ETV Bharat / bharat

ಪಾಕ್ ಆಕ್ರಮಿತ ಕಾಶ್ಮೀರಿಗಳಿಂದ್ಲೂ ಜನತಾ ಕರ್ಫ್ಯೂಗೆ ಭರಪೂರ ಮೆಚ್ಚುಗೆ: ಪಾಕ್​ ಬಗ್ಗೆ ಹೇಳಿದ್ದೇನು..? - ಡಾ. ಅಮ್ಜದ್​ ಅಯೂಬ್​ ಮಿರ್ಜಾ

ಜನತಾ ಕರ್ಫ್ಯೂಗೆ ದೇಶಾದ್ಯಂತ ಬೆಂಬಲ ವ್ಯಕ್ತವಾಗುತ್ತಿದೆ. ಕೆಲ ಎಡಪಂಥೀಯ ರಾಜಕೀಯ ನಾಯಕರು ಮೋದಿ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂಗೆ ಪಾಕ್​ ಆಕ್ರಮಿತ ಕಾಶ್ಮೀರ(PoK) ಪ್ರದೇಶದ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

janata curfew
ಜನತಾ ಕರ್ಫ್ಯೂಗೆ ಮೆಚ್ಚುಗೆ
author img

By

Published : Mar 22, 2020, 1:41 PM IST

ನವದೆಹಲಿ: ಕೊರೊನಾ ವಿರುದ್ಧ ಸಮರ ಸಾರಿರುವ ಪ್ರಧಾನಿ ಮೋದಿ ಜನತಆ ಕರ್ಫ್ಯೂಗೆ ಬೆಂಬಲ ನೀಡಿರುವುದಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪಾಕ್​ ಆಕ್ರಮಿತ ಕಾಶ್ಮೀರ ಮತ್ತು ಗಿಲ್ಗಿಟ್​, ಬಾಲ್ಟಿಸ್ತಾನದಲ್ಲಿ ಗಡಿಪಾರಾಗಿರುವ ನಾಯಕರು ಮೋದಿ ನಡೆಗೆ ಬೆಂಬಲ ಸೂಚಿಸಿದ್ದಾರೆ. ಪಾಕ್ ಆಕ್ರಮಿತ ಪ್ರದೇಶದ ರಾಜಕೀಯ ನಾಯಕನಾಗಿರುವ ಹಾಗೂ ಗ್ಲಾಸ್ಗೋದಲ್ಲಿ ನೆಲೆಸಿರುವ ಡಾ. ಅಮ್ಜದ್​ ಅಯೂಬ್​ ಮಿರ್ಜಾ '' ಕೊರೊನಾ ವಿರುದ್ಧ ಪ್ರಧಾನಿ ಮೋದಿ ನಡೆ ಪ್ರಶಂಸನಾರ್ಹ ಹಾಗೂ ಗಮನಾರ್ಹ'' ಎಂದು ಹೊಗಳಿದ್ದಾರೆ.

ಪಾಕಿಸ್ತಾನದ ಬಗ್ಗೆಯೂ ಮಾತನಾಡಿರುವ ಅಮ್ಜದ್​ ಪಾಕಿಸ್ತಾನದಲ್ಲಿ ಸೂಕ್ತ ನಾಯಕತ್ವದ ಕೊರತೆಯಿದೆ. ಇದರಿಂದಾಗಿ ರಾಷ್ಟ್ರೀಯ ನೀತಿಗಳನ್ನು ರೂಪಿಸುವಲ್ಲಿ ಪಾಕಿಸ್ತಾನ ವಿಫಲವಾಗುತ್ತಿದೆ ಎಂದು ಆರೋಪಿಸಿದ್ದಾನೆ. ಜೊತೆಗೆ ಕೊರೊನಾ ವೈರಸ್​ ಹರಡುವುದನ್ನು ತಡೆಯಲು ಚೀನಾ ಹಾಗೂ ಗಿಲ್ಗಿಟ್​ ನಡುವಿನ ಗಡಿಯನ್ನು ಮುಚ್ಚಬೇಕು ಎಂದು ಪಾಕಿಸ್ತಾನಕ್ಕೆ ಸಲಹೆ ನೀಡಿದ್ದಾರೆ.​ ಇದರ ಜೊತೆಗೆ ಇನ್ನಿತರ ನಾಯಕರು ಕೂಡಾ ಜನತಾ ಕರ್ಫ್ಯೂಗೆ ಸಕಾರಾತ್ಮಕವಾಗಿ ಮಾತನಾಡಿದ್ದಾರೆ.

ದೇಶದಲ್ಲಿ ಎಡಪಂಥೀಯ ಹಾಗೂ ಬಲಪಂಥೀಯ ನಾಯಕರ ನಡುವೆ ಜನತಾ ಕರ್ಫ್ಯೂಗೆ ತೀವ್ರ ಪರ, ಪರ ವಿರೋಧ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಾಕ್​ ಆಕ್ರಮಿತ ಪ್ರದೇಶದ ನಾಯಕರು ಮೋದಿ ನಡೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿರುವುದು ಗಮನಾರ್ಹವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.