ನವದೆಹಲಿ: ರಾಷ್ಟ್ರಪಿತ ಮಹಾತ್ಮಾ ಗಾಂಧಿ ಕೊಂದ ಗೋಡ್ಸೆ 'ಓರ್ವ ದೇಶಭಕ್ತ' ಎಂದು ಹೇಳಿಕೆ ನೀಡಿ ಈ ಹಿಂದೆ ಎಲ್ಲರ ಕಂಗೆಣ್ಣಿಗೆ ಗುರಿಯಾಗಿದ್ದ ಬಿಜೆಪಿ ಭೋಪಾಲ್ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಇದೀಗ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ.
ಮಾಲೆಗಾಂವ್ ಸ್ಫೋಟ ಪ್ರಕರಣ ಆರೋಪಿಯಾಗಿರುವ ಇವರು ಈ ಹಿಂದೆ ಬಿಜೆಪಿಯಿಂದ ಟಿಕೆಟ್ ಪಡೆದುಕೊಂಡು ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಈ ವೇಳೆ ಪ್ರಚಾರ ನಡೆಸುತ್ತಿದ್ದಾಗ ಗೋಡ್ಸೆ ನಿಜವಾದ ದೇಶಭಕ್ತ ಎಂದು ಕರೆದಿದ್ದರು.
ಇಂದು ನಡೆದ ಸಂಸದ ಅಧಿವೇಶನದ ವೇಳೆ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಅವರನ್ನ ದೇಶಭಕ್ತ ಎಂದು ಅವರು ಕರೆದಿದ್ದು, ಅವರ ಹೇಳಿಕೆ ಖಂಡಿಸಿ ವಿರೋಧ ಪಕ್ಷಗಳು ಪ್ರತಿಭಟನೆ ಸಹ ನಡೆಸಿದವು.
-
#WATCH BJP MP Pragya Singh Thakur on reports of her referring to Nathuram Godse as 'deshbhakt' in Lok Sabha: Pehle usko poora suniye, mai kal dungi jawab. pic.twitter.com/4xieTz5HpH
— ANI (@ANI) November 27, 2019 " class="align-text-top noRightClick twitterSection" data="
">#WATCH BJP MP Pragya Singh Thakur on reports of her referring to Nathuram Godse as 'deshbhakt' in Lok Sabha: Pehle usko poora suniye, mai kal dungi jawab. pic.twitter.com/4xieTz5HpH
— ANI (@ANI) November 27, 2019#WATCH BJP MP Pragya Singh Thakur on reports of her referring to Nathuram Godse as 'deshbhakt' in Lok Sabha: Pehle usko poora suniye, mai kal dungi jawab. pic.twitter.com/4xieTz5HpH
— ANI (@ANI) November 27, 2019
ಲೋಕಸಭೆಯಲ್ಲಿ ವಿಶೇಷ ಭದ್ರತಾ ಕಾಯ್ದೆ ತಿದ್ದುಪಡಿ ವೇಳೆ ಡಿಎಂಕೆ ಸಂಸದ ಎ.ರಾಜಾ ಮಾತನಾಡಿ, ಗೋಡ್ಸೆ ಗಾಂಧಿಯವರನ್ನ ಏಕೆ ಕೊಂದರು ಎಂದು ಪ್ರಶ್ನೆ ಮಾಡಿದಾಗ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಮಧ್ಯಪ್ರವೇಶ ಮಾಡಿ ದೇಶ ಭಕ್ತರನ್ನು ನೀವು ಉದಾಹರಣೆಯಾಗಿ ಇಲ್ಲಿ ನೀಡಬೇಡಿ ಎಂದಿದ್ದಾರೆ. ಈ ಹಿಂದೆ ಸಹ ಇಂತಹ ಹೇಳಿಕೆ ನೀಡಿದ್ದ ಠಾಕೂರ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದರು.
