ETV Bharat / bharat

ಹೈದರಾಬಾದ್ ಪಾಲಿಕೆ ಚುನಾವಣೆ: ಅಂಚೆ ಮತ ಎಣಿಕೆಯಲ್ಲಿ ಬಿಜೆಪಿಗೆ ಭರ್ಜರಿ ಮುನ್ನಡೆ

ಪ್ರತಿಷ್ಠೆಯ ಕಣವಾಗಿರುವ ಹೈದರಾಬಾದ್ ಪಾಲಿಕೆ ಫಲಿತಾಂಶದಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಅಂಚೆ ಪತ ಎಣಿಕೆ ಪೂರ್ಣಗೊಂಡಿದ್ದು, 150 ವಾರ್ಡ್​​ಗಳ ಪೈಕಿ ಬಿಜೆಪಿ ಬರೋಬ್ಬರಿ 85 ಕ್ಷೇತ್ರಗಳಲ್ಲಿ ಮುನ್ನಡೆ ಗಳಿಸಿದೆ.

postal ballet counting completed.. bjp lead in 85 seats
ಹೈದರಾಬಾದ್ ಪಾಲಿಕೆ ಚುನಾವಣೆ
author img

By

Published : Dec 4, 2020, 11:11 AM IST

Updated : Dec 4, 2020, 11:32 AM IST

ಹೈದರಾಬಾದ್​: ಇಲ್ಲಿನ ಮಹಾನಗರ ಪಾಲಿಕೆ ಫಲಿತಾಂಶದ ಅಂಚೆ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಟಿಆರ್​ಎಸ್​ ವಿರುದ್ಧ ಸಮರ ಸಾರಿದ್ದ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.

ಬಿಜೆಪಿ 85 ವಾರ್ಡ್​ನಲ್ಲಿ ಮುನ್ನಡೆ ದಾಖಲಿಸಿದ್ದರೆ, ಟಿಆರ್​​ಎಸ್​​ 29, ಎಐಎಂಐಎಂ 17 ಹಾಗೂ ಕಾಂಗ್ರೆಸ್ 2 ವಾರ್ಡ್​ನಲ್ಲಿ ಮುನ್ನಡೆ ಗಳಿಸಿದೆ.

ಇನ್ನು 17 ವಾರ್ಡ್​​ಗಳಲ್ಲಿ ಯಾವೊಂದು ಪಕ್ಷವೂ ಸ್ಪಷ್ಟ ಮುನ್ನಡೆ ದಾಖಲಿಸಿಲ್ಲ.

ಪಾಲಿಕೆಯ ಬಹುಪಾಲು ಫಲಿತಾಂಶವು 2ನೇ ಸುತ್ತಿನ ಮತ ಎಣಿಕೆ ಬಳಿಕ ಹೊರಬೀಳುವ ಸಾಧ್ಯತೆ ಇದೆ. 2ನೇ ಸುತ್ತಿನ ಫಲಿತಾಂಶವನ್ನು ಮಧ್ಯಾಹ್ನ 3 ಗಂಟೆಗೆ ಘೋಷಿಸುವ ಸಾಧ್ಯತೆ ಇದೆ. ಹೀಗೇನಾದರೂ ನಡೆದರೆ ಸಂಜೆ 5ರ ಒಳಗಾಗಿ ಪಾಲಿಕೆಯ ಸಂಪೂರ್ಣ ಫಲಿತಾಂಶ ಹೊರಬೀಳಲಿದೆ. ಮೆಹದಿಪಟ್ಟಣಂನಲ್ಲಿ ಕಡಿಮೆ ಪ್ರಮಾಣದ ಮತ ಚಲಾವಣೆಯಾಗಿರುವುದರಿಂದ ಮೊದಲ ಸುತ್ತಿನಲ್ಲಿ ಫಲಿತಾಂಶ ಪ್ರಕಟಗೊಳ್ಳಲಿದೆ.

ಓದಿ: ಹೈದರಾಬಾದ್ ಪಾಲಿಕೆ ಚುನಾವಣೆ: ಪ್ರಗತಿಯಲ್ಲಿದೆ ಮತ ಎಣಿಕೆ ಕಾರ್ಯ

Last Updated : Dec 4, 2020, 11:32 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.