ETV Bharat / bharat

ವಿಶ್ವದ ನಕ್ಷೆಯಲ್ಲಿ ಅಂಡಮಾನ್- ನಿಕೋಬಾರ್​ಗೆ ಪ್ರಮುಖ ಸ್ಥಾನ ಸಿಗಲಿದೆ: ಪಿಎಂ ಮೋದಿ - ಪೋರ್ಟ್ ಬ್ಲೇರ್

ಚೆನ್ನೈ- ಅಂಡಮಾನ್- ನಿಕೋಬಾರ್ ಜಲಾಂತರ್ಗಾಮಿ ಕೇಬಲ್ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದರು.

PM Modi
ಪಿಎಂ ಮೋದಿ
author img

By

Published : Aug 10, 2020, 1:02 PM IST

ಪೋರ್ಟ್ ಬ್ಲೇರ್ (ಅಂಡಮಾನ್ ಮತ್ತು ನಿಕೋಬಾರ್): ಮೊಟ್ಟ ಮೊದಲ ಬಾರಿಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಸಂಪರ್ಕ ಒದಗಿಸುವ ಜಲಾಂತರ್ಗಾಮಿ ಆಪ್ಟಿಕಲ್ ಫೈಬರ್ ಕೇಬಲ್ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದರು.

2,312 ಕಿಲೋ ಮೀಟರ್ ಅಂತರದಲ್ಲಿ ಚೆನ್ನೈ - ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ (CANI) ಅತಿ ವೇಗದ ಬ್ರಾಡ್‌ಬಾಂಡ್​​​ ಸಂಪರ್ಕವನ್ನು ಒದಗಿಸುವ ಜಲಾಂತರ್ಗಾಮಿ ಆಪ್ಟಿಕಲ್ ಫೈಬರ್ ಕೇಬಲ್ ಯೋಜನೆಗೆ 2018ರ ಡಿಸೆಂಬರ್ 30 ರಂದೇ ಪಿಎಂ ಮೋದಿ ಅಡಿಪಾಯ ಹಾಕಿದ್ದರು.

ಚೆನ್ನೈ- ಅಂಡಮಾನ್- ನಿಕೋಬಾರ್ ಜಲಾಂತರ್ಗಾಮಿ ಕೇಬಲ್ ಯೋಜನೆ

ವಿಡಿಯೋ ಕಾನ್ಫರೆನ್ಸ್​​ ಮೂಲಕ ಯೋಜನೆಯನ್ನು ಉದ್ಘಾಟಸಿದ ಬಳಿಕ ಮಾತನಾಡಿದ ಪ್ರಧಾನಿ, ನಮ್ಮ ಈ ಪ್ರಯತ್ನ ಅಂಡಮಾನ್ ಮತ್ತು ನಿಕೋಬಾರ್‌ಗೆ ಹಾಗೂ ಅಲ್ಲಿನ ಜನರಿಗೆ ಹೊಸ ಸೌಲಭ್ಯಗಳನ್ನು ಮಾತ್ರ ಕಲ್ಪಿಸಿಲ್ಲ, ವಿಶ್ವದ ನಕ್ಷೆಯಲ್ಲಿ ಪ್ರಮುಖ ಸ್ಥಾನವನ್ನೂ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.

ಈ ಯೋಜನೆಯು ಚೆನ್ನೈನಿಂದ ಪೋರ್ಟ್ ಬ್ಲೇರ್ ಮತ್ತು ಇತರ ಏಳು ದ್ವೀಪಗಳಾದ ಸ್ವರಾಜ್ ಡೀಪ್ (ಹ್ಯಾವ್ಲಾಕ್), ಲಾಂಗ್ ಐಲ್ಯಾಂಡ್, ರಂಗತ್, ಹಟ್​ ಬೇ (ಲಿಟಲ್ ಅಂಡಮಾನ್), ಕಮೋರ್ಟಾ, ಕಾರ್ ನಿಕೋಬಾರ್ ಮತ್ತು ಕ್ಯಾಂಪ್​ಬೆಲ್​ ಬೇ (ಗ್ರೇಟ್ ನಿಕೋಬಾರ್)ಗೆ ಸಂಪರ್ಕವನ್ನು ಕಲ್ಪಿಸುತ್ತದೆ, ಟೆಲಿಕಾಂ ಸೇವೆಗಳನ್ನು ಒದಗಿಸುತ್ತದೆ.

ಜಲಾಂತರ್ಗಾಮಿ ಆಪ್ಟಿಕಲ್ ಕೇಬಲ್ ಎಂದರೆ ಸಾಗರ ಮತ್ತು ಸಮುದ್ರದ ಉದ್ದಕ್ಕೂ ದೂರಸಂಪರ್ಕ ಸಂಕೇತಗಳನ್ನು ರವಾನಿಸಲು ಭೂ-ಆಧಾರಿತ ನಿಲ್ದಾಣಗಳ ನಡುವೆ ಸಮುದ್ರತಳದಲ್ಲಿ ಹಾಕಿದ ಕೇಬಲ್ ಆಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.