ನವದೆಹಲಿ: ಪ್ರಧಾನಿ ಮೋದಿ ನಾಳೆ 'ಮನ್ ಕೀ ಬಾತ್'ನ 68ನೇ ಸಂಚಿಕೆಯಲ್ಲಿ ಭಾಗಿಯಾಗಿ ಮಾತನಾಡಲಿದ್ದು, ಬೆಳಗ್ಗೆ 11 ಗಂಟೆಗೆ ಆಕಾಶವಾಣಿಯಲ್ಲಿ ಪ್ರಸಾರಗೊಳ್ಳಲಿದೆ.
ಈ ಹಿಂದಿನ ಸರಣಿಯಲ್ಲಿ ಮಾತನಾಡಿದ್ದ ಅವರು, ದೇಶದ ಜನರಿಂದ ತಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನು ಕೋರಿದ್ದರು. ಹೀಗಾಗಿ ನಾಳೆಯ ಸಂಚಿಕೆಯಲ್ಲಿ ಅವರು ಜನರೊಂದಿಗೆ ಸಂವಾದ ನಡೆಸುವ ಸಾಧ್ಯತೆ ಇದೆ.
-
Tune in at 11 AM on 30th August. #MannKiBaat pic.twitter.com/PuaZEqmT78
— Narendra Modi (@narendramodi) August 29, 2020 " class="align-text-top noRightClick twitterSection" data="
">Tune in at 11 AM on 30th August. #MannKiBaat pic.twitter.com/PuaZEqmT78
— Narendra Modi (@narendramodi) August 29, 2020Tune in at 11 AM on 30th August. #MannKiBaat pic.twitter.com/PuaZEqmT78
— Narendra Modi (@narendramodi) August 29, 2020
ಆಗಸ್ಟ್ 18ರಂದು ಟ್ವೀಟ್ ಮಾಡಿದ್ದ ಮೋದಿ, ಮುಂದಿನ ಬಾರಿ 'ಮನ್ ಕಿ ಬಾತ್'ನಲ್ಲಿ ಯಾವ ವಿಚಾರದ ಬಗ್ಗೆ ಚರ್ಚಿಸಬೇಕೆಂದು ನೀವು ಭಾವಿಸುತ್ತೀರಿ?, ನಿಮ್ಮ ಸಂದೇಶವನ್ನು 1800-11-7800 ಗೆ ಕಳುಹಿಸಬಹುದು ಅಥವಾ ನಮೋ ಅಪ್ಲಿಕೇಶನ್ ಅಥವಾ ಮೈಗೋವ್ ಅಪ್ಲಿಕೇಶನ್‌ನಲ್ಲಿ ತಿಳಿಸಬಹುದು ಎಂದು ತಿಳಿಸಿದ್ದರು.
ಈ ಹಿಂದಿನ ಮನದ ಮಾತಿನಲ್ಲಿ ಅವರು ಕಾರ್ಗಿಲ್ ವಿಜಯ ದಿವಸ್ ಹಾಗೂ ಭಾರತೀಯ ಯೋಧರ ಧೈರ್ಯ ಕೊಂಡಾಡಿದ್ದರು.
ದೇಶದಲ್ಲಿ ಜಾರಿಯಲ್ಲಿರುವ ಲಾಕ್ಡೌನ್ 3.0 ಮುಕ್ತಾಯಗೊಳ್ಳಲು ಕೇವಲ ಎರಡು ದಿನ ಬಾಕಿ ಉಳಿದಿದೆ. ಈ ಮಧ್ಯೆ ಪ್ರಧಾನಿ ಕೆಲವು ಮಹತ್ವದ ವಿಚಾರ ಹಂಚಿಕೊಳ್ಳುವ ಸಾಧ್ಯತೆ ಇದೆ.