ETV Bharat / bharat

ಗುಣಮಟ್ಟದ ಶಿಕ್ಷಣಕ್ಕೆ ಉತ್ತಮ ಬೋಧನೆಯೂ ಅಗತ್ಯ: ಇದಕ್ಕೆ 'ಸ್ಟಾರ್ಸ್​' ಸಹಕಾರಿಯೇ?

ಸಂಶೋಧನೆಗೆ ಹೆಚ್ಚಿನ ಪ್ರಚೋದನೆಯನ್ನು ನೀಡುವ ವಿಜ್ಞಾನ ಯೋಜನೆಗಳನ್ನು ಬೆಂಬಲಿಸಲು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ಕಳೆದ ಫೆಬ್ರವರಿಯಲ್ಲಿ 250 ಕೋಟಿ ರೂ.ಗಳ ಬಜೆಟ್​ನೊಂದಿಗೆ ‘ಸ್ಟಾರ್ಸ್’ ಎಂಬ ಯೋಜನೆ ಪ್ರಾರಂಭಿಸಿದ್ದು, ಅದರ ವ್ಯಾಪ್ತಿ ಮತ್ತು ಉದ್ದೇಶ ವಿಭಿನ್ನವಾಗಿದೆ.

‘ಸ್ಟಾರ್ಸ್’  ಯೋಜನೆ
‘ಸ್ಟಾರ್ಸ್’ ಯೋಜನೆ
author img

By

Published : Oct 20, 2020, 11:52 AM IST

ಭವಿಷ್ಯದ ಚುಕ್ಕಾಣಿಯಾಗಿ ಗುಣಮಟ್ಟದ ಬೋಧನೆಯನ್ನು ರೂಪಿಸುವ ಮೂಲಕ ಶಾಲಾ ಶಿಕ್ಷಣವನ್ನು ಬಲಪಡಿಸುವ ಗುರಿ ಹೊಂದಿರುವ 'ಸ್ಟಾರ್ಸ್' (Strengthening Teaching-Learning And Results for States) ಎಂಬ ಹೊಸ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಸಂಶೋಧನೆಗೆ ಹೆಚ್ಚಿನ ಪ್ರಚೋದನೆಯನ್ನು ನೀಡುವ ವಿಜ್ಞಾನ ಯೋಜನೆಗಳನ್ನು ಬೆಂಬಲಿಸಲು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ಕಳೆದ ಫೆಬ್ರವರಿಯಲ್ಲಿ 250 ಕೋಟಿ ರೂ.ಗಳ ಬಜೆಟ್​ನೊಂದಿಗೆ ‘ಸ್ಟಾರ್ಸ್’ ಎಂಬ ಯೋಜನೆ ಪ್ರಾರಂಭಿಸಿದ್ದು, ಅದರ ವ್ಯಾಪ್ತಿ ಮತ್ತು ಉದ್ದೇಶ ವಿಭಿನ್ನವಾಗಿದೆ.

ಉದ್ಯೋಗ ವ್ಯವಸ್ಥೆಗಳನ್ನು ಸೃಷ್ಟಿಸುವ ಶಿಕ್ಷಣ ವ್ಯವಸ್ಥೆಯ ಸಾಮರ್ಥ್ಯವನ್ನು ಸುಧಾರಿಸುವುದು, ಮಂಡಳಿ ಪರೀಕ್ಷೆಗಳನ್ನು ಸುಧಾರಿಸುವುದು, ಶಿಕ್ಷಕ-ತರಬೇತಿ ಸೌಲಭ್ಯಗಳನ್ನು ಉತ್ತಮಗೊಳಿಸುವ ಉದ್ದೇಶವನ್ನು ಹೊಂದಿದೆ. ಒಟ್ಟು ಅಂದಾಜು 5,718 ಕೋಟಿ ರೂ.ಗಳಲ್ಲಿ 3,700 ಕೋಟಿ ರೂ.ಗಳ ವೆಚ್ಚವನ್ನು ವಿಶ್ವಬ್ಯಾಂಕ್ ಅನುದಾನವಾಗಿ ನೀಡಲಿದೆ. ಈ ಯೋಜನೆಯನ್ನು ಕೇಂದ್ರ ಶಿಕ್ಷಣ ಸಚಿವಾಲಯವು ಹಿಮಾಚಲ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಮಧ್ಯಪ್ರದೇಶ, ಕೇರಳ ಮತ್ತು ಒಡಿಶಾ ರಾಜ್ಯಗಳಲ್ಲಿ ಜಾರಿಗೆ ತರಲಿದೆ. ಶಾಲಾ ಶಿಕ್ಷಣದಲ್ಲಿ ಗುಣಮಟ್ಟದ ಮಾನದಂಡಗಳನ್ನು ನಿಗದಿಪಡಿಸುವ ಉದ್ದೇಶದಿಂದ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ) ಈಗಾಗಲೇ ಗುಜರಾತ್, ತಮಿಳುನಾಡು, ಉತ್ತರಾಖಂಡ್, ಜಾರ್ಖಂಡ್ ಮತ್ತು ಅಸ್ಸಾಂನಂತಹ ರಾಜ್ಯಗಳಲ್ಲಿ ಇದೇ ರೀತಿಯ ಯೋಜನೆಗಳಿಗೆ ಧನಸಹಾಯ ನೀಡುತ್ತಿದೆ.

