ನವದೆಹಲಿ : ಪೂರ್ವ ಲಡಾಖ್‌ನ ಗಾಲ್ವನ್‌ನಲ್ಲಿ ಕಳೆದ 45 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಡ್ರ್ಯಾಗನ್ ರಾಷ್ಟ್ರ ಭಾರತದ ಸೈನಿಕರ ರಕ್ತದೋಕುಳಿ ನಡೆಸಿದೆ. ಕಳೆದ ಸೋಮವಾರ ನಡೆಸಿರುವ ಬಂದೂಕು ರಹಿತ ಮುಖಾಮುಖಿ ಗಲಾಟೆಯಲ್ಲಿ ಮೊದಲಿಗೆ ಕರ್ನಲ್ ಮಟ್ಟದ ಸೇನಾಧಿಕಾರಿ ಸೇರಿ ಮೂವರು ಯೋಧರು ಹುತಾತ್ಮರಾಗಿದ್ದಾರೆ ಎನ್ನಲಾಗಿತ್ತು. ಆದರೆ, ನಿನ್ನೆ ಸಂಜೆಯ ವೇಳೆಗೆ ಭಾರತದ ಒಟ್ಟು 20 ಯೋಧರು ಹುತಾತ್ಮರಾಗಿದ್ದಾರೆ.
ಸೋಮವಾರ ರಾತ್ರಿ ನಡೆದಿರುವ ಮುಖಾಮುಖಿ ಘರ್ಷಣೆಯಲ್ಲಿ ಭಾರತದ ಸೈನಿಯಕರು ಕೂಡ ಪ್ರತಿರೋಧ ನೀಡಿದ್ದು, ಕಮ್ಯುನಿಸ್ಟರ ನಾಡಿನ ಸುಮಾರು 43ಕ್ಕೂ ಹೆಚ್ಚು ಸೈನಿಕರು ತೀವ್ರವಾಗಿ ಗಾಯಗೊಂಡಿದೆ. ಇದರಲ್ಲಿ ಹಲವರು ಮೃತಪಟ್ಟಿರುವ ಶಂಕೆ ಇದೆ. ಆದರೆ, ಚೀನಾ ಸೈನಿಕರು ಎಷ್ಟು ಮಂದಿ ಮೃತಪಟ್ಟಿದ್ದಾರೆ ಎಂಬುದು ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಕಳೆದ ಎರಡು ಮೂರು ತಿಂಗಳಿನಿಂದ ಎಲ್‌ಎಸಿಯಲ್ಲಿ ಉಭಯ ದೇಶಗಳ ಯೋಧರಿಂದ ಸಣ್ಣಪುಟ್ಟ ಗಲಾಟೆಗಳು ನಡೆಯುತ್ತಲೇ ಇದ್ದವು.
ಆದರೆ, ಇದೇ ಮೊದಲ ಬಾರಿಗೆ ಘರ್ಷಣೆ ಇಷ್ಟೊಂದು ತೀವ್ರಗೊಂಡಿರುವುದು. ಇನ್ನೂ ಜೂನ್ 6ರಂದು ಸೇನಾ ಮಟ್ಟದಲ್ಲಿ ಮಾತುಕತೆಯಾಗಿ ಗಡಿಯಲ್ಲಿ ಶಾಂತಿ ಕಾಪಾಡುವಂತೆ ಮಹತ್ವದ ಹೆಜ್ಜೆ ಇಟ್ಟಿದ್ದವು. ಇದಾದ ಹತ್ತೇ ದಿನದಲ್ಲಿ ವಾಸ್ತವ ಗಡಿ ರೇಖೆಯಲ್ಲಿ ಯಾರೂ ಊಹಿಸದ ಘಟನೆ ನಡೆದಿದೆ. ಸದ್ಯ ಇದು ವಿಶ್ವದ ಗಮನ ಸೆಳೆದಿದೆ. ವಿಶ್ವದ ದೊಡ್ಡಣ್ಣ ಅಮೆರಿಕಾ ಕೂಡ ಉಭಯ ದೇಶಗಳ ನಡುವಿನ ಗಲಾಟೆ ಗಮನಿಸುತ್ತಿದೆ.
