ್ರಶ್ನಿಸಿದ್ದಾರೆ.

Last Updated : Sep 16, 2020, 6:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.