ETV Bharat / bharat

ವಿಶೇಷ ಅಂಕಣ: ವಿರೋಧಿಗಳನ್ನು ಹತ್ತಿಕ್ಕುವಲ್ಲಿ ಮೇಲುಗೈ ಸಾಧಿಸುತ್ತಿದ್ದ ರಾಜಕೀಯ ಜಾದೂಗಾರ ಅಶೋಕ್​ ಗೆಹ್ಲೋಟ್ - ಅಶೋಕ್ ಗೆಹ್ಲೋಟ್

ರಾಜಸ್ಥಾನ ಮಾತ್ರವಲ್ಲದೇ ಭಾರತೀಯ ರಾಜಕೀಯ ರಂಗದಲ್ಲಿಯೂ ಮಿಂಚಿದ ಅಶೋಕ್ ಗೆಹ್ಲೋಟ್ ಕುರಿತಾದ ಕೆಲವು ಮಾಹಿತಿ ಇಲ್ಲಿವೆ.

Ashok Gehlot
ಅಶೋಕ್​ ಗೆಹ್ಲೋಟ್
author img

By

Published : Jul 15, 2020, 12:03 PM IST

ಅದು 1971ರ ಸುಮಾರು ಪೂರ್ವ ಬಂಗಾಳದಲ್ಲಿ ನಿರಾಶ್ರಿತರ ಬಿಕ್ಕಟ್ಟು ಉಲ್ಬಣಿಸಿದ್ದ ಸಮಯ. ಅಲ್ಲಿನ ನಿರಾಶ್ರಿತರ ಶಿಬಿರದಲ್ಲಿ ದುರ್ಬಲರ ಸೇವೆಯಲ್ಲಿ ತೊಡಗಿದ್ದ ಒಬ್ಬ ಯುವಕ ಅವರ ಸೇವೆ ಅದೆಷ್ಟು ಗಮನ ಸೆಳೆದಿತ್ತು ಎಂದರೆ, ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ರಾಜಕೀಯಕ್ಕೆ ಸೇರಲು ಆಹ್ವಾನಿಸಿದರು. ನಂತರ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾದ (ಎನ್‌ಎಸ್‌ಯುಐ) ರಾಜ್ಯ ಘಟಕದ ಪ್ರಥಮ ಅಧ್ಯಕ್ಷರಾಗಿ ನೇಮಕಗೊಂಡರು. ಆ ವ್ಯಕ್ತಿಯೇ ರಾಜಸ್ಥಾನ ಮಾತ್ರವಲ್ಲದೇ ಭಾರತೀಯ ರಾಜಕೀಯ ರಂಗದಲ್ಲಿಯೂ ಮಿಂಚಿದ ಅಶೋಕ್ ಗೆಹ್ಲೋಟ್.

ಜೋಧಪುರದ ಜಾದುಗಾರರೊಬ್ಬರ ಮಗನಾದ ಗೆಹ್ಲೋಟ್ ರಾಜಕೀಯ ಯಕ್ಷಿಣಿಯಲ್ಲಿ ಸದಾ ಚಮತ್ಕಾರಗಳನ್ನು ಪ್ರದರ್ಶಿಸುತ್ತ ಬಂದವರು. 69 ವರ್ಷದ ಅವರು ನೆಹರು - ಗಾಂಧಿ ಕುಟುಂಬದ ಮೂರು ತಲೆಮಾರುಗಳೊಂದಿಗೆ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲ ಇಂದಿರಾ ಮತ್ತು ರಾಜೀವ್ ಗಾಂಧಿಯವರ ಸಂಪುಟದಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಪ್ರವಾಸೋದ್ಯಮ, ಕ್ರೀಡೆ, ನಾಗರಿಕ ವಿಮಾನಯಾನ ಮತ್ತು ಜವಳಿಗಳ ಖಾತೆಗಳನ್ನು ನಿರ್ವಹಿಸಿದ್ದಾರೆ.

