ETV Bharat / bharat

ಆಸ್ಪತ್ರೆಗೆ ತೆರಳುವಾಗ ಮಾರ್ಗಮಧ್ಯೆ ಬಸ್​ನಲ್ಲೇ ಮಗುವಿಗೆ ಜನ್ಮ - ಬಸ್​ನಲ್ಲಿ ಹೆರಿಗೆ

ಗರ್ಭಿಣಿಯೊಬ್ಬಳು ಸರ್ಕಾರಿ ಬಸ್​​ನಲ್ಲಿಯೇ ಮಗುವಿಗೆ ಜನ್ಮ ನೀಡಿರುವ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.

pregnant women
pregnant women
author img

By

Published : May 2, 2020, 12:16 PM IST

ಕೋಟಾ(ರಾಜಸ್ಥಾನ): ದೇಶದಲ್ಲಿ ಲಾಕ್​ಡೌನ್ ಜಾರಿಯಲ್ಲಿರುವ ಕಾರಣ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ತೆರಳಲು ಸಾಧ್ಯವಾಗದಂತಹ ಪರಿಸ್ಥಿತಿ ಇದೆ. ಹೀಗಾಗಿ ಪ್ರಸವ ವೇದನೆ ತಾಳಲಾರದೆ ಗರ್ಭಿಣಿ ಸಿಟಿ ಬಸ್​ನಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ.

ಬಸ್​ ಚಾಲಕ ಓಂ ಪ್ರಕಾಶ್​ ಹಾಗೂ ಆಶಾ ಕಾರ್ಯಕರ್ತೆ ಸಹಾಯದಿಂದ ಹೆರಿಗೆ ಮಾಡಿಸಲಾಗಿದೆ. ತದನಂತರ ಅವರನ್ನು ಜೆ.ಕೆ. ಲಾನ್​ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರೆದಿದೆ.

pregnant women
ಸಿಟಿ ಬಸ್​ನಲ್ಲಿ ಮುದ್ದಾದ ಮಗುವಿಗೆ ಜನ್ಮ ನೀಡಿದ ಮಹಿಳೆ

ದೇಶದಲ್ಲಿ ಲಾಕ್​ಡೌನ್​ ಇರುವ ಕಾರಣ ಯಾವುದೇ ಸರ್ಕಾರಿ ಬಸ್‌ಗಳು ರಸ್ತೆಗಿಳಿಯುತ್ತಿಲ್ಲ. ಆದರೆ ರಾಜಸ್ಥಾನದಲ್ಲಿ ಗರ್ಭಿಣಿ ಮಹಿಳೆಯರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಬಸ್​ ಬಳಕೆ ಮಾಡಲಾಗ್ತಿದ್ದು, ಬಸ್ ಹತ್ತಿ ಕೆಲ ದೂರು ಹೋಗುತ್ತಿದ್ದಂತೆ ಪ್ರಸವ ವೇದನೆ ಶುರುವಾಗಿತ್ತು.

ಆಸ್ಪತ್ರೆಯಲ್ಲಿ ತಾಯಿ-ಮಗು ಆರೋಗ್ಯವಾಗಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.