ETV Bharat / bharat

ಬಿಹಾರ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ಆರ್​ಜೆಡಿ ತೊರೆದ ಲಾಲು ಆಪ್ತ! - ರಘುವಂಶ್​ ಪ್ರಸಾದ್​

ಕಳೆದ 32 ವರ್ಷಗಳಿಂದ ಆರ್​​ಜೆಡಿ ಪಕ್ಷದಲ್ಲಿ ಸೇವೆ ಸಲ್ಲಿಸಿದ್ದ ರಘುವಂಶ್​​ ಪ್ರಸಾದ್​ ದಿಢೀರ್​ ಆಗಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

Raghuvansh Prasad Singh
Raghuvansh Prasad Singh
author img

By

Published : Sep 10, 2020, 5:13 PM IST

ಪಾಟ್ನಾ: ಬಿಹಾರದಲ್ಲಿ ವಿಧಾನಸಭೆ ಚುನಾವಣೆ ನಡೆಯಲು ಕೆಲವೇ ತಿಂಗಳು ಬಾಕಿ ಉಳಿದುಕೊಂಡಿದ್ದು, ಇದರ ಮಧ್ಯೆ ಮಹತ್ವದ ಬೆಳವಣಿಗೆಯೊಂದರಲ್ಲಿ ಆರ್​​ಜೆಡಿಯ ಹಿರಿಯ ನಾಯಕ ಪಕ್ಷ ತೊರೆದಿದ್ದಾರೆ.

ಲಾಲು ಪ್ರಸಾದ್​ ಯಾದವ್​​ ಆಪ್ತ ಹಾಗೂ ಪಕ್ಷದ ಹಿರಿಯ ನಾಯಕ ರಘುವಂಶ್​ ಪ್ರಸಾದ್ ಸಿಂಗ್​​​ ದಿಢೀರ್​​ ಆಗಿ ಪಕ್ಷಕ್ಕೆ ವಿದಾಯ ಹೇಳಿದ್ದಾರೆ. ಇದರ ಮಧ್ಯೆ ಅವರು ನಿತೀಶ್​ ಕುಮಾರ್​ ನೇತೃತ್ವದ ಜೆಡಿಯು ಸೇರಿಕೊಳ್ಳಲಿದ್ದಾರೆ ಎಂಬ ಮಾತು ಗಂಭೀರವಾಗಿ ಕೇಳಿ ಬರುತ್ತಿದೆ. ಈ ಹಿಂದೆ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದ ರಘುವಂಶ್​ ಪ್ರಸಾದ್​​ ಆರ್​​ಜೆಡಿ ಪಕ್ಷದಲ್ಲಿ ಕಳೆದ 32 ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ.

1997ರಲ್ಲಿ ಪಕ್ಷ ಸ್ಥಾಪನೆಗೊಂಡಾಗಿನಿಂದಲೂ ಲಾಲು ಪ್ರಸಾದ್​ ಯಾದವ್ ನೇತೃತ್ವದ ಆರ್​​ಜೆಡಿಯಲ್ಲಿ​ ಕಾಣಿಸಿಕೊಂಡಿದ್ದ ಇವರು, ಪಕ್ಷದ ಅತ್ಯಂತ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದಾರೆ. ಸದ್ಯ ದೆಹಲಿಯ ಏಮ್ಸ್​​ ಆಸ್ಪತ್ರೆಯಲ್ಲಿ ಕೊರೊನಾ ವೈರಸ್​ಗೆ ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಅಲ್ಲಿಂದಲೇ ತಮ್ಮ ನಿರ್ಧಾರ ಹೊರಹಾಕಿದ್ದಾರೆ.

ಪತ್ರ ಬರೆದು ಪಕ್ಷ ತೊರೆದ ರಘುವಂಶ್​

Raghuvansh Prasad Singh
ಪತ್ರ ಬರೆದು ಪಕ್ಷ ತೊರೆದ ರಘುವಂಶ್​

ಕಾರ್ಪೂರಿ ಠಾಕೂರ್​ ನಿಧನದ ಬಳಿಕ 32 ವರ್ಷಗಳ ಕಾಲ ನಿಮ್ಮ ಹಿಂದೆ ನಿಂತಿದ್ದೇನೆ. ಆದರೆ ಇನ್ಮುಂದೆ ಆಗಲ್ಲ ಎಂದು ಕಾಗದದ ಮೇಲೆ ಕೈಬರಹದ ಮೂಲಕ ಬರೆದು ಪಕ್ಷ ತೊರೆದಿದ್ದಾರೆ. ಪಕ್ಷದಲ್ಲಿ ಅಪಾರ ಪ್ರೀತಿ, ಬೆಂಬಲ ಗಳಿಸಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಹೇಳಿದ್ದಾರೆ.

ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಸದ್ಯ ಲಾಲು ಪ್ರಸಾದ್​ ಯಾದವ್​ ಜೈಲಿನಲ್ಲಿದ್ದು, ಆರ್​ಜೆಡಿ ಪಕ್ಷವನ್ನ ತೇಜಸ್ವಿ ಯಾದವ್​ ಮುನ್ನಡೆಸುತ್ತಿದ್ದಾರೆ. ಇದರಿಂದ ರಘುವಂಶ್​ ಅವರಲ್ಲಿ ಅಸಮಾಧಾನವಿತ್ತು. ಅದೇ ಕಾರಣಕ್ಕಾಗಿ ಪಕ್ಷ ತೊರೆದಿದ್ದಾರೆ ಎಂದು ತಿಳಿದು ಬಂದಿದೆ. ಇದರ ಜತೆಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದ ತಕ್ಷಣ ನಿತೀಶ್​ ಕುಮಾರ್​ ಪಕ್ಷ ಸೇರಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ ಎಂದು ವರದಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.