ಗೆಹ್ಲೋಟ್ ಮತ್ತು ಮುನಿಸು:

ಗೆಹ್ಲೋಟ್ ಹಾಗೂ ಇತರ ರಾಜಕೀಯ ನಾಯಕರ ಜಗಳ ಹೊಸತಲ್ಲ. ಮುಖ್ಯಮಂತ್ರಿ ಹುದ್ದೆ ಅನುಭವಿಸುತ್ತಿದ್ದಾಗ ಅವರು ಸಾಕಷ್ಟು ಮುಖಂಡರ ಮನಸ್ತಾಪಗಳನ್ನು ಕಂಡವರು. ಮೇ ತನ್ಸು ದೂರ್ ನಹೀ ( ನಾನು ನಿಮ್ಮಿಂದ ದೂರ ಇಲ್ಲ) ಎಂಬ ಅವರನೇರ ಹಾಗೂ ಸರಳ ವರ್ತನೆ ಇಷ್ಟು ದಿನ ಕೈ ಹಿಡಿದು ನಡೆಸಿದೆ. ತಮ್ಮ ಕೈಗೆ ನಿಲುಕುವ ನಾಯಕ ಎಂಬ ಜನಸಾಮಾನ್ಯರ ಗ್ರಹಿಕೆ ಅವರನ್ನು ಸಮೂಹ ನಾಯಕನನ್ನಾಗಿ ಮಾಡಿದೆ. ಲೆಕ್ಕಾಚಾರದ ಮೆದು ಮಾತು, ಸೌಮ್ಯ ಸ್ವಭಾವ ಹಾಗೂ ಕೌಶಲ್ಯದ ಮೂಲಕ ಗೆಹ್ಲೋಟ್ ರಾಜಕೀಯ ಕಲೆಯನ್ನು ಕರಗತ ಮಾಡಿಕೊಂಡವರು. ಅದರಲ್ಲಿಯೂ ಕಾಂಗ್ರೆಸ್ಸಿನೊಳಗೆ ಒಂದೊಂದೇ ಮೆಟ್ಟಿಲೇರಲು ಈ ಕಲೆ ಅವರಿಗೆ ನೆರವಾಗಿತ್ತು. ಕಾಂಗ್ರೆಸ್ ಹೇಗೆ ವರ್ತಿಸುತ್ತದೆ ಎಂಬುದನ್ನು ಇಂಚಿಂಚೂ ಬಲ್ಲವರು ಅವರು.

ಪರಸರಾಮ್ ಮದೆರ್ನಾ ಅವರನ್ನು ಹತ್ತಿಕ್ಕಿ:

ಗೆಹ್ಲೋಟ್ 1985 ರಲ್ಲಿ ತಮ್ಮ 34ನೇ ವಯಸ್ಸಿನಷ್ಟು ಸಣ್ಣ ಪ್ರಾಯದಲ್ಲಿಯೇ ರಾಜ್ಯ ಕಾಂಗ್ರೆಸ್ ಚುಕ್ಕಾಣಿ ಹಿಡಿದರು. ಆದರೆ, ಅವರು ಮುಖ್ಯಮಂತ್ರಿಯಾಗಲು 13 ವರ್ಷ ಕಾಯಬೇಕಾಯಿತು. ಮುಖ್ಯಮಂತ್ರಿಯಾದದ್ದು 1998ರಲ್ಲಿ ಆಗ ಅವರ ವಯಸ್ಸು 47, ಈಗಿನ ಸಚಿನ್ ಪೈಲಟ್ ಅವರಂತೆಯೇ ಗೆಹ್ಲೋಟ್​ ಕೂಡ ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಪರಸರಾಮ್ ಮದೆರ್ನಾರಿಗೆ ಸವಾಲೆಸೆಯುತ್ತಿದ್ದ ಯುವ ನಾಯಕರಾಗಿದ್ದರು. ರಾಜಸ್ಥಾನದ ರಾಜಕೀಯದಲ್ಲಿ ಜಾತಿ ಒಂದು ಪ್ರಮುಖ ಅಂಶವಾಗಿದೆ.