-
Pragya S Thakur: They (Congress) say I'm a terrorist but they are the ones who gave protection to a terrorist. Even after 34 yrs life remains affected. People are still not in the condition to work. Many labourers have demanded for MRS, where they can retire on medical grounds. https://t.co/49kVEbkQtU
— ANI (@ANI) November 27, 2019 " class="align-text-top noRightClick twitterSection" data="
">Pragya S Thakur: They (Congress) say I'm a terrorist but they are the ones who gave protection to a terrorist. Even after 34 yrs life remains affected. People are still not in the condition to work. Many labourers have demanded for MRS, where they can retire on medical grounds. https://t.co/49kVEbkQtU
— ANI (@ANI) November 27, 2019Pragya S Thakur: They (Congress) say I'm a terrorist but they are the ones who gave protection to a terrorist. Even after 34 yrs life remains affected. People are still not in the condition to work. Many labourers have demanded for MRS, where they can retire on medical grounds. https://t.co/49kVEbkQtU
— ANI (@ANI) November 27, 2019
ಠಾಕೂರ್ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ವರದಿಗಾರರು ಪ್ರಶ್ನೆ ಮಾಡಿದಾಗ, ಇದಕ್ಕೆ ಸಂಬಂಧಿಸಿದಂತೆ ನಾನು ನಾಳೆ ಉತ್ತರ ನೀಡುವೆ ಎಂದಿದ್ದಾರೆ.
ಸ್ಪಷ್ಟನೆ ನೀಡಿದ ಪ್ರಹ್ಲಾದ್ ಜೋಶಿ
-
Parliamentary Affairs Minister Pralhad Joshi on reports of BJP's Pragya Thakur referring to Nathuram Godse as 'deshbhakt' in Lok Sabha: Her mic was not on, she made the objection when the name of Udham Singh was being taken. She has even explained this & told it to me personally. pic.twitter.com/RJmpwzMF0b
— ANI (@ANI) November 27, 2019 " class="align-text-top noRightClick twitterSection" data="
">Parliamentary Affairs Minister Pralhad Joshi on reports of BJP's Pragya Thakur referring to Nathuram Godse as 'deshbhakt' in Lok Sabha: Her mic was not on, she made the objection when the name of Udham Singh was being taken. She has even explained this & told it to me personally. pic.twitter.com/RJmpwzMF0b
— ANI (@ANI) November 27, 2019Parliamentary Affairs Minister Pralhad Joshi on reports of BJP's Pragya Thakur referring to Nathuram Godse as 'deshbhakt' in Lok Sabha: Her mic was not on, she made the objection when the name of Udham Singh was being taken. She has even explained this & told it to me personally. pic.twitter.com/RJmpwzMF0b
— ANI (@ANI) November 27, 2019
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಂಸದೀಯ ವ್ಯವಹಾರಗಳ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಪ್ರಗ್ಯಾ ಸಿಂಗ್ ತಮ್ಮ ಭಾಷಣದಲ್ಲಿ ಗೋಡ್ಸೆ ಹೆಸರು ಬಳಕೆ ಮಾಡಿಲ್ಲ. ಅವರು ಮಾತನಾಡುತ್ತಿದ್ದ ವೇಳೆ ಹಾಕಿಕೊಂಡಿದ್ದ ಮೈಕ್ ಆನ್ ಆಗಿರಲಿಲ್ಲ. ಇದಕ್ಕೆ ಸಂಬಂಧಿಸಿದಂತೆ ನನ್ನ ಹತ್ತಿರ ವೈಯಕ್ತಿಕವಾಗಿ ಮಾತನಾಡಿದ್ದು, ಆ ರೀತಿಯಾಗಿ ಸುದ್ದಿ ಬಿತ್ತರಿಸುತ್ತಿರುವುದು ಸರಿಯಲ್ಲ ಎಂದಿದ್ದಾರೆ.
ಹಾಗೆಯೇ ಅವರ ಹೇಳಿಕೆಯನ್ನು ಕಡತದಿಂದ ತೆಗೆದು ಹಾಕಲಾಗಿದೆ ಎಂದು ಸ್ಪೀಕರ್ ಓಂ ಬಿರ್ಲಾ ತಿಳಿಸಿದ್ದಾರೆ