ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಜನ್ ಆಂದೋಲನ್ ಕ್ಯಾಂಪೇನ್ಗೆ ಚಾಲನೆ ನೀಡಲಿದ್ದಾರೆ. ಮುಂದಿನ ಎರಡು ತಿಂಗಳ ಕಾಲ ದೇಶದಲ್ಲಿ ಹಬ್ಬಗಳು ಹೆಚ್ಚಾಗಿರುವ ಕಾರಣ ಜನ್ ಆಂದೋಲನ ಕ್ಯಾಂಪೇನ್ಗೆ ಮೋದಿ ಚಾಲನೆ ನೀಡಲು ನಿರ್ಧರಿಸಿದ್ದಾರೆ.
ಈ ಕ್ಯಾಂಪೆನ್ ಉದ್ದೇಶ ಜನರು ಕೊರೊನಾ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಹಾಗೂ ಇತರರಿಗೆ ಮಾಹಿತಿ ನೀಡುವುದಾಗಿದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಸ್ಯಾನಿಟೈಸರ್ ಬಳಕೆಯು ಜನಾಂದೋಲನದ ಪ್ರಮುಖ ಆಂಶವಾಗಿದೆ.
ಮುಂಬರುವ ಹಬ್ಬಗಳು, ಚಳಿಗಾಲದ ಅವಧಿ ಮತ್ತು ಆರ್ಥಿಕತೆ ಮತ್ತಷ್ಟು ಸಡಿಲಿಕೆ ಮಾಡುವ ದೃಷ್ಟಿಯಿಂದ ಪ್ರಧಾನಿ ಈ ಕ್ಯಾಂಪೇನ್ಗೆ ಚಾಲನೆ ನೀಡಲಿದ್ದಾರೆ. ದೇಶದ ಕೆಲ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಿರುವ ಕಾರಣ ಸಂದೇಶ ರವಾನೆ, ಮಾಧ್ಯಮ ಬಳಿಸಿಕೊಂಡು ಮಾಹಿತಿ ಪ್ರಸಾರ ಮಾಡುವುದು ಇದರ ಪ್ರಮುಖ ಉದ್ದೇಶವಾಗಿದೆ.
ಹೋರ್ಡಿಂಗ್ಗಳು, ಗೋಡೆ ವರ್ಣಚಿತ್ರಗಳು, ಎಲೆಕ್ಟ್ರಾನಿಕ್ ಬೋರ್ಡ್ ಬಳಕೆ ಮಾಡುವುದರ ಜೊತೆಗೆ ರಾಷ್ಟ್ರೀಯ ಪ್ರಭಾವಿ ವ್ಯಕ್ತಿಗಳ ಪಾಲ್ಗೊಳ್ಳುವಿಕೆ, ಜಾಗೃತಿ ಆಡಿಯೋ ಸಂದೇಶ ಹಾಗೂ ಕರಪತ್ರಗಳು ಇದರಲ್ಲಿ ಸೇರಿವೆ.