ETV Bharat / bharat

ಲಾಕ್​ಡೌನ್​ ನಡುವೆ ಠಾಣೆಯಲ್ಲೇ ಮದುವೆ ಮಾಡಿಸಿದ ಪುಣೆ ಪೊಲೀಸರು!

ದೇಶದಲ್ಲಿ ಹೇರಿಕೆ ಮಾಡಲಾಗಿರುವ ಲಾಕ್​ಡೌನ್​ ಮೇ.17ರವರೆಗೆ ಮುಂದೂಡಿಕೆಯಾಗಿದ್ದು, ಇದರ ಮಧ್ಯೆ ಪುಣೆ ಪೊಲೀಸರು ಠಾಣೆಯಲ್ಲೇ ಮದುವೆ ಕಾರ್ಯ ಮಾಡಿಸಿದ್ದಾರೆ.

Pune police Perform Kanyadaan at a Wedding amid lockdown

author img

By

Published : May 3, 2020, 1:17 PM IST

ಪುಣೆ: ದೇಶಾದ್ಯಂತ ಲಾಕ್​ಡೌನ್​ ವಿಸ್ತರಣೆಯಾಗಿರುವ ಕಾರಣ ಮದುವೆ ಕಾರ್ಯಕ್ರಮ, ಜಾತ್ರಾ ಮಹೋತ್ಸವ ಸೇರಿದಂತೆ ಅನೇಕ ಸಭೆ-ಸಮಾರಂಭಗಳು ಮುಂದೂಡಿಕೆಯಾಗಿದ್ದು, ಇದರ ಮಧ್ಯೆ ಪುಣೆ ಪೊಲೀಸರು ಮಹತ್ವದ ಕಾರ್ಯ ನಡೆಸಿಕೊಟ್ಟಿದ್ದಾರೆ.

ಆದಿತ್ಯಾ ಬಿಸ್ತಾ ಹಾಗೂ ಸ್ನೇಹಾ ಕುಶ್ವಾ ಕಳೆದ ಫೆಬ್ರವರಿ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇವರ ಮದುವೆ ಮೇ.2ರಂದು ನಡೆಯಬೇಕಾಗಿತ್ತು. ಆದರೆ ದೇಶದಲ್ಲಿ ಲಾಕ್​ಡೌನ್​ ಇರುವ ಕಾರಣ ಮದುವೆ ಸಾಧ್ಯವಾಗಲಿಲ್ಲ. ಈ ವಿಷಯ ಪುಣೆ ಹಡಪ್ಸರ್​​ ಪೊಲೀಸ್ ಠಾಣೆ ಪಿಎಸ್​ಐ ಪ್ರಸಾದ್​ ಲೊನಾರಿ ಅವರ ಗಮನಕ್ಕೆ ಬರುತ್ತಿದ್ದಂತೆ ಆದಿತ್ಯಾ ಹಾಗೂ ಸ್ನೇಹಾ ಮದುವೆ ಮಾಡಿಸಿದ್ದಾರೆ. ಪೊಲೀಸ್ ಠಾಣೆಯಲ್ಲೇ ಸಿಬ್ಬಂದಿ ಸಮ್ಮುಖದಲ್ಲಿ ಇವರು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

ಲಾಕ್​ಡೌನ್​ ನಡುವೆ ​ ಠಾಣೆಯಲ್ಲಿ ಮದುವೆ ಮಾಡಿಸಿದ ಪುಣೆ ಪೊಲೀಸರು!

ಈ ವೇಳೆ ಮಾತನಾಡಿರುವ ಆದಿತ್ಯಾ, ದೇಶದಲ್ಲಿ ಲಾಕ್​ಡೌನ್​ ಹೇರಿಕೆ ಮಾಡಿದ್ದರಿಂದ ನಮ್ಮ ಮದುವೆ ಕಾರ್ಯಕ್ರಮ ಮುಂದೂಡಿಕೆಯಾಗಿದ್ದು, ಇದೀಗ ಪುಣೆ ಪೊಲೀಸರು ನಮ್ಮ ಮದುವೆ ಮಾಡಿಸಿದ್ದಾರೆ. ಇವರ ಕೆಲಸಕ್ಕೆ ನಾವು ಆಭಾರಿಯಾಗಿರುತ್ತೇವೆ ಎಂದಿದ್ದಾರೆ. ಆದಿತ್ಯಾ ಹಾಗೂ ಸ್ನೇಹಾ ತಂದೆ ಕರ್ನಲ್​​ಗಳಾಗಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿದ್ದು, ಇದೀಗ ಆದಿತ್ಯಾ ಐಟಿ ಪ್ರೊಫೆಸರ್​ ಹಾಗೂ ಸ್ನೇಹಾ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.