ಮುಂಬೈ: ಬಾಲಿವುಡ್ನ ಖ್ಯಾತ ಸಿಂಗರ್ ತಮಗೆ ಕೊರೊನಾ ಸೋಂಕು ತಗುಲಿದೆ ಎಂದು ಹೇಳಿಕೊಂಡಿದ್ದಾರೆ. ಈ ಮೂಲಕ ಕೊವಿಡ್-19 ಸೋಂಕಿಗೆ ತುತ್ತಾದ ಮೊದಲ ಬಾಲಿವುಡ್ ಸೆಲೆಬ್ರೆಟಿಯಾಗಿದ್ದಾರೆ.
ಕಳೆದ ನಾಲ್ಕು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿತ್ತು. ಇಂದು ಪರೀಕ್ಷೆ ನಡೆಸಿದ್ದು ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದೆ. ಸದ್ಯ ನಾನು ಮತ್ತು ನಮ್ಮ ಕುಟುಂಬದವರು ಚಿಕಿತ್ಸೆ ಪಡೆಯುತ್ತಿದ್ದೇವೆ ಎಂದಿದ್ದಾರೆ.
- " class="align-text-top noRightClick twitterSection" data="
">
10 ದಿನಗಳ ಹಿಂದೆ ಲಂಡನ್ನಿಂದ ಹಿಂದಿರುಗಿದಾಗ ಸಾಮಾನ್ಯ ಕಾರ್ಯವಿಧಾನದ ಪ್ರಕಾರ ನನ್ನನ್ನು ವಿಮಾನ ನಿಲ್ದಾಣದಲ್ಲಿ ಸ್ಕ್ಯಾನ್ ಮಾಡಲಾಯಿತು. ರೋಗಲಕ್ಷಣಗಳು ನಾಲ್ಕು ದಿನಗಳ ಹಿಂದೆ ಮಾತ್ರ ಪ್ರಾರಂಭವಾಗಿವೆ ಎಂದು ಅವರು ಹೇಳಿಕೊಂಡಿದ್ದಾರೆ.
ಸಾಮಾನ್ಯ ಜ್ವರದ ಲಕ್ಷಣದಂತೆ ಕಾಣುತ್ತಿದ್ದು, ನಾನು ಆರೋಗ್ಯವಾಗಿದ್ದೇನೆ. ಇಂತಾ ಸಮಯದಲ್ಲಿ ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸೂಚನೆಯನ್ನು ಪಾಲಿಸಿ ಎಲ್ಲರೂ ಆರೋಗ್ಯವಾಗಿರಿ ಎಂದು ಇನ್ಸ್ಟಾಗ್ರಾಮ್ನಲ್ಲಿ ಹೇಳಿಕೊಂಡಿದ್ದಾರೆ.