ಕೋಲ್ಕತ್ತಾ : ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಸಂಘರ್ಷ ನಡೆದಿದ್ದು, ಮೂವರು ಸಾವಿಗೀಡಾಗಿದ್ದರು. ಶನಿವಾರ ಸಂಜೆ ನಡೆದ ಮಾರಾಮಾರಿಯಲ್ಲಿ ಟಿಎಂಸಿಯ ಒಬ್ಬ, ಬಿಜೆಪಿಯ ಇಬ್ಬರು ಮೃತಪಟ್ಟಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಕಾರ್ಮಿಕರ ಮೃತ ದೇಹಗಳನ್ನು ಬಿಜೆಪಿ ಕಚೇರಿಯಿಂದ ಕೊಂಡೊಯ್ಯಲು ಬಿಡದ ಕಾರಣ ಬಿಜೆಪಿ ರಾಜ್ಯಾದ್ಯಂತ ಬಂದ್ಗೆ ಕರೆ ನೀಡಿದೆ.
-
West Bengal: BJP has called a 12-hour 'bandh' in the state over the alleged killings of party workers; #visuals from North 24 Parganas. pic.twitter.com/8Udb8EYxBf
— ANI (@ANI) June 10, 2019 " class="align-text-top noRightClick twitterSection" data="
">West Bengal: BJP has called a 12-hour 'bandh' in the state over the alleged killings of party workers; #visuals from North 24 Parganas. pic.twitter.com/8Udb8EYxBf
— ANI (@ANI) June 10, 2019West Bengal: BJP has called a 12-hour 'bandh' in the state over the alleged killings of party workers; #visuals from North 24 Parganas. pic.twitter.com/8Udb8EYxBf
— ANI (@ANI) June 10, 2019
ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರಿಂದ ಕಳೆದ ಶನಿವಾರ ಗುಂಡಿಗೆ ಬಲಿಯಾದ ಬಿಜೆಪಿಯ ಕಾರ್ಯಕರ್ತರ ಮೃತ ದೇಹಗಳನ್ನು ಬಿಜೆಪಿ ಕಚೇರಿಯಿಂದ ಕೊಂಡೊಯ್ಯಲು ಪೊಲೀಸರು ಬಿಡುತ್ತಿಲ್ಲ. ಇದರಿಂದಾಗಿ ರಾಜ್ಯ ಪೊಲೀಸ್ ವಿರುದ್ಧ ನಾವು ನ್ಯಾಯಾಲಯದ ಮೊರೆ ಹೊಗುತ್ತೇವೆ. ದೀದಿ ಸರ್ಕಾರದ ಕ್ರಮ ಖಂಡಿಸಿ ಇವತ್ತು 12 ಗಂಟೆಗಳ ಬಂದ್ ಮಾಡುತ್ತಿದ್ದೇವೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಹುಲ್ ಸಿನ್ಹಾ ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ, ಜೂನ್ 12 ರಂದು ವಿಲ್ಲಿಂಗ್ಟನ್ ಸ್ಕ್ವರ್ ನಿಂದ ಲಾಲ್ ಬಜಾರ್ವರೆಗೆ ಬಿಜೆಪಿ ಮತ್ತೊಂದು ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ಅವರು ಘೋಷಿಸಿದ್ದಾರೆ.