ಶ್ರೀನಗರ (ಜಮ್ಮು-ಕಾಶ್ಮೀರ): ಸುಮಾರು 70 ದಿನಗಳ ಬಳಿಕ ಜಮ್ಮು-ಕಾಶ್ಮೀರದಲ್ಲಿ ಸ್ಥಗಿತಗೊಂಡಿದ್ದ ಪೋಸ್ಟ್ ಪೇಯ್ಡ್ ಮೊಬೈಲ್ ಸೇವೆ ಪುನಾರಂಭವಾಗಿದೆ.
ಜಮ್ಮು-ಕಾಶ್ಮೀರದಲ್ಲಿ 370 ವಿಧಿ ರದ್ದತಿ ಬಳಿಕ ಮೊಬೈಲ್ ಸಂಪರ್ಕ ಸೇವೆಯನ್ನು ಕಡಿತಗೊಳಿಸಲಾಗಿತ್ತು. ಇಂದು ರಾಜ್ಯ ಸಂಚಾಲಿತ ಬಿಎಸ್ಎನ್ಎಲ್ ನೆಟ್ವರ್ಕ್ನಿಂದ ಪೋಸ್ಟ್ ಪೇಯ್ಡ್ ಮೊಬೈಲ್ ಸೇವೆ ಪುನಾರಂಭವಾಗಿದೆ. ಆದರೆ ಇಂಟರ್ನೆಟ್ ಮತ್ತು ಬ್ರಾಡ್‌ಬ್ಯಾಂಡ್ ಸೇವೆ ಮೇಲಿನ ನಿಷೇಧವನ್ನು ಮುಂದುವರೆಸಲಾಗಿದೆ.
-
Postpaid mobile services restored in the remaining parts of Jammu & Kashmir. Visuals from Srinagar. pic.twitter.com/ncm3NJD1b6
— ANI (@ANI) October 14, 2019 " class="align-text-top noRightClick twitterSection" data="
">Postpaid mobile services restored in the remaining parts of Jammu & Kashmir. Visuals from Srinagar. pic.twitter.com/ncm3NJD1b6
— ANI (@ANI) October 14, 2019Postpaid mobile services restored in the remaining parts of Jammu & Kashmir. Visuals from Srinagar. pic.twitter.com/ncm3NJD1b6
— ANI (@ANI) October 14, 2019
ಇನ್ನು, ಇಂದಿನಿಂದ ಸುಮಾರು 40 ಲಕ್ಷ ಪೋಸ್ಟ್ ಪೇಯ್ಡ್ ಮೊಬೈಲ್ ಫೋನ್‌ಗಳು ಪುನಃ ಕಾರ್ಯ ನಿರ್ವಹಿಸಲಿವೆ. ಆದ್ರೆ 20 ಲಕ್ಷಕ್ಕೂ ಹೆಚ್ಚು ಪ್ರಿ ಪೇಯ್ಡ್ ಮೊಬೈಲ್ ಫೋನ್‌ಗಳು ಮತ್ತು ಮೊಬೈಲ್ ಮತ್ತು ಇತರೆ ಇಂಟರ್ನೆಟ್ ಸೇವೆಗಳ ಆರಂಭಕ್ಕೆ ಅವಕಾಶ ನೀಡಿಲ್ಲವೆಂಬ ಮಾಹಿತಿ ಸಿಕ್ಕಿದೆ.
ಈ ನಿಷೇಧ ಹಿಂತೆಗೆತದಿಂದ ಪೋಸ್ಟ್ ಪೇಯ್ಡ್ ಮೊಬೈಲ್ ಬಳಸಬಹುದಾಗಿದ್ದು, ಜನರು ಕೊಂಚ ನಿರಾಳರಾಗಿದ್ದಾರೆ.