ಮುಂಬೈ: ನಟ ತಾಪ್ಸಿ ಪನ್ನು ಅವರು 2020ರ ಜೂನ್ ತಿಂಗಳಿಗೆ ತಮ್ಮ ವಿದ್ಯುತ್ ಬಿಲ್ನಲ್ಲಿ ಅತಿ ಏರಿಕೆ ಕಂಡು ಬಂದಿದೆ ಎಂದು ದೂರು ನೀಡಿದ್ದಾರೆ. ಈ ಬಗ್ಗೆ ದೂರು ನೀಡಿದ ಕೆಲವೇ ಗಂಟೆಗಳಲ್ಲಿ ಕಂಪನಿಯು ಈ ವಿಷಯದಲ್ಲಿ ಸ್ಪಷ್ಟೀಕರಣವನ್ನು ನೀಡಿದೆ.
-
And this one is for an apartment where no one stays n it’s only visited once in a week for cleaning purpose @Adani_Elec_Mum I am now worried if someone is actually using the apartment without our knowledge and you have helped us uncover the reality 🤷🏻♀️ pic.twitter.com/GeBQUSJaft
— taapsee pannu (@taapsee) June 28, 2020 " class="align-text-top noRightClick twitterSection" data="
">And this one is for an apartment where no one stays n it’s only visited once in a week for cleaning purpose @Adani_Elec_Mum I am now worried if someone is actually using the apartment without our knowledge and you have helped us uncover the reality 🤷🏻♀️ pic.twitter.com/GeBQUSJaft
— taapsee pannu (@taapsee) June 28, 2020And this one is for an apartment where no one stays n it’s only visited once in a week for cleaning purpose @Adani_Elec_Mum I am now worried if someone is actually using the apartment without our knowledge and you have helped us uncover the reality 🤷🏻♀️ pic.twitter.com/GeBQUSJaft
— taapsee pannu (@taapsee) June 28, 2020
ಡಿಸೆಂಬರ್, ಜನವರಿ ಮತ್ತು ಫೆಬ್ರವರಿ, ಚಳಿಗಾಲದ ತಿಂಗಳುಗಳು. ಆ ನಂತರದ ಮಾರ್ಚ್- ಏಪ್ರಿಲ್ ಮತ್ತು ಮೇ, ಜೂನ್ ಬೇಸಿಗೆ ತಿಂಗಳುಗಳಾಗಿರುವುದರಿಂದ ಸಹಜವಾಗೇ ವಿದ್ಯುತ್ ಬಿಲ್ ಹೆಚ್ಚಾಗಿದೆ. ಹೀಗಾಗಿ ದೂರುಗಳು ಬರುತ್ತಿವೆ ಎಂದು ಅದಾನಿ ವಿದ್ಯುತ್ ಮುಂಬೈ ಲಿಮಿಟೆಡ್ (ಎಇಎಂಎಲ್) ವಕ್ತಾರರು ತಿಳಿಸಿದ್ದಾರೆ.
ತಾಪ್ಸಿ ಒಬ್ಬರೇ ಅಲ್ಲ ಹಲವರು ಈ ಬಗ್ಗೆ ದೂರುಗಳನ್ನು ನೀಡುತ್ತಲೇ ಇದ್ದಾರೆ. ಈ ಹಿನ್ನೆಲೆಯಲ್ಲಿ ಕಂಪನಿ ಸ್ಪಷ್ಟನೆ ನೀಡಿದ್ದು, ಕಳೆದ ಅವಧಿಯ ಬಿಲ್ ಮೊತ್ತವನ್ನು ಮಹಾರಾಷ್ಟ್ರ ವಿದ್ಯುತ್ ನಿಯಂತ್ರಣ ಆಯೋಗದ (ಎಂಇಆರ್ಸಿ) ಮಾರ್ಗಸೂಚಿಗಳ ಪ್ರಕಾರ ಲೆಕ್ಕ ಹಾಕಿ ನೀಡಲಾಗಿದೆ ಎಂದು ವಿದ್ಯುತ್ ನಿಗಮ, ತಾನು ಹಾಕಿರುವ ಬಿಲ್ ಬಗ್ಗೆ ಸಮರ್ಥಿಸಿಕೊಂಡಿದೆ.
3 ತಿಂಗಳ ಲಾಕ್‌ಡೌನ್ ಅವಧಿಯಲ್ಲಿ ನನ್ನ ವಿದ್ಯುತ್ ಬಿಲ್ನಲ್ಲಿ ಭಾರೀ ಏರಿಕೆಯಾಗಿದೆ. ನೀವು ನಮಗೆ ಯಾವ ರೀತಿಯ ವಿದ್ಯುತ್ ಬಿಲ್ ದರ ಹೆಚ್ಚಳ ಮಾಡಿದ್ದೀರಿ ಎಂದು ತಾಪ್ಸಿ ಟ್ವಿಟರ್ನಲ್ಲಿ ಪ್ರಶ್ನಿಸಿದ್ದರು. ಅದರೊಂದಿಗೆ, ಅವರು ವಿದ್ಯುತ್ ಬಿಲ್ಗಳ ಫೋಟೋಗಳನ್ನು ಲಗತ್ತಿಸಿದ್ದರು.