ನವದೆಹಲಿ: ಕಾಂಗ್ರೆಸ್ನ ಬಂಡಾಯ ಶಾಸಕರು ಸ್ಪೀಕರ್ಗೆ ಸಲ್ಲಿಸಿರುವ ರಾಜೀನಾಮೆ ಪತ್ರಗಳ ಕುರಿತು ಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಸುಪ್ರೀಂಕೋರ್ಟ್ ಗೆ ಮನವಿ ಮಾಡಿದೆ.
ಕಾಂಗ್ರೆಸ್ನ ಬಂಡಾಯ ಶಾಸಕರು ಒತ್ತಡಕ್ಕೊಳಗಾಗಿ ರಾಜೀನಾಮೆ ಕೊಟ್ಟಿದ್ದಾರೆ. ಅವರು ಸ್ವಇಚ್ಛೆಯಿಂದ ನೀಡಿಲ್ಲ. ಹಾಗಾಗಿ ಈ ಕುರಿತು ತನಿಖೆ ನಡೆಸುವ ಅವಶ್ಯಕತೆ ಇದೆ ಎಂದು ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಹೇಮಂತ್ ಗುಪ್ತಾ ಅವರ ಮುಂದೆ ಕಾಂಗ್ರೆಸ್ ಹೇಳಿದೆ.
ಬಂಡಾಯ ಶಾಸಕರನ್ನು ವಿಮಾನಗಳಲ್ಲಿ ಕರೆದುಕೊಂಡು ಹೋಗಿದ್ದು, ಅವರನ್ನು ಪ್ರಸ್ತುತ ಬಿಜೆಪಿಯ ಹದ್ದುಬಸ್ತಿನಲ್ಲಿರುವ ರೆಸಾರ್ಟ್ನಲ್ಲಿ, ಯಾರಿಗೂ ಸಿಗದಂತೆ ಇಡಲಾಗಿದೆ. ಬಹುಮತ ಸಾಬೀತು ಪಡಿಸಿ ಎಂದು ಸಿಎಂಗೆ ಅಥವಾ ಸ್ಪೀಕರ್ಗೆ ಹೇಳುವ ಅಧಿಕಾರ ಗವರ್ನರ್ಗೆ ಇಲ್ಲ ಎಂದು ಕಾಂಗ್ರೆಸ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ದುಶ್ಯಂತ್ ಅವರು ಕೋರ್ಟ್ಗೆ ತಿಳಿಸಿದ್ದಾರೆ.
"ಸ್ಪೀಕರ್ ಅಂತಿಮ ಮಾಸ್ಟರ್ ಮತ್ತು ಮಧ್ಯಪ್ರದೇಶ ರಾಜ್ಯಪಾಲರು ಅವರನ್ನು ನಿಯಂತ್ರಿಸುತ್ತಿದ್ದಾರೆ" ಎಂದು ದುಶ್ಯಂತ ನ್ಯಾಯಾಲಯಕ್ಕೆ ಮನವರಿಕೆ ಮಾಡಿಸಿದರು.