ನವದೆಹಲಿ: ಆಕ್ಸ್‌ಫರ್ಡ್ ಮತ್ತು ಅಸ್ಟ್ರಾಜೆನೆಕಾ ಸಹಭಾಗಿತ್ವದಲ್ಲಿ ಅಭಿವೃದ್ಧಿ ಮಾಡಲಾಗಿರುವ ಕೋವಿಶೀಲ್ಡ್ ಹೆಸರಿನ ಲಸಿಕೆಯ ಕ್ಲಿನಿಕಲ್ ಟ್ರಯಲ್ ಯಶಸ್ವಿಯಾಗಿದ್ದು ಪುಣೆ ಮೂಲದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಲ್ಯಾಬ್ಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಭೇಟಿ ನೀಡಲಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಟೆಕ್ ಶೃಂಗಸಭೆ 2020: ಜನರ ಜೀವನ ಬದಲಿಸಿದ ಡಿಜಿಟಲ್ ಲೋಕ - ಮೋದಿ ಬಣ್ಣನೆ
ಏಳು ಸಂಸ್ಥೆಗಳಿಗೆ ಉಚಿತ ಕ್ಲಿನಿಕಲ್ ಟೆಸ್ಟ್, ಮರುಪರಿಶೀಲನೆ ಹಾಗೂ ವಿಶ್ಲೇಷಣೆಗಾಗಿ ಕೊರೊನಾ ಲಸಿಕೆ ತಯಾರಿಸಲು ಸೆಂಟ್ರಲ್ ಡ್ರಗ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ಅನುಮತಿ ನೀಡಿದೆ. ಇವುಗಳ ಪೈಕಿ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ(SII)ಹಾಗೂ ಜೆನ್ನೋವಾ ಬಯೋಫಾರ್ಮಾಸಿಟಿಕಲ್ಸ್ ಸಹ ಸೇರಿದ್ದು ಶನಿವಾರ ಇದರ ಪರಿಶೀಲನೆ ಮಾಡಲು ಪ್ರಧಾನಿಗಳು ಬರುವುದಾಗಿ ಹಿರಿಯ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
-
PM Narendra Modi will visit Serum Institute of India in Pune on November 28 to review the vaccine production and distribution preparation here: Saurabh Rao, Divisional Commissioner, Pune. #Maharashtra pic.twitter.com/1j8WaBlfja
— ANI (@ANI) November 26, 2020 " class="align-text-top noRightClick twitterSection" data="
">PM Narendra Modi will visit Serum Institute of India in Pune on November 28 to review the vaccine production and distribution preparation here: Saurabh Rao, Divisional Commissioner, Pune. #Maharashtra pic.twitter.com/1j8WaBlfja
— ANI (@ANI) November 26, 2020PM Narendra Modi will visit Serum Institute of India in Pune on November 28 to review the vaccine production and distribution preparation here: Saurabh Rao, Divisional Commissioner, Pune. #Maharashtra pic.twitter.com/1j8WaBlfja
— ANI (@ANI) November 26, 2020
ಪ್ರಧಾನಿ ಮೋದಿ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾಕ್ಕೆ ಶನಿವಾರ ಭೇಟಿ ನೀಡುವ ಬಗ್ಗೆಯೂ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಖಚಿತಪಡಿಸಿದೆ. ಡಿಸೆಂಬರ್ 4 ರಂದು ಸೀರಮ್ ಇನ್‍ಸ್ಟಿಟ್ಯೂಟ್ಆಫ್ ಇಂಡಿಯಾ ಮತ್ತು ಜೆನ್ನೋವಾ ಬಯೋಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ಗೆ 100 ದೇಶಗಳ ರಾಯಭಾರಿಗಳು ಸಹ ಭೇಟಿ ನೀಡಲಿದ್ದಾರೆ ಎಂದು ಪುಣೆ ವಿಭಾಗೀಯ ಆಯುಕ್ತ ಸೌರಭ್ ರಾವ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಮತ್ತೆ ತಲೆದೂರಿದ ಕೋವಿಡ್ ಬಿಕ್ಕಟ್ಟು: ಲಸಿಕೆ ಹಂಚಿಕೆ ಚರ್ಚಿಸಲು ಸಿಎಂಗಳ ಜತೆ ಪ್ರಧಾನಿ ಮೋದಿ ಸಭೆ
ಮೊದಲಿಗೆ ಎಷ್ಟು ಜನರಿಗೆ ವ್ಯಾಕ್ಸಿನ್ ನೀಡಬಹುದು, ಅದರ ಬಿಡುಗಡೆ ಹೇಗೆ, ಉತ್ಪಾದನೆ ಹಾಗೂ ವಿತರಣಾ ವ್ಯವಸ್ಥೆಯನ್ನು ಪರಿಶೀಲಿಸುವ ಉದ್ದೇಶವನ್ನು ಪ್ರಧಾನಿ ಮೋದಿ ಹೊಂದಿದ್ದಾರೆ.