ಸರ್ವಪಕ್ಷ ಸಭೆ ಕರೆದ ಪ್ರಧಾನಿ ಮೋದಿ : ಪ್ರಧಾನಿ ನರೇಂದ್ರ ಮೋದಿ ಗಡಿಯಲ್ಲಿ ಉಂಟಾಗಿರುವ ಘರ್ಷಣೆ ಬಗ್ಗೆ ಚರ್ಚಿಸಲು ಸರ್ವಪಕ್ಷ ಸಭೆ ಕರೆದಿದ್ದಾರೆ. ಜೂನ್ 19ರಂದು ಸಂಜೆ 5 ಗಂಟೆಗೆ ವರ್ಚುಲ್ ಸಭೆ ನಡೆಯಲಿದೆ. ಮುಂದೆ ಸರ್ಕಾರ ಕೈಗೊಳ್ಳಬೇಕಾದ ಪ್ರಮುಖ ನಿರ್ಧಾರಗಳ ಬಗ್ಗೆ ವಿಪಕ್ಷ ನಾಯಕರಿಂದ ಪ್ರಧಾನಿ ಮೋದಿ ಸಲಹೆಗಳನ್ನು ಪಡೆಯಲಿದ್ದಾರೆ. ನಂತರ ಮುಂದಿನ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ವಿವಿಧ ಪಕ್ಷಗಳು ಅಧ್ಯಕ್ಷರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಧಾನಿ ಕಚೇರಿ ಮೂಲಗಳು ಸ್ಪಷ್ಟಪಡಿಸಿವೆ.
ಜಗತ್ತಿನ ಮುಂದೆ ಚೀನಾ ನೌಟಂಕಿ ಆಟ ಬಯಲು ಮಾಡ್ತಾರಾ? : ಚೀನಾದಲ್ಲಿ ಅಧ್ಯಕ್ಷ ಕ್ಸಿ ಜಿಂಗ್‌ಪಿಂಗ್ ವಿರುದ್ಧದ ಅಲೆ ಎದ್ದಿರುವುದು ಗುಟ್ಟಾಗಿ ಉಳಿದಿಲ್ಲ. ಮಾತ್ರವಲ್ಲದೆ ಕೊರೊನಾ ವೈರಸ್ ಹರಡಿಸಿರುವುದರಿಂದ ಅಮೆರಿಕಾ ಸೇರಿ ಇಡೀ ಜಗತ್ತು ಚೀನಾ ವಿರುದ್ಧ ಆಕ್ರೋಶಗೊಂಡಿದೆ. ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಮತ್ತು ಚೀನಿಯರಿಂದ ಅನುಕಂಪ ಗಿಟ್ಟಿಸಿಕೊಂಡು ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ಜಿಂಗ್ ಪಿಂಗ್ ಈ ರೀತಿಯ ಸೇನಾ ಪ್ರಯೋಗಗಳನ್ನು ಮಾಡುತ್ತಿದ್ದಾರೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ. ಇಂತಹ ಜಿಂಗ್‌ಪಿಂಗ್ ಅವರ ನೌಟಂಕಿ ಆಟವನ್ನು ವಿಶ್ವದ ಮಟ್ಟದ ವೇದಿಕೆಯಲ್ಲಿ ಪ್ರಧಾನಿ ಮೋದಿ ಬಯಲು ಮಾಡುವ ಸಾಧ್ಯತೆ ಇದೆ.
ಎಐಸಿಸಿ ನಾಯಕ ರಾಹುಲ್ ಗಾಂಧಿ ಸೇರಿ ವಿಪಕ್ಷಗಳ ನಾಯಕರು ಗಡಿಯಲ್ಲಿ ಉಂಟಾಗಿರುವ ಘರ್ಷಣೆ ಸಂಬಂಧ ಪ್ರಧಾನಿ ಮೋದಿ ಅವರನ್ನು ಮೌನವನ್ನು ಪ್ರಶ್ನಿಸಿದ್ದಾರೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಸರ್ವಪಕ್ಷದ ಸಭೆ ಕರೆದಿದ್ದಾರೆ. ಚೀನಾ ವಿರುದ್ಧ ಸೇಡು ಮೋದಿ ಸೇಡು ತೀರಿಸಿಕೊಳ್ಳುತ್ತಾರಾ ನೋಡಬೇಕು.