ಪಾಟ್ನಾ(ಬಿಹಾರ): ಕರ್ತವ್ಯ ನಿರತ ಠಾಣಾಧಿಕಾರಿ ಸೀಟ್ ಬೆಲ್ಟ್ ಹಾಕದೇ ಪ್ರಯಾಣಿಸಿದ್ದಕ್ಕಾಗಿ ದಂಡ ತೆತ್ತಿರುವ ಘಟನೆ ಪಾಟ್ನಾದಲ್ಲಿ ನಡೆದಿದೆ.
ಪಾಟ್ನಾದ ಶ್ರೀ ಕೃಷ್ಣ ಪುರಿ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ನೀರಜ್ ಕುಮಾರ್ ಸಿಂಗ್ಗೆ ಟ್ರಾಫಿಕ್ ಪೊಲೀಸ್ ದಂಡ ವಿಧಿಸಿದ್ದಾರೆ. ತಮ್ಮ ಅಧಿಕೃತ ಬಳಕೆಯ ವಾಹನದಲ್ಲಿ ಸೀಟ್ ಬೆಲ್ಟ್ ಹಾಕದೇ ಪ್ರಯಾಣಿಸಿದ್ದಕ್ಕಾಗಿ ದಂಡ ತೆತ್ತಿದ್ದಾರೆ.
ಕಾನೂನು ಎಲ್ಲರಿಗೂ ಒಂದೇ. ಕಾನೂನಿನ ಪಾಲನೆಯ ವಿಚಾರವೂ ಎಲ್ಲರಿಗೂ ಅನ್ವಯಿಸುತ್ತದೆ. ಹೀಗಾಗಿ ದಂಡ ವಿಧಿಸುವ ಮೂಲಕ ಟ್ರಾಫಿಕ್ ಪೊಲೀಸ್ ತಮ್ಮ ಕರ್ತವ್ಯ ನಿರ್ವಹಿಸಿದರೆ, ದಂಡ ತೆರುವ ಮೂಲಕ ಠಾಣಾಧಿಕಾರಿ ತಮ್ಮ ಜವಾಬ್ದಾರಿ ಮರೆಯಬಾರದೆಂಬುದನ್ನು ಅರ್ಥಮಾಡಿಕೊಂಡಿದ್ದಾರೆ.