ಕೇಂದ್ರ ಮಂತ್ರಿಗಳು ಶಗುನ್ ಮತ್ತು ದೀಕ್ಷಾದಂತಹ ಆನ್‌ಲೈನ್ ಪೋರ್ಟಲ್‌ಗಳ ಸಹಾಯದಿಂದ ಹೊರ ರಾಜ್ಯಗಳಿಂದ ಅನುಭವಗಳ ಬಗ್ಗೆ ಮಾಹಿತಿ ಪಡೆಯಬಹುದು ಎಂದು ತಿಳಿಸಿದ್ದಾರೆ. ಆದರೆ ಇದು ರಾಷ್ಟ್ರೀಯ ಮಟ್ಟದಲ್ಲಿ ಶಾಲಾ ಶಿಕ್ಷಣವನ್ನು ಬಲಪಡಿಸುವ ಕಾರ್ಯಸಾಧ್ಯವಾದ ಮಾರ್ಗವೇ?. ಏಕೆಂದರೆ ದೇಶಾದ್ಯಂತ ಹನ್ನೊಂದು ಲಕ್ಷ ಶಿಕ್ಷಕರಿಗೆ ಬೋಧನೆಯಲ್ಲಿ ಸರಿಯಾದ ತರಬೇತಿ ಇಲ್ಲ. ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ, ಮೂರನೇ ಒಂದು ಭಾಗದಷ್ಟು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರಿಗೆ ಅಗತ್ಯವಾದ ಅರ್ಹತೆಗಳ ಕೊರತೆಯಿದೆ. ಅಂತಹ ಸಂದರ್ಭದಲ್ಲಿ, ಕೆಲವು ರಾಜ್ಯಗಳಿಗೆ ಸೀಮಿತವಾದ ಹೊಸ ಯೋಜನೆಗಳು ದೇಶಾದ್ಯಂತ ಶಾಲಾ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲಿದೆಯೇ ಎಂಬುದು ಪ್ರಶ್ನಾತೀತವಾಗಿದೆ.

