ETV Bharat / bharat

ರೈತರು-ಕಾರ್ಮಿಕರ ಹೆಸರಲ್ಲಿ ಕಾಂಗ್ರೆಸ್​ ಪ್ರಣಾಳಿಕೆ ಟೊಳ್ಳು ಎಂಬುದನ್ನು 'ಕಾಲದ ಪರೀಕ್ಷೆ' ಸಾಬೀತುಪಡಿಸಿದೆ: ಪಿಎಂ ಮೋದಿ - ಪ್ರಧಾನಿ ನರೇಂದ್ರ ಮೋದಿ

ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಅನೇಕ ದಶಕಗಳವರೆಗೆ ರೈತರು ಮತ್ತು ಕಾರ್ಮಿಕರ ಹೆಸರಿನಲ್ಲಿ ದೊಡ್ಡ ದೊಡ್ಡ ಘೋಷಣೆಗಳನ್ನು ಹೊರಡಿಸಿ, ದೊಡ್ಡ ದೊಡ್ಡ ಪ್ರಣಾಳಿಕೆ ಬರೆಯಲಾಯಿತು. ಆದರೆ 'ಕಾಲದ ಪರೀಕ್ಷೆ' ಆ ಎಲ್ಲ ವಿಷಯಗಳು ಎಷ್ಟು ಟೊಳ್ಳಾಗಿತ್ತು ಎಂಬುದನ್ನು ಸಾಬೀತುಪಡಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪರೋಕ್ಷವಾಗಿ ಕಾಂಗ್ರೆಸ್​ಗೆ ಟಾಂಗ್​ ನೀಡಿದರು.

PM Narendra Modi
ಪ್ರಧಾನಿ ನರೇಂದ್ರ ಮೋದಿ
author img

By

Published : Sep 25, 2020, 12:37 PM IST

ನವದೆಹಲಿ: ಪಂಡಿತ್​ ದೀನ ದಯಾಳ್​​ ಉಪಾಧ್ಯಾಯರ ಜನ್ಮ ದಿನಾಚರಣೆ ಹಿನ್ನೆಲೆ 'ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯ ಪ್ರತಿಷ್ಠಾನ ದಿನ'ದ ಅಂಗವಾಗಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್​​ ಮೂಲಕ ಮಾತನಾಡಿದರು.

ಭಾರತವನ್ನು ಒಂದು ಉತ್ತಮ ದೇಶವಾಗಿ ಮತ್ತು ಸಮಾಜವಾಗಿ ಮಾಡಲು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜೀ ಅವರ ಕೊಡುಗೆಗಳು ಯುವ ಪೀಳಿಗೆಗೆ ಸ್ಫೂರ್ತಿ ನೀಡಿದೆ. ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರಿಗೆ ಅವರು ತೋರಿಸಿದ ಮಾರ್ಗವು ನಮ್ಮಲ್ಲಿ ವಿಶ್ವಾಸವನ್ನು ಮೂಡಿಸುತ್ತದೆ ಎಂದು ಮೋದಿ ದೀನ ದಯಾಳ್​ರನ್ನು ಸ್ಮರಿಸಿದರು.

ಹಿಂದಿನ ಸರ್ಕಾರಗಳು ರೈತರು, ಕಾರ್ಮಿಕರಿಗೆ ಎಂದಿಗೂ ಅರ್ಥವಾಗದ ಭರವಸೆ ನೀಡಿ ಕಾನೂನುಗಳನ್ನು ತಂದಿವೆ. ಆದರೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಈ ಪರಿಸ್ಥಿತಿಯನ್ನು ಬದಲಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ರೈತರ ಕಲ್ಯಾಣಕ್ಕಾಗಿ ಸುಧಾರಣೆಗಳನ್ನು ತಂದಿದೆ ಎಂದು ಕೃಷಿ ಮಸೂದೆಗಳ ಅಂಗೀಕಾರದ ಕುರಿತು ಪ್ರಧಾನಿ ಇದೇ ವೇಳೆ ಸ್ಪಷ್ಟನೆ ನೀಡಿದರು.

ಕಳೆದ ಕೆಲವು ವರ್ಷಗಳಲ್ಲಿ ಎನ್‌ಡಿಎ ಸರ್ಕಾರ ರೈತರ ಹಾಗೂ ಬ್ಯಾಂಕುಗಳ ನಡುವೆ ಸಂಪರ್ಕ ಕಲ್ಪಿಸಲು ಬಹಳಷ್ಟು ಪ್ರಯತ್ನಗಳನ್ನು ಮಾಡಿದೆ. 'ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ'ಯಡಿ ಒಟ್ಟು 10 ಲಕ್ಷ ಕೋಟಿ ರೈತರ ಖಾತೆಗೆ 1 ಲಕ್ಷ ಕೋಟಿ ರೂ. ಜಮೆ ಮಾಡಲಾಗಿದೆ. ಹೆಚ್ಚೆಚ್ಚು ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ಒದಗಿಸುವ ನಮ್ಮ ಪ್ರಯತ್ನದಿಂದ ರೈತರು ಸುಲಭವಾಗಿ ಸಾಲ ಪಡೆಯಬಹುದು ಎಂದರು.

ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಅನೇಕ ದಶಕಗಳವರೆಗೆ ರೈತರು ಮತ್ತು ಕಾರ್ಮಿಕರ ಹೆಸರಿನಲ್ಲಿ ದೊಡ್ಡ ದೊಡ್ಡ ಘೋಷಣೆಗಳನ್ನು ಹೊರಡಿಸಿ, ದೊಡ್ಡ ದೊಡ್ಡ ಪ್ರಣಾಳಿಕೆ ಬರೆಯಲಾಯಿತು. ಆದರೆ 'ಕಾಲದ ಪರೀಕ್ಷೆ' ಆ ಎಲ್ಲ ವಿಷಯಗಳು ಎಷ್ಟು ಟೊಳ್ಳಾಗಿತ್ತು ಎಂಬುದನ್ನು ಸಾಬೀತುಪಡಿಸಿದೆ. ದೇಶದ ಜನರು ಈಗ ಇದನ್ನು ಚೆನ್ನಾಗಿ ಅರಿತಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್​ಗೆ ಮೋದಿ ಟಾಂಗ್​ ನೀಡಿದರು.

ಎಲ್ಲಾ ಬಿಜೆಪಿ ಕಾರ್ಯಕರ್ತರು ಪ್ರತಿಯೊಬ್ಬ ರೈತರನ್ನು ಸಂಪರ್ಕಿಸಿ, ನೂತನ ಕೃಷಿ ಸುಧಾರಣೆಗಳ ಮಹತ್ವ ಮತ್ತು ಜಟಿಲತೆಗಳ ಬಗ್ಗೆ ಸರಳೀಕೃತ ಭಾಷೆಯಲ್ಲಿ ತಿಳಿಸಬೇಕು. ಹೇಗೆ ಈ ಸುಧಾರಣೆಗಳು ರೈತರನ್ನು ಸಬಲೀಕರಣಗೊಳಿಸಲು ಸಹಕರಿಸುತ್ತವೆ ಎಂಬುದನ್ನು ತಿಳಿಸಬೇಕು. ಪ್ರಸ್ತುತ ಜಗತ್ತಿನಲ್ಲಿ ಹರಡುತ್ತಿರುವ ಸುಳ್ಳು ಮತ್ತು ವದಂತಿಗಳನ್ನು ಇವು ನಾಶ ಮಾಡಬೇಕೆಂದು ಪಕ್ಷದ ಕಾರ್ಯಕರ್ತರಿಗೆ ಮೋದಿ ಕರೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.