ETV Bharat / bharat

ಜಾರ್ಜಿಯಾದಿಂದ ಮರಳಿ ಸೆಲ್ಫ್​ ಕ್ವಾರಂಟೈನ್​ ಆದ ಬಾಹುಬಲಿ...ಜಾಗೃತರಾಗಿರಿ ಎಂಬುದು ಪ್ರಭಾಸ್​ ಕಳಕಳಿ - ದಕ್ಷಿಣ ಸೂಪರ್ ಸ್ಟಾರ್ ಪ್ರಭಾಸ್

ಜಾರ್ಜಿಯಾದಲ್ಲಿ ನಡೆಯುತ್ತಿದ್ದ ಚಿತ್ರೀಕರಣ ಮುಗಿಸಿ ತವರಿಗೆ ಮರಳಿರುವ ಬಾಹುಬಲಿ ನಟ ಪ್ರಭಾಸ್​ ಅವರು ಸೆಲ್ಫ್​ ಕ್ವಾರಂಟೈನ್​ ನಲ್ಲಿದ್ದಾರೆ(ಸ್ವಯಂ ನಿರ್ಬಂಧ). ಈ ಕುರಿತು ಟ್ವೀಟ್​ ಮಾಡಿರುವ ಅವರು ಈ ವಿಷಯ ತಿಳಿಸಿದ್ದಾರೆ.

Prabhas in self-quarantine after returning from film's shoot abroad
ಸೆಲ್ಫ್​ ಕ್ವಾರಂಟೈನ್​ ನಲ್ಲಿರುವ ದಕ್ಷಿಣ ಸೂಪರ್ ಸ್ಟಾರ್ ಪ್ರಭಾಸ್
author img

By

Published : Mar 22, 2020, 10:51 AM IST

ಹೈದರಾಬಾದ್​(ತೆಲಂಗಾಣ): ಕರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ದಕ್ಷಿಣ ಸೂಪರ್ ಸ್ಟಾರ್ ಪ್ರಭಾಸ್ ತಾನು ಸ್ವಯಂ-ನಿರ್ಬಂಧ (ಸೆಲ್ಫ್​ ಕ್ವಾರಂಟೈನ್​) ದಲ್ಲಿದ್ದೇನೆ ಎಂದು ಘೋಷಿಸಿದ್ದಾರೆ.

ಬಾಹುಬಲಿ ನಟ "ತಾನು ಇತ್ತೀಚೆಗೆ ಜಾರ್ಜಿಯಾದಿಂದ ಚಿತ್ರದ ಚಿತ್ರೀಕರಣ ಮುಗಿಸಿ ಹಿಂದಿರುಗಿದ್ದೇನೆ. ಕೋವಿಡ್​-19 ರ ಅಪಾಯಗಳ ಬೆಳಕಿನಲ್ಲಿಯೇ ವಿದೇಶದಲ್ಲಿ ನನ್ನ ಚಿತ್ರೀಕರಣ ಮುಗಿಸಿ ಸುರಕ್ಷಿತವಾಗಿ ಮರಳಿರುವ ನಾನು ಸ್ವಯಂ-ನಿರ್ಬಂಧವನ್ನು ಹಾಕಿಕೊಳ್ಳಲು ನಿರ್ಧರಿಸಿದ್ದೇನೆ. ಹಾಗೆಯೇ ನೀವೆಲ್ಲರೂ ಸುರಕ್ಷಿತವಾಗಿರಲು ಅಗತ್ಯವಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದೀರಿ ಎಂದು ಭಾವಿಸುತ್ತೇವೆ" ಎಂದು ಶನಿವಾರ ಟ್ವೀಟ್ ಮಾಡಿ ಹೇಳಿಕೊಂಡಿದ್ದಾರೆ.

ಪ್ರಭಾಸ್​ ಪ್ರಸ್ತುತ ಚಿತ್ರ ನಿರ್ಮಾಪಕ ರಾಧಾ ಕೃಷ್ಣ ಕುಮಾರ್ ಅವರ ಹೆಸರಿಡದ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದು, ಇದರಲ್ಲಿ ಪೂಜಾ ಹೆಗ್ಡೆ ಕೂಡ ಕಾಣಿಸಿಕೊಂಡಿದ್ದಾರೆ.

ಇನ್ನೂ ಅನುಪಮ್ ಖೇರ್ ಮತ್ತು ಶಬಾನಾ ಅಜ್ಮಿ ಸೇರಿದಂತೆ ವಿದೇಶದಿಂದ ಹಿಂದಿರುಗಿದ ನಂತರ ಹಲವಾರು ಭಾರತೀಯ ಗಣ್ಯರು ಸ್ವಯಂ-ನಿರ್ಬಂಧದಲ್ಲಿದ್ದಾರೆ. ಕೊರೊನಾ ವೈರಸ್ ಸೋಂಕು ಹರಡುವಿಕೆ ತಪ್ಪಿಸಲು ತಾನು ಸಂಪೂರ್ಣವಾಗಿ ಪ್ರತ್ಯೇಕವಾಗಿರುವುದಾಗಿ 97 ವರ್ಷದ ಪ್ರಸಿದ್ಧ ನಟ ದಿಲೀಪ್ ಕುಮಾರ್ ಸೋಮವಾರ ಹೇಳಿದ್ದಾರೆ. ಹಾಗೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಆರೋಗ್ಯ ದಿಲೀಪ್​ ತಮ್ಮ ನವೀಕರಣವನ್ನು ಹಂಚಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.