ಕೋವಿಡ್ ವಿಪತ್ತಿನಿಂದಾಗಿ ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಟ್ಟಿದೆ ಮತ್ತು ರಾಷ್ಟ್ರವ್ಯಾಪಿ ವಿದ್ಯಾರ್ಥಿಗಳಿಗೆ ಕಲಿಕೆಯ ಅವಕಾಶಗಳ ಗುಣಾತ್ಮಕ ಮತ್ತು ಪರಿಮಾಣಾತ್ಮಕ ನಷ್ಟದಿಂದಾಗಿ ಭಾರತಕ್ಕೆ ವರ್ಷಕ್ಕೆ 30 ಲಕ್ಷ ಕೋಟಿ ರೂ. ನಷ್ಟವಾಗಲಿದೆ ಎಂದು ವಿಶ್ವ ಬ್ಯಾಂಕ್ ಇತ್ತೀಚೆಗೆ ಅಂದಾಜಿಸಿದೆ. ಕೋವಿಡ್ ವಿಪತ್ತಿನ ಸಂದರ್ಭದಲ್ಲಿ ದೇಶವು ಒಂದೇ ವರ್ಷದಲ್ಲಿ ಇಷ್ಟು ನಷ್ಟವನ್ನು ಅನುಭವಿಸುತ್ತಿದ್ದರೆ, ಅರ್ಹ ಮತ್ತು ತರಬೇತಿ ಪಡೆದ ಬೋಧನಾ ಸಿಬ್ಬಂದಿಯ ಕೊರತೆ ಮತ್ತು ಗುಣಮಟ್ಟದ ಶಿಕ್ಷಣದ ನಷ್ಟದಿಂದಾಗಿ ವರ್ಷಗಳಲ್ಲಿ ದೇಶವು ಈಗಾಗಲೇ ಅನುಭವಿಸಿರುವ ದೊಡ್ಡ ನಷ್ಟವನ್ನು ಹೇಗೆ ಅಂದಾಜು ಮಾಡುವುದು?. ದೇಶದಲ್ಲಿ ಶಿಕ್ಷಕರ ಶಿಕ್ಷಣ ವ್ಯವಸ್ಥೆ ಹೇಗೆ ಪ್ರವರ್ಧಮಾನಕ್ಕೆ ಬರಬೇಕು ಎಂದು ಕೊಟ್ಟಾರಿ ಆಯೋಗ, ಛಟ್ಟೋಪಾಧ್ಯಾಯ ಸಮಿತಿ ಮತ್ತು ಯಶ್ಪಾಲ್ ಸಮಿತಿ ವಿವರಿಸಿದ್ದರೂ, ದಶಕಗಳಿಂದ ಸರ್ಕಾರಗಳಿಂದ ಬಂದ ಪ್ರತಿಕ್ರಿಯೆ ಉತ್ತೇಜನಕಾರಿಯಾಗಿಲ್ಲ. ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ಸಾಧಿಸುವ ಸಲುವಾಗಿ, ಶಾಲಾ ಶಿಕ್ಷಕರಿಗೆ ಕಡ್ಡಾಯ ತರಬೇತಿಯನ್ನು ಸೂಚಿಸುವ ಶಿಕ್ಷಣ ಹಕ್ಕು ಕಾಯ್ದೆಯನ್ನು ಮೂರು ವರ್ಷಗಳ ಹಿಂದೆ ತಿದ್ದುಪಡಿ ಮಾಡಲಾಯಿತು. ಆದರೆ ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ. 'ಶಿಕ್ಷಾ' ಎಂಬ ಶೀರ್ಷಿಕೆಯಲ್ಲಿ ತಜ್ಞರ ಬೆಂಬಲದೊಂದಿಗೆ ದೇಶಾದ್ಯಂತ 42 ಲಕ್ಷ ಶಾಲಾ ಶಿಕ್ಷಕರ ಬೋಧನಾ ಕೌಶಲ್ಯವನ್ನು ಸುಧಾರಿಸಲು ಕಳೆದ ವರ್ಷ ಎರಡು ಹಂತದ ತರಬೇತಿ ಕಾರ್ಯಕ್ರಮವು ಜಾರಿ ಮಾಡಬೇಕಿತ್ತು. ಆದರೆ ಅದು ಇನ್ನೂ ಪ್ರಾರಂಭವಾಗಿಲ್ಲ.

ಉನ್ನತ ಶೈಕ್ಷಣಿಕ ಮಾನದಂಡಗಳನ್ನು ಸಾಧಿಸುವಲ್ಲಿ ಶ್ರೇಷ್ಠತೆಯ ಕೇಂದ್ರಗಳಾಗಿ ಹೊರಹೊಮ್ಮುತ್ತಿರುವ ವಿದೇಶಗಳ ಅನುಭವಗಳಿಂದ ಕೇಂದ್ರವು ಕಲಿಯಬೇಕು. ದಕ್ಷಿಣ ಕೊರಿಯಾ, ಫಿನ್​ಲ್ಯಾಂಡ್, ಸಿಂಗಾಪುರ್ ಮತ್ತು ಹಾಂಗ್ ಕಾಂಗ್ ಪ್ರತಿಭೆಗಳನ್ನು ಗುರುತಿಸುವ ಮೂಲಕ, ನಿರಂತರ ತರಬೇತಿ ಮತ್ತು ಆಕರ್ಷಕ ಸಂಬಳಗಳನ್ನು ನೀಡುವ ಮೂಲಕ ಬೋಧನಾ ವೃತ್ತಿಗೆ ಆಹ್ವಾನಿಸುವ ಮೂಲಕ ಶಿಕ್ಷಣದಲ್ಲಿ ಸೃಜನಶೀಲ ಆವಿಷ್ಕಾರಗಳಲ್ಲಿ ಮುನ್ನಡೆ ಸಾಧಿಸುತ್ತಿವೆ. ನುರಿತ ಶಿಕ್ಷಕರು ಮತ್ತು ಸಮರ್ಪಿತ ಶಿಕ್ಷಣ ತಜ್ಞರು, ದೇಶದ ಅತ್ಯುತ್ತಮ ಎಂಜಿನಿಯರ್‌ಗಳು, ವೈದ್ಯರು, ವಕೀಲರು ಮತ್ತು ಇತರ ವೃತ್ತಿಪರರನ್ನು ಸೃಷ್ಟಿಸುತ್ತಾರೆ. ಶಿಕ್ಷಕರ ಶಿಕ್ಷಣದ ಉನ್ನತ ಮಟ್ಟವನ್ನು ಸಾಧಿಸಲು ಪ್ರಸ್ತುತ ಲೋಪದೋಷಗಳನ್ನು ಸರಿಪಡಿಸಲು ಮತ್ತು ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಲು ಮುಂದಾಗಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.