ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಣಿಪುರ ನೀರು ಸರಬರಾಜು ಯೋಜನೆಯ ಕಾಮಗಾರಿಯನ್ನು ಉದ್ಘಾಟಿಸಿದರು.
ಈ ನೀರು ಸರಬರಾಜು ಯೋಜನೆ ಮಣಿಪುರದ ಮಹಿಳೆಯರಿಗೆ ರಕ್ಷಾ ಬಂಧನದ ಉಡುಗೊರೆಯಾಗಿದೆ ಎಂದು ಕಾಮಗಾರಿಗೆ ಅಡಿಪಾಯ ಹಾಕಿದ ಪ್ರಧಾನಿ ಮೋದಿ ಹೇಳಿದ್ದಾರೆ.
ಯೋಜನೆಯನ್ನು ಸ್ಥಳೀಯ ಆಡಳಿತ ಮತ್ತು ಜನರ ಸಹಕಾರದಿಂದ ವಿನ್ಯಾಸಗೊಳಿಸಲಾಗಿದ್ದು, ಇದು ವಿಕೇಂದ್ರೀಕರಣಕ್ಕೆ ಉತ್ತಮ ಉದಾಹರಣೆಯಾಗಿದೆ. ಇದು ಸ್ಥಳೀಯ ನಿವಾಸಿಗಳಿಗೆ ಉದ್ಯೋಗ ಒದಗಿಸಲಿದೆ ಎಂದು ಅವರು ಇದೇ ವೇಳೆ ಹೇಳಿದರು.
ಒಂದು ಲಕ್ಷಕ್ಕೂ ಅಧಿಕ ಮನೆಗಳಿಗೆ ನೀರು ಪೂರೈಸಲು ಮನೆಗಳಿಗೆ ಶುದ್ಧನೀರಿನ ಟ್ಯಾಪ್ ಸಂಪರ್ಕಗಳಿಗಾಗಿ (ಎಫ್‌ಎಚ್‌ಟಿಸಿ) ಮಣಿಪುರಕ್ಕೆ 'ಜಲ್ ಜೀವನ್ ಮಿಷನ್' ಅಡಿಯಲ್ಲಿ ಕೇಂದ್ರ ಸರ್ಕಾರ ಹಣ ಒದಗಿಸಿದೆ.
ಮಣಿಪುರ ನೀರು ಸರಬರಾಜು ಯೋಜನೆಯನ್ನು ಗ್ರೇಟರ್ ಇಂಫಾಲ್ ಯೋಜನಾ ಪ್ರದೇಶ, ಮಣಿಪುರದ 16 ಜಿಲ್ಲೆಗಳ 25 ಪಟ್ಟಣಗಳ ಹಾಗೂ ಗ್ರಾಮೀಣ ಪ್ರದೇಶಗಳ ಮನೆಗಳಿಗೆ ನೀರು ಒದಗಿಸಲು ವಿನ್ಯಾಸಗೊಳಿಸಲಾಗಿದೆ.
2024ರ ವೇಳೆಗೆ 'ಹರ್ ಘರ್ ಜಲ್' ಗುರಿಯನ್ನು ಸಾಧಿಸಲು ರಾಜ್ಯ ಸರ್ಕಾರವು ಮಾಡುತ್ತಿರುವ ಪ್ರಯತ್ನಗಳಲ್ಲಿ ಈ ಯೋಜನೆಯು ಒಂದು ಪ್ರಮುಖವಾಗಿದೆ.