1998 ರ ವಿಧಾನಸಭಾ ಚುನಾವಣೆಯಲ್ಲಿ ಜಾಟ್ ಸಮುದಾಯದ ನಾಯಕ ಪರಸರಾಮ್ ಮದೆರ್ನಾ ಅವರು ಸಿಎಂ ಹುರಿಯಾಳು ಎಂದು ಬಿಂಬಿತವಾಗಿದ್ದರು. ಆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 150 ಸ್ಥಾನಗಳನ್ನು ಗೆದ್ದುಕೊಂಡಿತು. ಅಂತಿಮವಾಗಿ ತಮ್ಮ ಸಮುದಾಯದ ನಾಯಕನನ್ನೇ ರಾಜಸ್ತಾನದ ಮುಖ್ಯಮಂತ್ರಿಯಾಗಿ ಪರಿಗಣಿಸಬೇಕು ಎಂಬ ಮಾತುಗಳು ಜಾಟ್ ಸಮುದಾಯದಿಂದ ಕೇಳಿ ಬಂದವು. ಆದರೆ ಗೆಹ್ಲೋಟ್ ಮುಖ್ಯಮಂತ್ರಿ ಹುದ್ದೆಗೇರುವಲ್ಲಿ ಯಶ ಕಂಡರು.

ಅದು ಮದೆರ್ನಾ ಮತ್ತು ಗೆಹ್ಲೋಟ್ ನಡುವಿನ ಹಾವು - ಮುಂಗುಸಿ ಕಾಳಗವೇ ಆಗಿತ್ತು. ಮದೆರ್ನಾ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕನ ಸ್ಥಾನ ಅನುಭವಿಸುತ್ತಿದ್ದರೆ, ಕಾಂಗ್ರೆಸ್ ಹೈಕಮಾಂಡ್ ಮನಗೆದ್ದ ಗೆಹ್ಲೋಟ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಪರಸರಾಮ್ ಮದೆರ್ನಾ ಪರ ಲಾಬಿ ಮಾಡುವ ಮೂಲಕ ತಮ್ಮ ಸಮುದಾಯದ ನಾಯಕನನ್ನೇ ರಾಜಸ್ಥಾನದ ಮುಖ್ಯಮಂತ್ರಿಯಾಗಿ ಪರಿಗಣಿಸಬೇಕು ಎಂದು ಜಾಟ್ ಸಮುದಾಯ ಆಗಲೇ ಒತ್ತಾಯಿಸಿದ್ದರು.

ಗೆಹ್ಲೋಟ್ ಮತ್ತು ಸಿ. ಪಿ. ಜೋಶಿ ಜಂಗಿಕುಸ್ತಿ:

2008 ರ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಸಿ.ಪಿ.ಜೋಶಿ ಮತ್ತು ಗೆಹ್ಲೋಟ್ ನಡುವೆ ಭಾರಿ ರಾಜಕೀಯ ಚಕಮಕಿ ಏರ್ಪಟ್ಟಿತ್ತು. ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಜೋಶಿ ಅವರು ಈ ಹುದ್ದೆಗೆ ಪ್ರಬಲ ಸ್ಪರ್ಧಿಯಾಗಿದ್ದರು. ಆದರೆ, ಕೇವಲ ಒಂದು ಮತದ ಅಂತರದಿಂದ ಚುನಾವಣೆಯಲ್ಲಿ ಸೋತರು. ಹೀಗಾಗಿ ಗೆಹ್ಲೋಟ್ ಅವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಆಗಿನ ಕೇಂದ್ರ ಸಚಿವ ಸಿಸ್ ರಾಮ್ ಒಲಾ, ರಾಜಸ್ಥಾನದ ಮಾಜಿ ಸ್ಪೀಕರ್ ಮದೆರ್ನಾ ಮತ್ತು ಹೊಸದಾಗಿ ಚುನಾಯಿತರಾದ ಶಾಸಕ ಸೋನಾರಾಮ್ ಅವರಂತಹ ಜಾಟ್ ನಾಯಕರು ಮತ್ತೊಮ್ಮೆ ಜಾಟ್ ಸಮುದಾಯದವರೇ ಮುಖ್ಯಮಂತ್ರಿ ಆಗಬೇಕು ಎಂದು ಬಹಿರಂಗವಾಗಿ ಬೇಡಿಕೆ ಇಟ್ಟಿದ್ದರು. ಆದರೆ ಅದು ಫಲಪ್ರದವಾಗಿರಲಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.