ETV Bharat / bharat

ದೀಪಾವಳಿಗೆ ನಮ್ಮ ದೇಶದ ಸೈನಿಕರಿಗಾಗಿ ದೀಪ ಹಚ್ಚಿ: ಪ್ರಧಾನಿ ಮೋದಿ ಮನವಿ - ಕೊರೊನಾ ವಾರಿಯರ್ಸ್​​​ಗೆ ವಂದನೆ ಅರ್ಪಣೆ

ದೇಶದಲ್ಲಿ ನಮ್ಮನ್ನು ಕಾಯುತ್ತಿರುವ ಸೈನಿಕರಿಗಾಗಿ ನಾವು ದೀಪಾವಳಿಯಂದು ಸೈನಿಕರಿಗಾಗಿ ದೀಪ ಹಚ್ಚಬೇಕೆಂದು ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ.

pm modi
ಪ್ರಧಾನಿ ಮೋದಿ
author img

By

Published : Nov 13, 2020, 9:12 PM IST

ನವದೆಹಲಿ: ಗಡಿಯಲ್ಲಿ ರಾಷ್ಟ್ರವನ್ನು ಕಾಪಾಡುವ ಸೈನಿಕರಿಗೆ ಧನ್ಯವಾದ ಸಲ್ಲಿಸುವ ಸಲುವಾಗಿ ದೀಪಾವಳಿಯಂದು ದೀಪ ಬೆಳಗಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಮನವಿ ಮಾಡಿದ್ದಾರೆ.

ಟ್ವಿಟರ್​ನಲ್ಲಿ ವಿಡಿಯೋ ಸಂದೇಶ ಹಂಚಿಕೊಂಡಿರುವ ಪ್ರಧಾನಿ ಮೋದಿ, ಕೋವಿಡ್ ವಿರುದ್ಧ ಹೋರಾಡುತ್ತಿರುವ ಸೈನಿಕರು, ಪೊಲೀಸ್ ಅಧಿಕಾರಿಗಳು, ಆರೋಗ್ಯ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಇದೇ ವೇಳೆ ಹಬ್ಬದ ಸಮಯದಲ್ಲಂತೂ ನಮ್ಮ ಗಡಿಗಳನ್ನು ಕಾಪಾಡುತ್ತಿರುವ, ಭಾರತ ಮಾತೆಗೆ ಸೇವೆ ಸಲ್ಲಿಸುವ ನಮ್ಮ ಕೆಚ್ಚೆದೆಯ ಸೈನಿಕರನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಅವರನ್ನು ನೆನಪಿಸಿಕೊಂಡ ನಂತರವೇ ನಾವು ದೀಪಾವಳಿಯನ್ನು ಆಚರಿಸಬೇಕು. ಅವರಿಗಾಗಿ ನಾವು ದೀಪ ಬೆಳಗಿಸಬೇಕು ಎಂದು ಜನತೆಯಲ್ಲಿ ಮೋದಿ ಮನವಿ ಮಾಡಿದ್ದಾರೆ.

ಒಂದೊಂದು ದೀಪವೂ ಸೈನಿಕರಿಗೆ ಒಂದೊಂದು ಸೆಲ್ಯೂಟ್​ ಇದ್ದಂತೆ. ಅವರ ಕುಟುಂಬಗಳಿಗೆ ನಾವು ಕೃತಜ್ಞರಾಗಿರೋಣ ಎಂದು ಮೋದಿ ತಮ್ಮ ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.