ನವದೆಹಲಿ: ಒಂದು ಕೈಯಲ್ಲಿ ಕವರ್ ಹಾಗು ವಸ್ತುವನ್ನು ಹಿಡಿದಿದ್ದ ಮೋದಿ, ಮತ್ತೊಂದು ಕೈಯಲ್ಲಿ ಸಮುದ್ರದ ದಡದಲ್ಲಿ ಬಿದ್ದಿರುವ ಕಸ ಆರಿಸಿ ಕವರ್ಗೆ ಹಾಕುತ್ತಿದ್ದರು. ಈ ವಿಡಿಯೋ ಕಂಡ ನೆಟ್ಟಿಗರು ಮೋದಿ ಅವರ ಸ್ವಚ್ಛತಾ ಕಾರ್ಯಕ್ಕಿಂತ ಅವರು ಕೈಯಲ್ಲಿ ಹಿಡಿದಿದ್ದ ವಸ್ತುವಿನ ಬಗ್ಗೆಯೇ ಹೆಚ್ಚು ತಲೆ ಕೆಡಿಸಿಕೊಂಡಿದ್ದರು. ನೆಟ್ಟಿಗರ ಪ್ರಶ್ನೆಗೆ ಪ್ರಧಾನಿ ಮೋದಿಯೇ ಉತ್ತರ ನೀಡಿದ್ದಾರೆ.
-
Since yesterday, many of you have been asking - what is it that I was carrying in my hands when I went plogging at a beach in Mamallapuram.
— Narendra Modi (@narendramodi) October 13, 2019 " class="align-text-top noRightClick twitterSection" data="
It is an acupressure roller that I often use. I have found it to be very helpful. pic.twitter.com/NdL3rR7Bna
">Since yesterday, many of you have been asking - what is it that I was carrying in my hands when I went plogging at a beach in Mamallapuram.
— Narendra Modi (@narendramodi) October 13, 2019
It is an acupressure roller that I often use. I have found it to be very helpful. pic.twitter.com/NdL3rR7BnaSince yesterday, many of you have been asking - what is it that I was carrying in my hands when I went plogging at a beach in Mamallapuram.
— Narendra Modi (@narendramodi) October 13, 2019
It is an acupressure roller that I often use. I have found it to be very helpful. pic.twitter.com/NdL3rR7Bna
ಬೆಳ್ಳಂಬೆಳಗ್ಗೆ ಕಸ ಆಯ್ದ ಪ್ರಧಾನಿ.. ಸಮುದ್ರ ತೀರದಲ್ಲೂ ಮೋದಿ ಸ್ವಚ್ಛತಾ ಅಭಿಯಾನ!
ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ, ನಾನು ಬೀಚ್ನಲ್ಲಿ ಕಸ ಆರಿಸುವಾಗ ನನ್ನ ಕೈಯಲ್ಲಿ ಹಿಡಿದಿದ್ದ ವಸ್ತುವಿನ ಬಗ್ಗೆ ಸಾಕಷ್ಟು ಜನ ಪ್ರಶ್ನೆ ಕೇಳುತ್ತಿದ್ದಾರೆ. ಇದು ನಾನು ಹೆಚ್ಚಾಗಿ ಬಳಸುವ ಆಕ್ಯುಪ್ರೆಶರ್ ರೋಲರ್, ಇದು ನನಗೆ ತುಂಬಾ ಸಹಾಯಕವಾದುದಾಗಿದೆ ಎಂದು ತಿಳಿಸಿದ್ದಾರೆ.
ಏನಿದು ಆಕ್ಯುಪ್ರೆಶರ್ ರೋಲರ್?
ಅಕ್ಯುಪ್ರೆಶರ್ ರೋಲರ್ ರಿಫ್ಲೆಕ್ಸೋಲಜಿಯ ತಂತ್ರ ಹೊಂದಿದೆ. ಇದು ಒತ್ತಡ ನಿವಾರಿಸಲು ಮತ್ತು ಅನಾರೋಗ್ಯಕ್ಕೆ ಚಿಕಿತ್ಸೆ ನೀಡಲು ಬಳಸುವ ಮಸಾಜ್ ಸಾಧನವಾಗಿದೆ. ಕಾಲುಗಳು, ಕೈಗಳು ಮತ್ತು ತಲೆಯ ಮೇಲೆ ಪ್ರತಿಫಲಿತ ಬಿಂದುಗಳಿವೆ ಎಂಬ ಸಿದ್ಧಾಂತವನ್ನು ಆಧರಿಸಿದೆ. ಇದು ದೇಹದ ವಿವಿಧ ಭಾಗಗಳು ಮತ್ತು ಅಂಗಗಳಿಗೆ ಉಂಟಾಗುವ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬಳಸುವ ಸಾಧನವಾಗಿದೆ.
ಆಕ್ಯುಪ್ರೆಶರ್ ರೋಲರ್ನ ಉಪಯೋಗವೇನು?
ಆಕ್ಯುಪ್ರೆಶರ್ ರೋಲರ್ ಪ್ರಚೋದನೆ ಮತ್ತು ರಕ್ತಪರಿಚಲನೆಯನ್ನು ಆಧರಿಸಿದ ಸಾಧನವಾಗಿದೆ. ಇದು ನಮ್ಮ ಕೈ ಮತ್ತು ಕಾಲುಗಳಲ್ಲಿನ ಸಾವಿರಾರು ನರಗಳನ್ನು ಉತ್ತೇಜಿಸುತ್ತದೆ. ಇದರಿಂದಾಗಿ ನಮ್ಮ ದೇಹದಲ್ಲಿ ರಕ್ತದ ಹರಿವು ಹೆಚ್ಚಾಗುತ್ತದೆ. ಜೊತೆಗೆ ಒತ್ತಡ, ಉದ್ವೇಗವನ್ನು ನಿವಾರಿಸಲು ಸಹಾಯ ಮಾಡುತ್ತದೆ.