ETV Bharat / bharat

ನ. 28ರಂದು ಗುಜರಾತ್​ಗೆ ಪ್ರಧಾನಿ ಮೋದಿ ಭೇಟಿ... ಕೊರೊನಾ ಲಸಿಕೆ ಬಗ್ಗೆ ಘೋಷಣೆ ಸಾಧ್ಯತೆ! - ಜೈಕೋವ್​-ಡಿ ವ್ಯಾಕ್ಸಿನ್ ಲೇಟೆಸ್ಟ್ ನ್ಯೂಸ್

ಪ್ರಧಾನಿ ನರೇಂದ್ರ ಮೋದಿ ನವೆಂಬರ್ 28ರಂದು ಗುಜರಾತ್‌ಗೆ ಭೇಟಿ ನೀಡುವ ಸಾಧ್ಯತೆ ಇದ್ದು, ಅಂದೇ ಕೋವಿಡ್ ವ್ಯಾಕ್ಸಿನ್​ ಬಗ್ಗೆ ಘೋಷಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.

PM Modi Likely To Visit Gujarat On 28th
ನ.28 ಗುಜರಾತ್​ಗೆ ಭೇಟಿ ನೀಡಲಿದ್ದಾರೆ ಮೋದಿ
author img

By

Published : Nov 26, 2020, 9:29 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಶನಿವಾರ (ನ.28) ಗುಜರಾತ್‌ಗೆ ಭೇಟಿ ನೀಡುವ ಸಾಧ್ಯತೆ ಇದ್ದು, ಕೊರೊನಾ ವ್ಯಾಕ್ಸಿನ್​ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಅಹಮದಾಬಾದ್​ನಲ್ಲಿರುವ ಝೈಡಸ್ ಪ್ಲಾಂಟ್​ಗೆ ಮೋದಿ ಭೇಟಿ ನೀಡಲಿದ್ದು, ಗುಜರಾತ್‌ನಿಂದ ಕೊರೊನಾ ಲಸಿಕೆ ಕುರಿತು ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಝೈಡಸ್‌ ಸಂಸ್ಥೆ ಅಭಿವೃದ್ಧಿಪಡಿಸುತ್ತಿರುವ ಝೈಕೋವ್​-ಡಿ ವ್ಯಾಕ್ಸಿನ್ ಅಂತಿಮ ಹಂತದ ಪರೀಕ್ಷೆ ತಲುಪಿದ್ದು, ಪ್ರಧಾನಿ ಮೋದಿ ಶೀಘ್ರದಲ್ಲೇ ದೊಡ್ಡ ಘೋಷಣೆ ಮಾಡುವ ಸಾಧ್ಯತೆ ಇದೆ.

ಪ್ರಧಾನಿ ಮೋದಿ ಅದೇ ದಿನ ಹೈದರಾಬಾದ್​ಗೆ ಆಗಮಿಸುತ್ತಿದ್ದು, ಕೋವ್ಯಾಕ್ಸಿನ್ ಲಸಿಕೆಯ ಪ್ರಗತಿ ಪರಿಶೀಲಿಸಲು ಭಾರತ್ ಬಯೋಟೆಕ್​ಗೆ ಭೇಟಿ ನೀಡಲಿದ್ದಾರೆ. ಕೋವ್ಯಾಕ್ಸಿನ್ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ಭಾರತ್ ಬಯೋಟೆಕ್​ನಲ್ಲಿ ನಡೆಯುತ್ತಿವೆ. ಭೇಟಿ ವೇಳೆ ಲಸಿಕೆಯ ಕೆಲಸದ ವಿವರಗಳ ಬಗ್ಗೆ ತಿಳಿದುಕೊಳ್ಳಲಿದ್ದಾರೆ ಎನ್ನಲಾಗಿದೆ.

ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯಿಂದಾಗಿ ಮೋದಿಯವರ ಹೈದರಾಬಾದ್ ಭೇಟಿ ಕುತೂಹಲ ಮೂಡಿಸಿದೆ. ಅವರು ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತಾರೋ ಇಲ್ಲವೋ ಎಂಬ ಬಗ್ಗೆ ಮಾಹಿತಿ ಇಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.